ಬೆಂಗಳೂರು ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ 4-2 ಅಂತರದ ಮುನ್ನಡೆ

ಸಿಲ್ವಾ, ಪಾರ್ತಲು, ಡಿಮಾಸ್ ಮತ್ತು ಛೇತ್ರಿ ಗೋಲ್ ಗಳಿಕೆಯ ಗೆಲುವಿನಿಂದ ಬ್ಲೂಸ್ ಅಂಕಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ಮರಳಿದೆ.

ಗೋವಾದ ಫತೋರ್ದಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿಶಿಷ್ಟ ಶೈಲಿಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ತಮ್ಮ ಪ್ರಾಬಲ್ಯ ಮುಂದುವರೆಸಿದೆ. ಕೇರಳ ಆರಂಭಿಕ ಹಂತದಲ್ಲೇ ರಾಹುಲ್ ಕೆಪಿ ಗೋಲಿನ ಮೂಲಕ ಮುನ್ನುಗ್ಗಿದರೆ ಕ್ಲೀಟನ್ ಸಿಲ್ವಾ ಅವರು ಬೆಂಗಳೂರು ಪರ ಪ್ರತ್ಯುತ್ತರವಾಗಿ ಗೋಲ್ ಗಳಿಸಿದರು. ಪಂದ್ಯದ ಪುನರಾರಂಭದ ನಂತರ ಬ್ಲೂಸ್ ವೇಗವನ್ನು ಹೆಚ್ಚಿಸಿಕೊಂಡು, ಎರಿಕ್ ಪಾರ್ತಲು ಮತ್ತು ಡಿಮಾಸ್ ಡೆಲ್ಗಾಡೊ ಅವರ ಸಮಯೋಚಿತ ಆಟದಿಂದ ಮೂರು ನಿಮಿಷಗಳಲ್ಲಿ ಎರಡು ಗೋಲ್ ಗಳಿಸಿಕೊಟ್ಟರು. ಹಗ್ಗಜಗ್ಗಾಟದ ಪಂದ್ಯದಲ್ಲಿ ಜೋರ್ಡಾನ್ ಮರ್ರೆ ಗೋಲು ಗಳಿಸಿದಾಗ 3-2ರ ಅಂತರದೊಂದಿಗೆ ಕೇರಳವು ಮತ್ತೆ ಸ್ಪರ್ಧೆಗೆ ಮರಳಿತು. ಆದರೆ ಪೆನಾಲ್ಟಿಯಲ್ಲಿ ಗೋಲ್ ಪಡೆಯಲಾಗದ ನಾಯಕ ಸುನೀಲ್ ಛೇತ್ರಿ ಹೆಡರ್ ಗೋಲ್ ಪಡೆದು ಪಂದ್ಯದ ಚರ್ಚೆಗೂ ಮೀರಿದ ಫಲಿತಾಂಶದ ಗೆಲುವಿಗೆ ಕಾರಣರಾದರು.

ಕಾರ್ಲೆಸ್ ಕ್ವಾಡ್ರಾಟ್ ಬ್ಲೂಸ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದರು. ದೇಶೌರ್ನ್ ಬ್ರೌನ್ ಬದಲಿಗೆ ಕ್ರಿಸ್ಟಿಯನ್ ಒಪ್ಸೆತ್ ಸ್ಥಾನ ಪಡೆದರೇ, ಪ್ರತೀಕ್ ಚೌಧರಿ ತಮ್ಮ ಚೊಚ್ಚಲ ಪಂದ್ಯವನ್ನು ರಾಹುಲ್ ಭೆಕೆ ಅವರ ಗಾಯದ ಅನುಪಸ್ಥಿತಿಯಲ್ಲಿ ಅವಕಾಶ ಪಡೆದರು. ಬ್ಲಾಸ್ಟರ್ಸ್ ತಂಡದಲ್ಲಿ ಕಿಬು ವಿಕುನಾ ನಾಲ್ಕು ಬದಲಾವಣೆಗಳನ್ನು ಮಾಡಿ, ಜೆಸ್ಸೆಲ್ ಕಾರ್ನೆರಿಯೊ, ರೋಹಿತ್ ಕುಮಾರ್, ನೊಂಗ್ಡಾಂಬಾ ನೊರೆಮ್ ಮತ್ತು ಅಮಾನತುಗೊಂಡ ಕೋಸ್ಟಾ ನಮೋನೈಸು ಬದಲಿಗೆ ಲಾಲ್ರುಥರಾ, ಪ್ರಶಾಂತ್ ಕರುತದತ್ಕುನಿ, ಫಕುಂಡೋ ಪೆರೆರಾ ಮತ್ತು ಜೋರ್ಡಾನ್ ಮರೆರ್ ಆಡಿಸಿದ್ದಾರೆ

17 ನೇ ನಿಮಿಷದಲ್ಲಿ ಡಿಮಾಸ್ ಡೆಲ್ಗಾಡೊ ಅವರ ಸೆಟ್ ಪೀಸ್‌ನಿಂದಾಗಿ, ಪ್ರತಿದಾಳಿ ನಡೆಸಿದ ಬ್ಲಾಸ್ಟರ್ಸ್ ಮುನ್ನಡೆ ಸಾಧಿಸಿ ಗ್ಯಾರಿ ಹೂಪರ್ ಪಿಚ್‌ನ ಉದ್ದಕ್ಕು ಬಾಕ್ಸ್‌ನ ತುದಿಯಲ್ಲಿ ರಾಹುಲ್ ಕೆಪಿ ಅವರಿಗೆ ತಲುಪಿಸಿದರೆ, ಅವರು ಗುರ್‌ಪ್ರೀತ್ ಸಿಂಗ್ ಸಂಧು ಅವರನ್ನು ದಾಟಿ ಚೆಂಡನ್ನು ಗೋಲ್ ಪಡೆಯುವತ್ತ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು.

ಗೋಲ್ ಪಡೆಯುವ ಮೂಲಕ ಆಟಕ್ಕೆ ಮರಳುವಲ್ಲಿ ಬ್ಲೂಸ್‌ ಹತ್ತು ನಿಮಿಷಗಳಿಗೂ ಕಡಿಮೆ ಸಮಯ ಪಡೆದುಕೊಂಡರು. ಗುರ್‌ಪ್ರೀತ್‌ ಅವರ ಪಂಟ್‌ ಅಂಗಳದ ಅರ್ಧದಲ್ಲಿದ್ದ ಓಪ್ಸೆತ್‌ ಅವರನ್ನು ದಾಟಿ ಲಾಲ್‌ರುಥಾರ ತಲುಪಿ ಚೆಂಡು ಅವರ ತೆಕ್ಕೆಗೆ ಸಿಗುವಷ್ಟರಲ್ಲಿ ಆಲಸ್ಯದ ಕುರುಹು ಪಡೆದ ಕ್ಲೀಟನ್‌ ಸಿಲ್ವಾ ತನ್ನ ಬಲಗಾಲಿಂದ ಅಲ್ಬಿನೋ ಗೋಮ್ಸ್‌ ಅವರನ್ನು ಹಿಂದಿಕ್ಕಿ ಗೋಲ್ ಅತ್ತ ತಿರುಗಿಸಿದರು. ಎರಡೂ ತಂಡಗಳು ಅರ್ಧ ಘಂಟೆಯ ಆಟದ ಒಂದು ನಿಮಿಷದ ಮೊದಲು 1-1 ಸಮಾನ ಅಂಕ ಪಡೆದು ಪಂದ್ಯಕ್ಕೆ ಮೆರಗು ನೀಡಿದ್ದವು.

ಪಂದ್ಯದ ಪುನರಾರಂಭದ ನಂತರ ಕೋನ್ ಅವರು ಒಪ್ಸೆತ್‌ ಅಡ್ಡಗಾಲಿಟ್ಟು ಕೆಳಗುರುಳಿಸಿದ್ದರಿಂದ ರೆಫರಿ ಕ್ರಿಸ್ಟಲ್ ಜಾನ್ ಸ್ಥಳವನ್ನು ಸೂಚಿಸಿದಾಗ ಬೆಂಗಳೂರಿಗೆ ಅಂಕಗಳಿಸಿ ಮುಂದೆ ಸಾಗಲು ದೊಡ್ಡ ಅವಕಾಶವಿತ್ತು. ಆದರೆ ಪೆನಾಲ್ಟಿಗಳೊಂದಿಗೆ ಉತ್ತಮ ದಾಖಲೆಯನ್ನು ಹೊಂದಿರುವ ಸುನಿಲ್ ಛೇತ್ರಿ ಪನೆಂಕಾ ಪ್ರಯತ್ನಿಸಿದರು, ಅದು ನೇರವಾಗಿ ಅಲ್ಬಿನೋ ಅವರ ಕೈಗೆ ಸಿಕ್ಕು, ಗೋಲ್ ದೊರೆಯಲಿಲ್ಲ.

ಆದರೆ ಬೆಂಗಳೂರು ಆತ್ಮವಿಶ್ವಾಸ ಕಳೆದುಕೊಳ್ಳಲು ಅವಕಾಶವಿಲ್ಲದಂತೆ ಮತ್ತು ಮೂರು ನಿಮಿಷಗಳ ಅವಧಿಯಲ್ಲಿ ಎರಡು ತ್ವರಿತ ಗೋಲುಗಳನ್ನು ಗಳಿಸಿತು. 51ನೆ ನಿಮಿಷದಲ್ಲಿ ಸಿಲ್ವ, ಆಶಿಕ್ ಅವರತ್ತ ತಲಿಪಿಸಿದಾಗ ಓಪ್ಸೆತ್ ಅವಕಾಶ ಪಡೆದು ಗೋಲ್ ಗಳಿಸಿ ಬೆಂಗಳೂರು ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸಲು ಅನುವು ಮಾಡಿಕೊಟ್ಟರು. ಆದರೆ ನಂತರದಲ್ಲಿ ಆ ಗೋಲ್ ಸಾಧನೆಯನ್ನು ಎರಿಕ್ ಪಾರ್ತಲು ಅವರ ಹೆಸರಿಗೆ ಸೇರಿಸಲಾಯ್ತು. ಕಾರಣ ಗೋಲ್ ಗಳಿಸಿದ ಕಡೆಯ ಕ್ಷಣದಲ್ಲಿ ಚೆಂಡು ಸ್ಪರ್ಶ ಪಾರ್ತಲು ಅವರದ್ದಾಗಿತ್ತು.

ನಂತರದ 2 ನಿಮಿಷಗಳಲ್ಲಿ ಬ್ಲೂಸ್‌ಗೆ ಮತ್ತೊಂದು ಅವಕಾಶ ಕೈಹಿಡಿಯಿತು. ಲಾಲ್ರುಥಾರಾ ಅವರಿಂದ ಕ್ಲೀಟನ್ ಸಿಲ್ವಾ ಬಾಲ್ ಕಸಿದು ಪೋಸ್ಟ್ ನ ತುದಿಯಲ್ಲಿ ಡಿಮಾಸ್ ಡೆಲ್ಗಾಡೊ ಅವರನ್ನು ಕಂಡುಕೊಂಡರು, ಅವರು ಅಲ್ಬಿನೊವನ್ನು ಪಾಸ್ ಮಾಡಿ ಅಂಕ ಗಳಿಸಿ ಬ್ಲೂಸ್‌ಗೆ ಎರಡು ಗೋಲು ಅಂತರ ಸೃಷ್ಟಿಸಿದರು.

61 ನೇ ನಿಮಿಷದಲ್ಲಿ ಸೆಟ್ ಪೀಸ್‌ನಿಂದ ಬ್ಲಾಸ್ಟರ್ಸ್ ಮತ್ತೆ ಗೋಲ್ ಪಡೆದರು. ಫಾಸುಂಡೋ ಪೆರೆರಾ ಅವರ ಚೆಂಡನ್ನು ವಿಸೆಂಟೆ ಗೊಮೆಜ್ ಮತ್ತು ಜೋರ್ಡಾನ್ ಮರ್ರೆ ಆಫ್‌ಸೈಡ್ ಸ್ಥಾನದಿಂದ ಗೋಲ್ ಗಳಿಸಿದರು ಮತ್ತು 1 ಗೋಲ್ ಅಂತರದೊಂದಿಗೆ ಪಂದ್ಯ 3-2 ರ ರೋಚಕ ಹಂತ ತಲುಪಿತು.

ಮತ್ತೊಂದು ಗೋಲನ್ನು ಬಿಟ್ಟುಕೊಟ್ಟ ಬ್ಲೂಸ್ ಆಕ್ರಮಣಕಾರಿ ಪ್ರದರ್ಶನ ತೋರಿದರು. 65 ನೇ ನಿಮಿಷದಲ್ಲಿ ಮತ್ತೊಮ್ಮೆ ಸಂತಸಕ್ಕೆ ಎಡೆಮಾಡಿಕೊಂಡರು. ಬಲದಿಂದ ಹರ್ಮನ್‌ಜೋತ್ ಖಬ್ರಾ ಅವರಿಂದ ಬಾಲ್ ಪಡೆದ ನಾಯಕ ಛೆತ್ರಿ, ಪ್ರಶಾಂತ್ ಕರುಥದತ್ಕುಣಿಯನ್ನು ಮೀರಿಸಿ, ಚೆಂಡನ್ನು ಪೋಸ್ಟ್ ನ ಮೂಲೆಗೆ ತಮ್ಮ ಹೆಡ್ಡರ್ ಇಂದ ಕಳುಹಿಸಿ ತಂಡಕ್ಕೆ ಎರಡು ಗೋಲುಗಳ ಅಂತರವನ್ನು ಕಾಯ್ದುಕೊಳ್ಳಲು ಅವಕಾಶ ಮಾಡಿಕೊಟ್ಟರು.

ಕ್ವಾಡ್ರಾಟ್ ಪಂದ್ಯದ ಕಡೆಯ ಕ್ಷಣಗಳಲ್ಲಿ ಬ್ರೌನ್ ಅವರನ್ನು ಕರೆತಂದರು ನಂತರದಲ್ಲಿ ಮುರಂಗ್ ಆಟಕ್ಕೆ ಪಾದಾರ್ಪಣೆ ಮಾಡಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಬೆಂಗಳೂರು ಸತತ ಹೋರಾಟದ ಆಟದಿಂದ ಎದುರಾಳಿ ಪಡೆಯನ್ನು ತಡೆದು ಗೆಲುವು ಸಾಧಿಸಿ 3 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 4ನೆ ಸ್ಥಾನವನ್ನು ಅಲಂಕರಿಸಿದರು.

ಬ್ಲೂಸ್ ತಮ್ಮ ಮುಂದಿನ ಪಂದ್ಯದಲ್ಲಿ ಒಡಿಶಾ ಎಫ್.ಸಿ ವಿರುದ್ಧ ಜಿ.ಎಂ.ಸಿ ಬಾಂಬೊಲಿಮ್ ಕ್ರೀಡಾಂಗಣದಲ್ಲಿ ಡಿಸೆಂಬರ್ 17ರಂದು ಆಡಲಿದ್ದಾರೆ.

Malcare WordPress Security