ಬೆಂಗಳೂರು ಎಫ್‌ಸಿ ಇಂದ ತಂಡದ ಮಾನಸಿಕ ಆರೋಗ್ಯ ವರ್ಧನೆಗಾಗಿ ಕಾರ್ಯಕ್ರಮ ಆಯೋಜನೆ

‘ಕೇರ್ ಅರೌಂಡ್ ದಿ ಕಾರ್ನರ್’ ಮೂಲಕ ಆಟಗಾರರು ಮತ್ತು ಸಿಬ್ಬಂದಿಗೆ ಜಾಗೃತಿ ಮೂಡಿಸಿ ಮಾನಸಿಕ ಆರೋಗ್ಯ ವರ್ಧಿಸಲು ವೃತ್ತಿಪರರನ್ನು ಕರೆತಂದ ಬ್ಲೂಸ್.

ಬೆಂಗಳೂರು: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರು ಎಫ್‌ಸಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆವೃತ್ತಿಯ ನಡುವೆ ಆಟಗಾರರು ಮತ್ತು ಸಿಬ್ಬಂದಿಗೆ ಕರೆಯ ಮೂಲಕ ವೃತ್ತಿಪರರಿಂದ ಸಲಹೆ ಸಹಾಯವನ್ನು ಒದಗಿಸುವ ಸಲುವಾಗಿ ಕೇರ್ ಅರೌಂಡ್ ದಿ ಕಾರ್ನರ್ ಅನ್ನು ಪ್ರಾರಂಭಿಸುವುದಾಗಿ ಕ್ಲಬ್ ಘೋಷಿಸಿತು.

ಈ ಯೋಜನೆಯ ಮೂಲ ಉದ್ದೇಶವು ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರ ಮಾರ್ಗದರ್ಶನದಲ್ಲಿ ತಂಡ ಮತ್ತು ಸಿಬ್ಬಂದಿಗೆ ನಿಯತ ಅಧಿವೇಶನಗಳನ್ನು ನಡೆಸುವುದರೊಂದಿಗೆ ಅಕಾಡೆಮಿಯ ಆಟಗಾರಿಗೂ ಅಧಿವೇಶನ ಆಯೋಜಿಸುವುದು. ವೀಡಿಯೊ ಸೆಷನ್‌ಗಳ ಮೂಲಕ ಎಲ್ಲ ಸಮಯದಲ್ಲೂ ವೈಯುಕ್ತಿಕವಾಗಿ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಲು ಆಟಗಾರರು ಮತ್ತು ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗುವುದು.

“ಕ್ರೀಡೆಯಲ್ಲಿ ಮಾನಸಿಕ ಆರೋಗ್ಯವು ಒಂದು ಪ್ರಮುಖ ವಿಷಯವಾಗಿದೆ, ಆದರೆ ಇದು ಭಾರತೀಯ ಕ್ರೀಡೆಯಲ್ಲಿ ಪ್ರಾಮುಖ್ಯತೆ ಪಡೆದಿಲ್ಲ. ಈ ಆವೃತ್ತಿಯಲ್ಲಿ ಈ ಅಂಶವನ್ನು ತಂಡಕ್ಕೆ ಸೇರಿಸುವ ಅವಶ್ಯಕತೆಯಿದೆ ಮತ್ತು ಮುಂಬರುವ ಪ್ರತಿ ಆವೃತ್ತಿಯಲ್ಲಿಯೂ ಮುಂದುವರಿಯುತ್ತದೆ ಎಂದು ನಾವು ಭಾವಿಸಿದ್ದೇವೆ. ಕೇರ್ ಅರೌಂಡ್ ದಿ ಕಾರ್ನರ್ ಅಡಿಯಲ್ಲಿ ನಮ್ಮ ಆಟಗಾರರು ಮತ್ತು ಸಿಬ್ಬಂದಿ ಮಾನಸಿಕ ಸ್ವಾಸ್ಥ್ಯದ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಅಗತ್ಯವಿದ್ದಾಗಲೆಲ್ಲಾ ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಲು ನಾವು ತೆಗೆದುಕೊಳ್ಳುತ್ತಿರುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಅಲ್ಲದೆ, ಸುತ್ತಮುತ್ತಲಿನ ಸಂಧರ್ಭಗಳು ಈ ಆವೃತ್ತಿಯಲ್ಲಿ ದಿನಕಳೆಯುತ್ತಿದ್ದಂತೆ ಕಠಿಣವಾಗಲು ಪ್ರಾರಂಭವಾಗುತ್ತದೆ, ಮತ್ತು ಎಂದಿಗಿಂತಲೂ ಈ ಯೋಜನೆ ಅವಶ್ಯವಿದ್ದು ಈಗ ದೊಡ್ಡ ಪಾತ್ರವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ.

ನಾವು ಈ ಕಾರ್ಯಕ್ರಮವನ್ನು ಹಂತಹಂತವಾಗಿ ಮುಂದುವರಿಸುತ್ತೇವೆ ”ಎಂದು ಕ್ಲಬ್ ಸಿಇಒ ಮಂದಾರ್ ತಮ್ಹಾನೆ ಹೇಳಿದರು.

ಈ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದಿರುವುದು ವಿಷಯದ ಕುರಿತು ಜ್ಞಾನವನ್ನು ಕ್ಲಬ್ ಪಾಲುದಾರರಾದ ರೇಂಜರ್ಸ್ ಎಫ್‌ಸಿ ಒದಗಿಸುತ್ತಿರುವುದರಿಂದ. ರೇಂಜರ್ಸ್ ಎಫ್ ಸಿ ಯ ಮಾನಸಿಕ ಆರೋಗ್ಯ ತಜ್ಞರು -ತಂಡ ಮತ್ತು ಸಿಬ್ಬಂದಿಯೊಂದಿಗೆ ಕಾರ್ಯಾಗಾರಗಳನ್ನು ನಡೆಸಲಿದ್ದು, ವಿಷಯವನ್ನು ಪರಿಚಯಿಸಿ ಅದರ ಜಾಗೃತಿ ಮೂಡಿಸಲಿದ್ದಾರೆ.

“ರೇಂಜರ್ಸ್ನಲ್ಲಿ ನಮ್ಮ ಸ್ನೇಹಿತರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ, ಅವರು ಅದ್ಭುತವಾದ ಆಟಗಾರರ ಆರೈಕೆ ಕಾರ್ಯಕ್ರಮವನ್ನು ಹೊಂದಿದ್ದಾರೆ. ಕೇರ್ ಅರೌಂಡ್ ದಿ ಕಾರ್ನರ್ ಗೆ ಅವರ ಪರಿಣತಿಯ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು, ಅವರೊಂದಿಗೆ ಪಾಲುದಾರಿಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ, ”ಎಂದು ತಮ್ಹೇನ್ ತಿಳಿಸಿದ್ದಾರೆ.

ಆಟಗಾರರು ಮತ್ತು ಸಿಬ್ಬಂದಿಗೆ ಮಾತ್ರವಲ್ಲದೆ, ಮಾನಸಿಕ ಯೋಗಕ್ಷೇಮದ ವಿಷಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕ್ಲಬ್ ಮುಖ್ಯ ಪಾತ್ರವಹಿಸಿದೆ.

ಈ ಹಿಂದೆ ಮಾನಸಿಕ ಸ್ವಾಸ್ಥ್ಯದ ಪ್ರಾಮುಖ್ಯತೆ ಅರಿತು ವೃತ್ತಿಪರರ ಸಹಾಯವನ್ನು ಪಡೆದಿರುವ ಕ್ಲಬ್ ನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಕೇರ್ ಅರೌಂಡ್ ದಿ ಕಾರ್ನರ್ ಕಾರ್ಯಕ್ರಮದ ಪರ ಮಾತನಾಡುತ್ತಾ, ಈ ಕಾರ್ಯಕ್ರಮದಿಂದ ತಂಡಕ್ಕೆ ಅಪಾರ ಪ್ರಯೋಜನವಿದೆ ಎಂದು ಹೇಳಿದರು. “ಇದು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬ ಆಟಗಾರ ಮತ್ತು ಸಿಬ್ಬಂದಿ ಇದರ ಅವಕಾಶ ಬಳಸಿಕೊಂಡು ತಾವು ಉತ್ತಮವಾಗುವತ್ತ ಹೆಜ್ಜೆ ಇಡಬೇಕೆಂದು ಮತ್ತು ತಮ್ಮ ಸ್ವಂತ ಸ್ವಭಾವದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಪುರುಷರು ಮತ್ತು ಫುಟ್ಬಾಲ್ ಆಟಗಾರರಾದ ನಾವು ಯಾವಾಗಲೂ ಸದೃಢರಾಗಿರಬೇಕು ಮತ್ತು ಹತಾಶರಾಗಬಾರದು ಎಂದು ಹೇಳಲಾಗುತ್ತದೆ. ವೃತ್ತಿಪರ ಕ್ಲಬ್‌ನಲ್ಲಿ ಸುರಕ್ಷಿತವಾಗಿರುವುದು ಮತ್ತು ಅನಿಶ್ಚಿತವಾಗಿರದಿರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಇದರಿಂದ ಆಟಗಾರರು ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನವರನ್ನು ಅರ್ಥಮಾಡಿಕೊಳ್ಳಬಹುದು.”