ಬೆಂಗಳೂರು ಎಫ್‌ಸಿ ಚೆನ್ನೈಯಿನ್ ವಿರುದ್ಧ ಮೊದಲ ಗೆಲುವಿಗಾಗಿ ಸೆಣೆಸಾಟ

ಎರಡು ಡ್ರಾಗಳ ನಂತರ ಬ್ಲೂಸ್, ದಕ್ಷಿಣದ ಪ್ರತಿಸ್ಪರ್ಧಿಗಳ ಆಟದಲ್ಲಿ ಮೂರು ಅಂಕಗಳನ್ನು ತಮ್ಮದಾಗಿಸಿಕೊಳ್ಳುವತ್ತ ಹೆಜ್ಜೆ.

ಪಣಜಿ: ಬೆಂಗಳೂರಿನ ಎಫ್‌ಸಿ ಸಾಂಪ್ರದಾಯಿಕ ಎದುರಾಳಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಶುಕ್ರವಾರ ಬಾಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಗೆಲುವು ಸಾಧಿಸುವ ಭರವಸೆಯಲ್ಲಿದ್ದಾರೆ. ಪಂದ್ಯವು ಯಾವಾಗಲೂ ಕೇವಲ ಮೂರು ಪಾಯಿಂಟ್‌ಗಳಿಗಿಂತ ಹೆಚ್ಚು ಆಕರ್ಷಕವಾಗಿ ಸ್ಪರ್ಧಾತ್ಮಕವಾಗಿರಲಿದ್ದು, ತರಬೇತುದಾರ ಕಾರ್ಲೆಸ್ ಕ್ವಾಡ್ರಾಟ್ ತಮ್ಮ ತಂಡದ ಗೆಲುವು ಪಿಚ್‌ ಮೇಲೆ ಅವಲಂಬಿತವಾಗಿರುವುದಾಗಿ ತಿಳಿಸಿದರು.

“ಚೆನ್ನೈಯಿನ್ ಎಫ್ ಸಿ ಹಲವು ವರ್ಷಗಳಿಂದ ನಮ್ಮ ಸಾಂಪ್ರದಾಯಿಕ ಎದುರಾಳಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ತಂಡಗಳ ನಡುವೆ ಉತ್ತಮ ಪೈಪೋಟಿ ಇದೆ. ದುರದೃಷ್ಟವಶಾತ್, ಆಟವು ನಮ್ಮ ಅಭಿಮಾನಿಗಳಿಲ್ಲದೆ ಇರುತ್ತದೆ ಮತ್ತು ನಾವು ಸ್ಟ್ಯಾಂಡ್‌ಗಳಿಂದ ಯಾವುದೇ ಸಹಾಯವನ್ನು ಪಡೆಯುವುದಿಲ್ಲ. ಆದರೆ ಆಟಗಾರರು ಪರಿಶ್ರಮ ವಹಿಸಲಿದ್ದಾರೆ ಏಕೆಂದರೆ ನಾವು ಸಂಪೂರ್ಣ ಮೂರು ಅಂಕಗಳನ್ನು ತೆಗೆದುಕೊಳ್ಳಲು ಬಯಸುತ್ತೇವೆ, ”ಎಂದು ಕ್ವಾಡ್ರಾಟ್ ಹೇಳಿದರು.

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಎಟಿಕೆ ವಿರುದ್ಧ ಸೋಲು ಕಂಡರೂ, ಆವೃತ್ತಿಯ ದ್ವಿತೀಯಾರ್ಧದಲ್ಲಿ ಪ್ರೇರಿಣೆಗೊಂಡು ಪುನರಾಗಮನವನ್ನು ನಡೆಸಿದ್ದ ಚೆನ್ನೈಯಿನ್, ಈ ಅವೃತ್ತಿಯಲ್ಲಿ ಕೆಲವು ಪ್ರಮುಖ ಆಟಗಾರರ ನಿರ್ಗಮನವನ್ನು ಎದುರಿಸಬೇಕಾಯಿತು, ಅವರಲ್ಲಿ ಮುಖ್ಯವಾಗಿ ಓವನ್ ಕೋಯ್ಲ್, ಅವರು ತಂಡದ ಅದೃಷ್ಟದ ಬದಲಾವಣೆಗೆ ಕಾರಣರಾಗಿದ್ದರು. ಹಂಗೇರಿಯನ್ ತರಬೇತುದಾರ ಸಾಬಾ ಲಾಸ್ಲೊ ಈಗ ಚೆನ್ನೈಯಿನ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ ಮತ್ತು ಅವರೊಂದಿಗೆ ಕೆಲವು ಹೊಸ ಮುಖಗಳನ್ನು ಕರೆತಂದಿದ್ದಾರೆ.

ಆತಿಥೇಯರು ಸ್ಟ್ರೈಕರ್‌ಗಳಾದ ಎಸ್ಮೇಲ್ ಗೊನ್ಕಾಲ್ವ್ಸ್ ಮತ್ತು ಜಕುಬ್ ಸಿಲ್ವೆಸ್ಟರ್ ಅವರೊಂದಿಗೆ ಫಟ್ಖುಲ್ಲೊ ಫತ್ಖುಲ್ಲೋವ್ ಮತ್ತು ಮೆಮೊ ಮೌರಾ ಅವರೊಂದಿಗೆ ಸಹಿ ಹಾಕಿದ್ದಾರೆ, ಇದರಲ್ಲಿ ಈಗಾಗಲೇ ಮಿಡ್‌ಫೀಲ್ಡ್ ಅಲ್ಲಿ ಬಲ ತುಂಬಲು, ರಾಫೆಲ್ ಕ್ರಿವೆಲ್ಲಾರೊ, ಅನಿರುದ್ಧ್ ಥಾಪಾ ಮತ್ತು ಲಲಿಯನ್‌ಜುವಾಲಾ ಚಾಂಗ್ಟೆ ಸೇರಿದ್ದಾರೆ.

“ಚೆನ್ನೈಯಿನ್ ಎಫ್ಸಿ ಉತ್ತಮ ಸಹಿಗಳನ್ನು ಮಾಡಿಕೊಂಡಿದೆ ಮತ್ತು ಅವರು ಕಠಿಣ ಎದುರಾಳಿಯಾಗುತ್ತಾರೆ, ಅವರು ಆಟದ 90 ನಿಮಿಷಗಳ ಕಾಲ ನಮಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಅವರ ಭಾರತೀಯ ಆಟಗಾರರು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದಾರೆ ಮತ್ತು ಅವರು ಅದನ್ನು ಪ್ರತಿ ಪಂದ್ಯದಲ್ಲೂ ತೋರಿಸುತ್ತಿದ್ದಾರೆ ”ಎಂದು ಕ್ವಾಡ್ರಾಟ್ ಹೇಳಿದರು.

ಎರಡು ಪಂದ್ಯಗಳಲ್ಲಿ ತಮ್ಮ ತಂಡದ ಪ್ರದರ್ಶನದ ಬಗೆಗೆ , ಎರಡೂ ಪಂದ್ಯಗಳಲ್ಲಿ ಬ್ಲೂಸ್ ಹೆಚ್ಚಿನ ವಿಭಾಗಗಳಲ್ಲಿ ತೋರಿಸಿದ ಶಿಸ್ತಿನಿಂದ ತಾನು ಸಂತಸಗೊಂಡಿದ್ದೇನೆ ಎಂದು ಕ್ವಾಡ್ರಾಟ್ ಹೇಳಿದರು, ಆದರೆ ಅಟ್ಯಾಕಿಂಗ್ ಥರ್ಡ್ ಅಲ್ಲಿ ತನ್ನ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಒಪ್ಪಿಕೊಂಡರು.

“ನಾವು ಪಿಚ್‌ನ ಇನ್ನೊಂದು ತುದಿಯಲ್ಲಿ ಆಡುವಾಗ ಸುಧಾರಣೆ ಕಾಣಬೇಕಿದೆ ಎಂದು ತಿಳಿದಿದೆ, ಎದುರಾಳಿ ಬಾಕ್ಸ್ ಕಡೆ ಗಮನಿಸಬೇಕು, ಆಟಗಾರರಿಗೆ ಅದು ತಿಳಿದಿದೆ ಮತ್ತು ಶ್ರಮಿಸುತ್ತಿದ್ದಾರೆ. ನಾವು ವಿಭಿನ್ನ ಸನ್ನಿವೇಶಗಳನ್ನು ಅಭ್ಯಾಸ ಮಾಡುತ್ತಿದ್ದೇವೆ. ಏನಾಗುತ್ತಿದೆ ಎಂದರೆ ನಾವು ದಾಳಿಯಲ್ಲಿ ಸಾಕಷ್ಟು ಡ್ಯುಯೆಲ್‌ಗಳನ್ನು ಗೆಲ್ಲುತ್ತಿಲ್ಲ. ಅವಕಾಶವನ್ನು ರಚಿಸಲು ಅಂತಿಮ ಪಾಸ್ ಕಾಣೆಯಾಗಿದೆ. ಅದು ನಮಗೆ ತಿಳಿದಿದೆ ಮತ್ತು ಅದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ. ತಂಡವು ಸ್ಥಿರತೆಯನ್ನು ತೋರಿಸುತ್ತಿದೆ, ನಾವು ಹೇಗೆ ಆಡಲು ಬಯಸುತ್ತೇವೆ ಎಂಬುದು ಅವರಿಗೆ ತಿಳಿದಿದೆ ಆದರೆ ನಾವು ನಮ್ಮ ಅತ್ಯುತ್ತಮ ಫಾರ್ಮ್ ಅನ್ನು ಇನ್ನು ತೋರಲಾಗಲಿಲ್ಲ ” ಎಂದು ಕ್ವಾಡ್ರಾಟ್ ಹೇಳಿದರು.

ಸ್ಪೇನ್ ಗುರು ಆಯ್ಕೆ ಮಾಡಲು ಗಾಯ-ಮುಕ್ತ ತಂಡವನ್ನು ಹೊಂದಿದ್ದಾರೆ ಮತ್ತು ಪ್ರಭಾವಶಾಲಿ ಮಿಡ್‌ಫೀಲ್ಡರ್ ಡಿಮಾಸ್ ಡೆಲ್ಗಾಡೊ ಅವರ ಬಗೆಗೆ ಕೆಲ ವಿಷಯಗಳನ್ನೂ ಒದಗಿಸಿದ್ದಾರೆ, ಅವರು ಬ್ಲೂಸ್‌ನ ಆರಂಭಿಕ ಎರಡೂ ಪಂದ್ಯಗಳ ದ್ವಿತೀಯಾರ್ಧದಲ್ಲಿಯೇ ಆಡಿದ್ದರು.

“ಡಿಮಾಸ್ ಉತ್ತಮಗೊಳ್ಳುತ್ತಿದ್ದಾರೆ. ನಮಗೆ ಈಗ ಉತ್ತಮವಾದ ಸುದ್ದಿ ಎಂದರೆ, ನಮಲ್ಲಿ ಯಾವುದೇ ಗಯಾಳುಗಳಿಲ್ಲ. ಗಾಯಗಳು ಆಗದಿರುವಂತೆ ಎಲ್ಲಾ ತಂಡಗಳು ಈ ಆವೃತ್ತಿಯಲ್ಲಿ ಪ್ರಯತ್ನಿಸುತ್ತವೆ. ಅದನ್ನೇ ನಾವು ಮಾಡುತ್ತಿದ್ದೇವೆ, ವಿಶೇಷವಾಗಿ ಡಿಮಾಸ್‌. ಆವೃತ್ತಿಪೂರ್ವದಲ್ಲಿ ಅವರು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಿದ್ದವು ಮತ್ತು ತರಬೇತಿ ಅವಧಿಯಲ್ಲಿ, ಪಂದ್ಯಗಳಲ್ಲಿ ಅವರು ಸಾಧ್ಯವಾದಷ್ಟು ನಿಮಿಷ ಆಡಲು ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಅವರನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇವೆ. ಅವರು ಚೆನ್ನೈಯಿನ್ ಎಫ್‌ಸಿ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದಕ್ಕಿಂತ ಹೆಚ್ಚಿನ ನಿಮಿಷಗಳನ್ನು ಆಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ”

ಪಂದ್ಯ ರಾತ್ರಿ 7.30 ಕ್ಕೆ ಪ್ರಾರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security