ಬೆಂಗಳೂರು ಎಫ್. ಸಿಯ ಮತ್ತೊಂದು ಪಂದ್ಯ ಡ್ರಾ ನಲ್ಲಿ ಅಂತ್ಯ

ಕೆಲವೇ ಅವಕಾಶಗಳಿದ್ದ ಬಿಎಫ್ಸಿ – ಹೈದ್ರಾಬಾದ್ ಪಂದ್ಯದಲ್ಲಿ 0-0 ಗೋಲ್.

ಮಾರ್ಗೋವ: ಬೆಂಗಳೂರು ಎಫ್ ಸಿ ಈ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನ ತಮ್ಮ ಎರಡನೇ ಪಂದ್ಯದಲ್ಲಿ ಗೋವಾದ ಫತೋರ್ದಾ ಕ್ರೀಡಾಂಗಣದಲ್ಲಿ ಶನಿವಾರದಂದು ಸತತವಾಗಿ ಎರಡನೇ ಬಾರಿಗೆ, ಯಾವುದೇ ಗೋಲ್ ಗಳಿಸದೆ ಡ್ರಾ ಮಾಡಿಕೊಂಡಿದೆ. ಗೋಲ್ ಗಳಿಸುವ ಅವಕಾಶಗಳಿಲ್ಲದ ಪಂದ್ಯದಲ್ಲಿ ದ್ವಿತೀಯಾರ್ಧದ ನಂತರ ತಂಡದಲ್ಲಿ ಅಲ್ಪ ಬದಲಾವಣೆಗಳೊಂದಿಗೆ ಹಿಡಿತ ಸಾಧಿಸುವ ಯತ್ನ ನಡೆದರೂ ಹೈದ್ರಾಬಾದ್ ತಡೆಯೊಡ್ಡಿ ಯಾವುದೇ ಫಲ ದೊರೆಯದಂತೆ ಮಾಡುವಲ್ಲಿ ಯಶಸ್ವಿಯಾಯ್ತು. ಹಾಗಾಗಿ ಬೆಂಗಳೂರು ತಂಡ ಈ ಪಂದ್ಯದ ನಂತರ ಅಂಕ ಪಟ್ಟಿಯಲ್ಲಿ 6ನೆ ಸ್ಥಾನದಲ್ಲಿದೆ.

ಬ್ಲೂಸ್ ನ ಮುಖ್ಯ ತರಬೇತುದಾರರಾದ ಕಾರ್ಲೆಸ್ ಕ್ವಾಡ್ರಾತ್ ಎಫ್ ಸಿ ಗೋವಾ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡ ತಂಡವನ್ನೇ ಇಂದು ಮುಂದುವರೆಸಿತ್ತು. ಎದುರಾಳಿ ತಂಡ ಹೈದ್ರಾಬಾದ್ ಎಫ್ ಸಿ ಯ ಮಾನ್ಯುಯಲ್ ಮಾರ್ಕ್ವೆಸ್, ಒಡಿಶಾ ಎಫ್ ಸಿ ತಂಡದ ವಿರುದ್ಧ ಗೆಲುವು ಸಾಧಿಸಿದ್ದ ತಮ್ಮ ತಂಡದಲ್ಲಿ ಎರಡು ಬದಲಾವಣೆಗಳೊಂದಿಗೆ ಅಂಕಣಕ್ಕಿಳಿದಿತ್ತು. ಹಿತೇಶ್ ಶರ್ಮಾ ಮತ್ತು ಮೊಹಮ್ಮದ್ ಯಾಸಿರ್ ಅವರ ಬದಲಿಗೆ ಚಿಂಗ್ಲೆಂಸನ ಸಿಂಗ್ ಮತ್ತು ಜೋಯಲ್ ಚಿಯಾನೀಸ್ ಆಡುವ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆರಂಭಿಕ ಇಪ್ಪತ್ತು ನಿಮಿಷಗಳು, ಎರಡೂ ತಂಡಗಳಿಗೆ ಮಿಡ್‌ಫೀಲ್ಡ್‌ನಲ್ಲಿ ಸವಾಲಾಗಿ ಕಂಡಿತು. ಪಂದ್ಯದ ಮೇಲೆ ಹಿಡಿತ ಸಾಧಿಸಲು ಎರಡೂ ತಂಡಗಳು ಹೋರಾಡುತ್ತಿದ್ದವು. ಕಳೆದ ಪಂದ್ಯಕ್ಕೆ ಹೊರತಾಗಿ ಈ ಆಟದಲ್ಲಿ ಡಿಫೆನ್ಸ್ ಪ್ರದರ್ಶನ ಉತ್ತಮಗೊಂಡ ಕಾರಣ ಎದುರಾಳಿ ಹೈದ್ರಾಬಾದ್ ತಂಡದ ಮೂರೂ ಪ್ರಯತ್ನಗಳು ವಿಫಲಗೊಂಡವು.

ಹೈದರಾಬಾದ್ ತಂಡ ಗೋಲ್ ಪಡೆಯುವ ಆಕರ್ಷಕ ಅವಕಾಶವನ್ನು 24 ನೇ ನಿಮಿಷದಲ್ಲಿ ಅರಿಡಾನೆ ಸಾಂತಾ ಫ್ರೀ ಕಿಕ್ ಮೂಲಕ ಪಡೆದರು. ಲುಯಿಸ್ ಸಾಸ್ಟ್ರೆ ಅವರ ಇನ್-ಸ್ವಿಂಗಿಂಗ್ ಫ್ರೀ ಕಿಕ್ ಎದುರಿಸಿದ ಅರಿಡಾನೆ, ಹೆಡರ್ ಮೂಲಕ ಗೋಲ್ ತಲುಪುವ ಪ್ರಯತ್ನದಲ್ಲಿದ್ದಾಗ, ಗುರುಪ್ರೀತ್ ಸಿಂಗ್ ಸಂಧು ತಮ್ಮ ಬಲಗೈ ಚಾಚಿ ತಡೆದರು.

ಕ್ವಾಡ್ರಾತ್ ದ್ವಿತೀಯಾರ್ಧವನ್ನು ಒಂದು ಬದಲಾವಣೆಯೊಂದಿಗೆ ಪ್ರಾರಂಭಿಸಿದರು, ಕ್ರಿಸ್ಟಿಯನ್ ಒಪ್ಸೆತ್‌ ಅವರ ಬದಲಿಗೆ ಡಿಮಾಸ್ ಡೆಲ್ಗಾಡೊ ಅವರನ್ನು ಕರೆತಂದರು, ಈ ನಡೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಂತೆ ತೋರಿತು. 1 ಗಂಟೆ ಆಟದ ನಂತರದಲ್ಲಿ, ಸ್ಪೇನ್ ಗುರು, ಉದಾಂತಾ ಸಿಂಗ್ ಮತ್ತು ಫ್ರಾನ್ ಗೊನ್ಜಾಲೆಜ್ ಅವರ ಬದಲಿಗೆ ಸಬ್ಸ್ಟಿಟ್ಯೂಟ್ ಆಗಿ ದೇಶೋರ್ನ್ ಬ್ರೌನ್ ಮತ್ತು ರಾಹುಲ್ ಬೆಕೆ ಅವರನ್ನು ಕರೆತಂದರು.

ತಂಡದ ಅಲ್ಪ ಬದಲಾವಣೆ ಆಟದಲ್ಲಿ ಹುರುಪು ತಂದರೂ, ಡಿಮಾಸ್ ಆಗಮನದಿಂದ ಅಂಗಳದ ಮಧ್ಯದಲ್ಲಿ ಕ್ವಾಡ್ರಾಟ್ ಅವರ ಆಲೋಚನೆಯಂತೆ ಹಿಡಿತ ಸಾಧಿಸುವಲ್ಲಿ ಯಶಸ್ಸು ಕಂಡಿತು.

ಪಂದ್ಯದ ಕಡೆಯ 10 ನಿಮಿಷದ ಸಂಧರ್ಭದಲ್ಲಿ ಕ್ಲೀಟನ್ ಸಿಲ್ವ ಗೋಲ್ ಗಳಿಸುವ ಯೋಜನೆಯೊಂದಿಗೆ ಮುನ್ನುಗ್ಗಿ ಆಶಿಶ್ ರೈ ಅವರನ್ನು ತಪ್ಪಿಸಿ ಶಾಟ್ ತೆಗೆದುಕೊಂಡರೂ, ಓಡಾಯ್ ವನೈನ್ಡಿಯ ತಡೆದರು.

86ನೆ ನಿಮಿಷದಲ್ಲಿ ಬಹು ಕಷ್ಟದ ಶೂಟ್ ಮೂಲಕ ಗೋಲ್ ಪಡೆಯುವ ಅವಕಾಶ ಬ್ರೌನ್ ಗಿಟ್ಟಿಸಿಕೊಂಡರೂ ಸಬ್ರತಾ ಪೌಲ್ ಅಡ್ಡಲಾಗಿ ನಿಂತರು. ಕೆಲ ಉತ್ತಮ ಪ್ರಯತ್ನಗಳ ಹೊರತಾಗಿಯೂ, ಫತೊರ್ದಾ ಅಂಗಳದಲ್ಲಿ ಪಂದ್ಯ ಗೋಲ್ ಇಲ್ಲದೆ ಡ್ರಾ ಆಯ್ತು.

ಬೆಂಗಳೂರು ಎಫ್ ಸಿ ತಮ್ಮ ಮುಂದಿನ ಪಂದ್ಯವನ್ನು ಬಾಂಬೊಲಿಮ್ ನ ಜಿ.ಎಂ.ಸಿ ಅಂಗಳದಲ್ಲಿ ಡಿಸೆಂಬರ್ 4 ರಂದು ಸಾಂಪ್ರದಾಯಿಕ ಎದುರಾಳಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಆಡಲಿದೆ.

Malcare WordPress Security