ಬೆಂಗಳೂರು ಎಫ್ಸಿ ಎಟಿಕೆ ಮೋಹನ್ ಬಗಾನ್ ವಿರುದ್ಧ ಪರಾಭವ

ಕೊಲ್ಕತ್ತಾ ಪರ ವಿಲಿಯಂ ಗೋಲ್ ಗೆ ಮಣಿದ ಬ್ಲೂಸ್ 1-0 ಅಂತರದಲ್ಲಿ ಸೋಲು

ಮಾರ್ಗೋವಾ: ಡೇವಿಡ್ ವಿಲಿಯಮ್ ಪಂದ್ಯದ ಮೊದಲಾರ್ಧದಲ್ಲಿ ಗಳಿಸಿದ ಗೋಲ್ನಿಂದ ಅಜೇಯರೆನಿಸಿದ್ದ ಬೆಂಗಳೂರು ಆವೃತ್ತಿಯ ತಮ್ಮ ಮೊದಲ ಸೋಲಿಗೆ ಎಟಿಕೆ ಮೋಹನ್ ಬಗಾನ್ ತಂಡದ ವಿರುದ್ಧ 1-0 ಅಂತರದೊಂದಿಗೆ ಫತೋರ್ದಾ ಕ್ರೀಡಾಂಗಣದಲ್ಲಿ ಸಾಕ್ಷಿಯಾದರು. ಸೋಮವಾರ ನಡೆದ ಈ ಪಂದ್ಯದಲ್ಲಿ ಕೆಲವೇ ಸಾಧ್ಯತೆಗಳಿದ್ದರೂ ಆಸ್ಟ್ರೇಲಿಯಾದ ಆಟಗಾರನ ಮೋಡಿಯಿಂದ ಗೋಲ್ ಪಡೆದು ಪೂರ್ಣ ಅಂಕ ಸಾಧಿಸುವಲ್ಲಿ ಕೊಲ್ಕತ್ತಾ ತಂಡ ಯಶಸ್ವಿಯಾಯ್ತು. ಇದರೊಂದಿಗೆ ಮುಂಬೈ ಸಿಟಿ ಎಫ್ಸಿ ತಂಡದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದೆ.

ಕ್ವಾಡ್ರಟ್ ಭಾನುವಾರ ನಡೆದಂತಹ ಪ್ರೆಸ್ ಮೀಟ್ ಸಂಧರ್ಭದಲ್ಲಿ ತಂಡದ ಆಟಗಾರರ ಬದಲಾವಣೆಯ ಬಗೆಗೆ ಸೂಚನೆ ನೀಡಿದಂತೆಯೇ ಬೆಂಗಳೂರು ತಂಡದಲ್ಲಿ 3 ಬದಲಾವಣೆ ಮಾಡಿದ್ದಾರೆ. ಈ ತಂಡ ಕಳೆದ ವಾರ ಒಡಿಶಾ ತಂಡದ ವಿರುದ್ಧ ಸೆಣೆಸಾಡಿದ ಅನುಭವದೊಂದಿಗೆ ಈ ಪಂದ್ಯಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಸ್ಥಾನ ಪಡೆಯದ ರಾಹುಲ್ ಭೆಕೆ,ತಂಡದಲ್ಲಿ ರೈಟ್ ಬ್ಯಾಕ್ ಆಗಿ ಸ್ಥಾನ ಪಡೆದರೆ. ಹರ್ಮನ್‌ಜೋತ್ ಖಬ್ರಾ ಲೆಫ್ಟ್ ಬ್ಯಾಕ್ ಆಗಿ ಆಡಿದ್ದಾರೆ. ಉದಾಂತ ಸಿಂಗ್ ಮತ್ತು ದೇಶೋರ್ನ್ ಬ್ರೌನ್ ಇಬ್ಬರೂ, ಕ್ರಿಸ್ಟಿಯನ್ ಒಪ್ಸೆತ್ ಮತ್ತು ಸುರೇಶ್ ವಾಂಗ್ಜಮ್ ಅವರ ಬದಲಿಗೆ ಕಣಕ್ಕಿಳಿದರು. ಇಮ್ಯಾನ್ಯುಯೆಲ್ ಲಾಲ್ಚಾಂಚುವಾ ಮತ್ತು ತಂಡದ ಹೊಸ ಆಟಗಾರ ಅಜಿತ್ ಕುಮಾರ್ ಈ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಆಡಲು ಸ್ಥಾನ ಪಡೆದರು. ಇದರೊಂದಿಗೆ ಆಶಿಕ್ ಮತ್ತು ವುಂಗಾಯಮ್ ಮುಯಿರಾಂಗ್ 20 ಮಂದಿಯ ತಂಡದಿಂದ ಹೊರನಡೆದಿದ್ದಾರೆ.

ಆಂಟೋನಿಯೋ ಹಾಬಸ್ ತಮ್ಮ ಎಟಿಕೆ ಮೊಹನ್ ಬಗಾನ್ ತಂಡದ ಗೆಲುವಿನಲ್ಲಿ ಪಾತ್ರವಹಿಸಿದ್ದ ಆಟಗಾರರಲ್ಲಿ ಜಯೇಶ್ ರಾನೆ ಅವರ ಬದಲಿಗೆ ಎಡು ಗಾರ್ಸಿಯ ಅವರನ್ನು ಕರೆತರುವುದರೊಂದಿಗೆ ತಂಡವನ್ನು ಹಾಗೆ ಉಳಿಸಿಕೊಂಡಿದ್ದರು.

ಎರಡೂ ತಂಡಗಳು ಪಂದ್ಯದ ಆರಂಭದಿಂದಲೇ ಆಟದ ಮೇಲೆ ಹಿಡಿತ ಸಾಧಿಸುವ ಯತ್ನದಲ್ಲಿದ್ದರು. ಉನ್ನತ ಶ್ರೇಣಿಯ ಆಟ ಮುಂದುವರೆಸಿದ್ದ ಬ್ಲೂಸ್, ಆರಂಭದಲ್ಲಿಯೇ 3 ಬಾರಿ ಪ್ರತಿರೋಧ ತೋರಿದರು. ಆದರೆ 16 ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಇದನ್ನು ಭೇದಿಸಿದರು. ಅವರು ರಾಯ್ ಕೃಷ್ಣ ಅವರನ್ನು ಕಂಡುಕೊಂಡರು ಆದರೆ ಜುವಾನಾನ್ ಬಲವಾಗಿ ನಿಂತು ಅವರ ಶೂಟ್ ಅನ್ನು ತಡೆದರು.

ಪಂದ್ಯದ ಮೊದಲ ಗೋಲ್ ಯತ್ನ ಬ್ಲೂಸ್ ತಂಡದಿಂದ ಬಂದರೂ, 19 ನೇ ನಿಮಿಷದಲ್ಲಿ ಗುರ್‌ಪ್ರೀತ್ ಅವರ ಲಾಬ್ ಅಲ್ಲಿ ಎರಿಕ್ ಪಾರ್ತಲು ಹೆಜ್ಜೆ ಇಟ್ಟರು ಮತ್ತು ಆಸ್ಟ್ರೇಲಿಯಾ ಆಟಗಾರನ ಹೆಡರ್ ನೇರವಾಗಿ ಅರಿಂದಮ್ ಭಟ್ಟಾಚಾರ್ಯ ಅವರನ್ನು ತಲುಪಿತು. ಸುಭಾಶಿಶ್ ಬೋಸ್ ಅವರ ಕ್ರಾಸ್ ಮನ್ವೀರ್ ಸಿಂಗ್ ಅವರನ್ನು ಕಂಡುಕೊಂಡರೆ, ಅದು ಫಾರ್ವರ್ಡ್ನ ಶಾಟ್ ಅಲ್ಲಿ ನೇರವಾಗಿ ‘ಕೀಪರ್’ ತಲುಪಿತು.

ಅಲ್ಪವಿರಾಮದ ನಂತರ ಹಗ್ಗಜಗ್ಗಾಟದಲ್ಲಿ ಬೆಂಗಳೂರು ತಂಡದ ಬಲ ತಗ್ಗಿತು. ಎಡು ಗಾರ್ಸಿಯಾ ಅವರ ಕ್ರಾಸ್‌ಫೀಲ್ಡ್ ಪಾಸ್ 33 ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್‌ನನ್ನು ಕಂಡುಕೊಂಡಿತು ಮತ್ತು ಗೋಲ್ ಬಾಕ್ಸ್ ತುದಿಯಲ್ಲಿದ್ದ ಆಸ್ಟ್ರೇಲಿಯ ಆಟಗಾರ ಗೋಲಿನ ಮೇಲಿನ ಕಾರ್ನರ್ ಕಂಡುಕೊಂಡು ಮೊದಲಾರ್ಧದ ಮುಂಚೆಯೇ ಗೋಲ್ ಪಡೆದು ಹಬಾಸ್ ತಂಡಕ್ಕೆ ಮೇಲುಗೈ ಸಾಧಿಸಿದರು.

ಅರ್ಥಪೂರ್ಣ ಆಟದ ನಿರೀಕ್ಷೆಯಲ್ಲಿದ್ದ ಕ್ವಾಡ್ರಟ್ 1 ಗಂಟೆಯ ಆಟದ ಸಂಧರ್ಭದಲ್ಲಿ 3 ಬದಲಾವಣೆಗಳನ್ನು ಮಾಡಿದರು. ಎರಿಕ್ ಪಾರ್ತಲು, ಪ್ರತೀಕ್ ಚೌಧರಿ ಮತ್ತು ಬ್ರೌನ್ ಬದಲಿಗೆ ಫ್ರಾನ್ ಗೊಂಝಲೇಜ್, ಲಿಯನ್ ಅಗಸ್ಟಿನ್ ಮತ್ತು ಒಪ್ಸೆತ್ ಆಟಕ್ಕೆ ಇಳಿದರು.

ಈ ಪಂದ್ಯಕ್ಕೆ ಮುನ್ನ ಕೆಲವು ಉತ್ತಮ ಫುಟ್‌ಬಾಲ್‌ ಪಂದ್ಯಗಳನ್ನಾಡಿರುವ ಬೆಂಗಳೂರು, ಯಾವುದೇ ರೋಚಕ ಆಟಕ್ಕೆ ಕೈಹಾಕದೇ ಹೆಣಗಾಡಿತು. 74 ನೇ ನಿಮಿಷದಲ್ಲಿ ವಾಂಗ್ಜಮ್ ಕಟ್-ಬ್ಯಾಕ್ನೊಂದಿಗೆ ಕ್ಲೀಟನ್ ಸಿಲ್ವಾ ಅವರನ್ನು ಕಂಡುಕೊಂಡಾಗ ಬ್ಲೂಸ್ ಗೋಲ್ ಪಡೆಯುವ ಅವಕಾಶದ ಹತ್ತಿರ ಬಂದಿತ್ತು, ಆದರೆ ಬ್ರೆಜಿಲಿಯನ್ ಆಟಗಾರನ ಹೊಡೆತ ತೀವ್ರವಾಗಿರದೆ ತಿಣುಕಾಡುತ್ತಿದ್ದುದರಿಂದ ಕಷ್ಟ ಸಾಧ್ಯವಾಯ್ತು. ಇದರೊಂದಿಗೆ ಪಂದ್ಯಾ ಕೈಚೆಲ್ಲಬೇಕಾಯ್ತು.

ಬ್ಲೂಸ್ ತಮ್ಮ ಮುಂದಿನ ಪಂದ್ಯದಲ್ಲಿ ಜೆಮ್ಶೆಡ್ಪುರ್ ತಂಡವನ್ನು ಡಿಸೆಂಬರ್ 28ರಂದು ಫತೋರ್ದಾ ಕ್ರೀಡಾಂಗಣದಲ್ಲಿ ಎದುರಿಸಲಿದೆ.

Malcare WordPress Security