ಬೆಂಗಳೂರು ಎಫ್‌ಸಿ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನಲ್ಲಿ ಪ್ರಿ ಸೀಸನ್ ತರಬೇತಿಯನ್ನು ಆರಂಭಿಸಿದೆ

ಮೊದಲ ಸುತ್ತಿನಲ್ಲಿ ಆಟಗಾರರು, ಸಿಬ್ಬಂದಿ ಮತ್ತು ಉಳಿದವರು ನಾಲ್ಕು ಸುತ್ತಿನ ಪರೀಕ್ಷೆಯ ನಂತರ ಬಳ್ಳಾರಿಯಲ್ಲಿ
ಅಕಾಡೆಮಿ ಸೌಲಭ್ಯಕ್ಕೆ ತೆರಳಲಿದ್ದಾರೆ.

ಬಳ್ಳಾರಿ, ಕರ್ನಾಟಕ: ಬಳ್ಳಾರಿಯ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನಲ್ಲಿ, ಕ್ಲಬ್‌ನ ಅಕಾಡೆಮಿ
ಸೌಲಭ್ಯದಲ್ಲಿ 29 ಬೆಂಗಳೂರು ಎಫ್‌ಸಿ ಆಟಗಾರರು ತಮ್ಮ ಪ್ರಿ ಸೀಸನ್ ತರಬೇತಿಯನ್ನು ಪ್ರಾರಂಭಿಸಿರುವುದಾಗಿ
ಕ್ಲಬ್ ಗುರುವಾರ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಮೂರು ಸುತ್ತಿನ ಮತ್ತು ಬಳ್ಳಾರಿಯಲ್ಲಿ ಒಂದು ಸುತ್ತಿನ ಪರೀಕ್ಷೆಯ
ನಂತರ ಉತ್ತರ ಕರ್ನಾಟಕ ಜಿಲ್ಲೆಗೆ ತೆರಳಿರುವ ತಂಡ ಮತ್ತು ಸಿಬ್ಬಂದಿ ಗುರುವಾರ ತಮ್ಮ ತರಬೇತಿಯನ್ನು
ಪ್ರಾರಂಭಿಸುವ ಮೊದಲು ನಾಲ್ಕು ದಿನಗಳ ಕಾಲ ಕ್ವಾರೆಂಟೈನ್ ನಿರ್ಬಂಧದಲ್ಲಿ ಇರಲಿದ್ದಾರೆ.

ಕ್ಲಬ್‌ನ ವಿದೇಶಿ ಆಟಗಾರರು ಇನ್ನೂ ತಮ್ಮ ವೀಸಾಗಳಿಗಾಗಿ ಕಾಯುತ್ತಿರುವುದರಿಂದ, ಮೊದಲು ತಂಡದ ಭಾರತೀಯ
ಸಹಾಯಕ ಕೋಚ್ ನೌಶಾದ್ ಮೂಸಾ ಮತ್ತು ಉಳಿದ ಭಾರತೀಯ ಸಿಬ್ಬಂದಿ, ಹೆಡ್ ಕೋಚ್ ಕಾರ್ಲೆಸ್ ಕ್ವಾಡ್ರಾಟ್
ಅವರ ಮಾರ್ಗದರ್ಶನದಲ್ಲಿ ಮತ್ತು ಸ್ಪೇನ್ ನಲ್ಲಿರುವ ಉಳಿದ ತಾಂತ್ರಿಕ ಸಿಬ್ಬಂದಿಯೊಂದಿಗಿನ ಸಂಪರ್ಕದಲ್ಲಿ ತರಬೇತಿ
ಆರಂಭಿಸಲಿದ್ದಾರೆ.

“ನಮ್ಮ ಪ್ರಿ ಸೀಸನ್ ತರಬೇತಿಯನ್ನು ವಿದೇಶಿ ಸಿಬ್ಬಂದಿ ಮತ್ತು ಆಟಗಾರರ ಸಂಪೂರ್ಣ ತಂಡದೊಂದಿಗೆ ಪ್ರಾರಂಭಿಸಲು ನಾವು ಇಷ್ಟಪಡುತ್ತಿದ್ದೆವು, ಆದರೆ ವೀಸಾ ಮತ್ತು ಪ್ರಯಾಣದ ಪರಿಸ್ಥಿತಿಯನ್ನು ಗಮನಿಸಿದರೆ, ಈ ಪರಿಸ್ಥಿತಿ ಒಂದು ಅಡಚಣೆಯಾಗಿದೆ ಮತ್ತು ಅದಕ್ಕಾಗಿ ಮೊದಲೇ ಪ್ರಯಾಣಿಸಲು ಯೋಜಿಸಿದ್ದೆವು. ಇದು ಕ್ಲಬ್‌ನೊಂದಿಗೆ ನೌಶಾದ್ ಮೂಸಾ ಅವರ ನಾಲ್ಕನೇ ಆವೃತ್ತಿಯಾಗಿದೆ ಮತ್ತು ಇದು ದೊಡ್ಡ ಪ್ರಯೋಜನವಾಗಲಿದೆ. ನವೆಂಬರ್ ಮೂರನೇ ವಾರದಲ್ಲಿ ಪ್ರಾರಂಭವಾಗುವ ಆವೃತ್ತಿಯ ಬಗ್ಗೆ ನಾವು ಲೀಗ್‌ನಿಂದ ಸೂಚನೆಯನ್ನು ಪಡೆದ ತಕ್ಷಣ ನಮ್ಮ ಪ್ರಿ ಸೀಸನ್ ತರಬೇತಿಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಯೋಜಿಸುತ್ತಿದ್ದೇವೆ ”ಎಂದು ಕ್ಲಬ್ ಸಿಇಒ ಮಂದಾರ್ ತಮ್ಹಾನೆ ಹೇಳಿದರು.

ಕ್ಲಬ್‌ನೊಂದಿಗೆ ನವ ಪ್ರತಿಭೆಗಳು ಸೇರಿಕೊಂಡಿರುವುದರಿಂದ ಆತಿಥೇಯರು ಬಳ್ಳಾರಿಯಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದು, ಕ್ಲಬ್‌ನ ರಿಸರ್ವ್ ಆಟಗಾರರಾಗಿ ಪ್ರಯಾಣಿಸಿರುವ ಒಂಬತ್ತು ಯುವ ಆಟಗಾರರನ್ನು ನಿರ್ಣಯಿಸಲು ಪ್ರಿ ಸೀಸನ್ ಉಪಯುಕ್ತವಾಗಲಿದೆ.

“ನಮ್ಮ ಇಂದಿನ ಸಂಧರ್ಭ ಅತ್ಯಂತ ಉತ್ತೇಜಕ ಸನ್ನಿವೇಶವಲ್ಲ, ಮತ್ತು ನಾವೇನನ್ನೂ ನಿಯಂತ್ರಿಸುವ ಪರಿಸ್ಥಿತಿಯಲ್ಲಿಲ್ಲ. ಆದರೂ, ಕ್ಲಬ್‌ನಲ್ಲಿ ನಮ್ಮ ಕೆಲಸವು ನಿಲ್ಲುವುದಿಲ್ಲ, ನಾವು ನಮ್ಮ ಆಟಗಾರರು ಮತ್ತು ತರಬೇತುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದರ ನಿಲುವು ಸ್ಪಷ್ಟವಾಗಿದೆ. ತಂಡದ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಟಗಾರರ ಬಗೆಗಿನ ಮಾಹಿತಿ ಪಡೆದಿದ್ದೇನೆ ಮತ್ತು ಆವೃತ್ತಿಯ ಮೊದಲು ಪಂದ್ಯಗಳನ್ನು ವ್ಯವಸ್ಥೆ ಮಾಡುವುದು ಮತ್ತು ಇತರ ಅಂಶಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದೇನೆ. ಮುಖ್ಯವಾಗಿ, ನಾವು ಸಾಧ್ಯವಾದಷ್ಟು ಬೇಗ ತಂಡವನ್ನು ಸೇರಬಹುದೆಂದು ಖಚಿತಪಡಿಸಿಕೊಳ್ಳುವತ್ತ ಪ್ರತಿದಿನವೂ ಕೆಲಸ ಮಾಡುತ್ತಿದ್ದೇವೆ ” ಎಂದು ಮುಖ್ಯ ಕೋಚ್ ಕಾರ್ಲೆಸ್ ಕ್ವಾಡ್ರಾಟ್ ಹೇಳಿದರು.

ಇಂಡಿಯನ್ ಸೂಪರ್ ಲೀಗ್ ಆವೃತ್ತಿಯು ನವೆಂಬರ್‌ನಲ್ಲಿ ಪ್ರಾರಂಭವಾಗುವುದರೊಂದಿಗೆ, ಗೋವಾದಲ್ಲಿನ ಫತೋರ್ಡಾದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಮನೆಯಂಗಳದ ಪಂದ್ಯಗಳ ಪೂರ್ವಭಾವಿ ತಯಾರಿಯು ಅತ್ಯಾಧುನಿಕ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಕ್ಯಾಂಪಸ್‌ನಲ್ಲಿ ಮೂರು ವಾರಗಳ ಕ್ರೀಡಾ ತರಬೇತಿ ಪಡೆಯುವುದರೊಂದಿಗೆ ಆಡುವ ನಿರೀಕ್ಷೆಯಿದೆ.

“ಆಟಗಾರರಾದ ನಾವು ಒಟ್ಟಿಗೆ ತರಬೇತಿ ಪಡೆಯಲು ಉತ್ಸುಕರಾಗಿದ್ದೇವೆ ಮತ್ತು ಬಳ್ಳಾರಿಯಲ್ಲಿರುವ ಹುಡುಗರಲ್ಲಿ ನೀವು ಆ ಶಕ್ತಿಯನ್ನು ಅನುಭವಿಸಬಹುದು. ನಾವೆಲ್ಲರೂ ಈಗ ಬಹಳ ಸಮಯದಿಂದ ಸ್ವಂತವಾಗಿ ತರಬೇತಿ ಪಡೆಯುತ್ತಿದ್ದೆವು ಮತ್ತು ಪ್ರಿಸೀಸನ್ ತರಬೇತಿ ಪ್ರಾರಂಭಿಸಲು ಕಾಯುತ್ತಿದ್ದೆವು. ಉಳಿದ ಹುಡುಗರು ಮತ್ತು ಕೋಚಿಂಗ್ ಸಿಬ್ಬಂದಿ ಶೀಘ್ರದಲ್ಲೇ ನಮ್ಮೊಂದಿಗೆ ಸೇರಲಿರುವುದನ್ನು ಎದುರುನೋಡುತ್ತಿದ್ದೇವೆ ”ಎಂದು ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಹೇಳಿದರು.