ನವ ಬೆಂಗಳೂರು ತಂಡ ಸೀಸನ್ ಓಪನರ್ನಲ್ಲಿ ಹೊಸ ಆಟಗಾರರ ಎಫ್ಸಿ ಗೋವಾ ತಂಡದೊಂದಿಗೆ ಸೆಣೆಸಾಟ

ಅಪರಿಚಿತ ಸನ್ನಿವೇಶಗಳಲ್ಲಿ ಹಳೆಯ ಪ್ರತಿಸ್ಪರ್ಧಿಗಳ ಜಿದ್ದಾಜಿದ್ದಿ

ಪಣಜಿ: ಹಲವು ತಿಂಗಳುಗಳ ಅನಿಶ್ಚಿತತೆ, ಕಠಿಣ ಪರೀಕ್ಷೆಯ ಹಂತಗಳು, ಬಯೋ ಬಬಲ್ ಜೀವನದ ನಡುವಿನ ಎರಡು ಆವೃತ್ತಿಪೂರ್ವ ಅಭ್ಯಾಸದ ಸಮಯ, ಬೆಂಗಳೂರು ಎಫ್‌ಸಿ ಈ ಆವೃತ್ತಿಯ ತಮ್ಮ ಇಂಡಿಯನ್ ಸೂಪರ್ ಲೀಗ್ ನ ಚೊಚ್ಚಲ ಪಂದ್ಯವನ್ನು ಆತಿಥೇಯ ಎಫ್‌ಸಿ ಗೋವಾ ವಿರುದ್ಧ ಭಾನುವಾರದಂದು ಗೋವಾದ ಮಾರ್ಗೊದಲ್ಲಿನ ಫತೋರ್ದಾ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಪಂದ್ಯವು ಯಾವಾಗಲೂ ನಿರೀಕ್ಷೆ ಮತ್ತು ಗುರಿಗಳನ್ನು ಹೊಂದಿರುತ್ತದೆ. ಇಂದಿನ ಸಾಂಕ್ರಾಮಿಕದ ಪರಿಸ್ಥಿತಿಯ ನಡುವೆಯೂ ತಂಡಗಳಿಗೆ ದೊರೆತಿರುವ ಆವೃತ್ತಿಪೂರ್ವ ತಯಾರಿ, ಆಟವನ್ನು ಕಠಿಣಗೊಳಿಸುವುದರೊಂದಿಗೆ ಮನರಂಜನೆ ನೀಡುವ ಭರವಸೆ ಕೊಡುತ್ತದೆ.

ತಮ್ಮ ತಂಡವು ಗೆಲುವಿನೊಂದಿಗೆ ಪ್ರಾರಂಭಿಸುವ ವಿಶ್ವಾಸವಿದೆಯೇ ಎಂದು ಕೇಳಿದಾಗ, ಉತ್ತಮ ಆರಂಭಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ಪರಿಗಣಿಸುವುದರಿಂದ ಇದು ಸುಲಭವಾಗುವುದಿಲ್ಲ ಎಂದು ಕ್ವಾಡ್ರಾತ್ ಹೀಗೆ ಹೇಳಿದ್ದಾರೆ. “ಎಲ್ಲಾ ತಂಡಗಳು ಮೊದಲ ದಿನದಿಂದ ಸ್ಪರ್ಧಾತ್ಮಕವಾಗಿರಲು ಪ್ರಯತ್ನಿಸುತ್ತವೆ ಆದರೆ ವಿಭಿನ್ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ನಾವು ಅದನ್ನು ಅರ್ಥಮಾಡಿಕೊಳ್ಳಬೇಕಾಗಿದೆ” ಎಂದರು.

ಕ್ಯಾರೆಂಟೈನ್‌ ನಿಬಂಧನೆಗಳ ನಡುವೆ ಬ್ಲೂಸ್‌ನ ವಿದೇಶಿ ಆಟಗಾರರು ಮತ್ತು ಸಿಬ್ಬಂದಿ ಭಾರತಕ್ಕೆ ಆಗಮಿಸುವ ಮುನ್ನವೇ, ಭಾರತೀಯ ಆಟಗಾರರು, ಅಕ್ಟೋಬರ್ ಮೊದಲ ವಾರದಲ್ಲಿಯೇ ಆವೃತ್ತಿಪೂರ್ವ ಅಭ್ಯಾಸ ಆರಂಭಿಸಿದ್ದಾರೆ. “ನಮ್ಮ ಭಾರತೀಯ ಆಟಗಾರರು ಅಕ್ಟೋಬರ್ 1 ರಿಂದಲೇ ಆವೃತ್ತಿಪೂರ್ವ ಅಭ್ಯಾಸ ಪ್ರಾರಂಭಿಸಿದ್ದು, ಈಗಾಗಲೇ ಏಳು ರಿಂದ ಎಂಟು ವಾರಗಳ ಅಭ್ಯಾಸ ಪೂರ್ಣಗೊಳಿಸಿದ್ದಾರೆ. ಅವರು ಉತ್ತಮ ಪ್ರದರ್ಶನದತ್ತ ಹೆಜ್ಜೆ ಇಟ್ಟಿದ್ದಾರೆ. ವಿದೇಶಿ ಆಟಗಾರರಿಗೆ ಸಂಬಂಧಿಸಿದಂತೆ, ಎಲ್ಲಾ ಕ್ಲಬ್‌ಗಳು ಒಂದೇ ರೀತಿಯ ಸಮಸ್ಯೆಗಳನ್ನು ಹೊಂದಿವೆ ಮತ್ತು ಅದು ನಮ್ಮ ನಿಯಂತ್ರಣ ಮೀರಿದ್ದು, ಮುಂದಿನ ಕೆಲ ವಾರಗಳಲ್ಲಿ ನಾವು ಎಲ್ಲಾ ತಂಡಗಳಿಂದ ಉತ್ತಮ ಫುಟ್‌ಬಾಲ್‌ ಆಟದ ಪ್ರದರ್ಶನವನ್ನು ನಿರೀಕ್ಷಿಸಬಹುದು.”ಎಂದು ಕ್ವಾಡ್ರಾತ್ ಹೇಳಿದರು.

“ವಿಭಿನ್ನ ಸನ್ನಿವೇಶಗಳ ನಡುವೆ , ಎಫ್‌ಸಿ ಗೋವಾ ವಿರುದ್ಧ ಸಾಮಾನ್ಯ ಆಟಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಆಟವನ್ನು ನಾವು ನಿರೀಕ್ಷಿಸಬಹುದು. ನಿನ್ನೆ ನಡೆದ (ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ಮೋಹನ್ ಬಗಾನ್) ಪಂದ್ಯವನ್ನು ಗಮನಿಸಿದರೆ, ಆಟಗಾರರು ಇನ್ನೂ ತಮ್ಮ ಅತ್ಯುತ್ತಮ ದೈಹಿಕ ಸ್ಥಿತಿಯಲ್ಲಿಲ್ಲ ಎಂಬುದು ತಿಳಿಯುತ್ತದೆ. ಎಫ್‌ಸಿ ಗೋವಾ ವಿರುದ್ಧದ ಆಟದ ತೀವ್ರತೆ ನಾವು ತಿಳಿದಂತೆ ಇರದೇ ಇರಬಹುದು ” ಎಂದು ಸ್ಪೇನಿಯಾರ್ಡ್ ವಿವರಿಸಿದರು.

ವಿಭಿನ್ನ ಪಿಚ್ ಮತ್ತು ಮುಂಚೂಣಿ ಆಟಗಾರರ ಬದಲಾವಣೆ ಹೊಂದಿರುವ ಎಫ್‌ಸಿ ಗೋವಾ ವಿರುದ್ಧ ಬೆಂಗಳೂರು ತಂಡ ಆಡಲಿದೆ. ಗೌರ್ಸ್ ನ ಕೋಚ್ ಆಗಿದ್ದ ಸ್ಪೇನಿಯಾರ್ಡ್ ಸೆರ್ಗಿಯೋ ಲೋಬೆರಾ ಅವರ ಸ್ಥಾನಕ್ಕೆ ಜುವಾನ್ ಫೆರಾಂಡೊ ಅವರು ತರಬೇತುದಾರರಾಗಿ ನೇಮಕಗೊಂಡಿರುವುದರೊಂದಿಗೆ ಕಳೆದ ಆವೃತ್ತಿಯಲ್ಲಿ ಲೀಗ್ ಹಂತವನ್ನು ಅಗ್ರಕ್ರಮಾಂಕದಲ್ಲಿ ಮುಗಿಸಿದ ತಂಡವು ಮೌರ್ಟಾಡಾ ಫಾಲ್, ಹ್ಯೂಗೋ ಬೌಮಸ್, ಅಹ್ಮದ್ ಜಹೋವ ಮತ್ತು ಮಂದಾರ್ ರಾವ್ ದೇಸಾಯ್ ಅವರಂತಹ ಉದಯೋನ್ಮುಖ ಆಟಗಾರರು ಮುಂಬೈ ಸಿಟಿ ಎಫ್‌ಸಿ ಗೆ ಲೋಬೆರಾ ಅವರನ್ನು ಹಿಂಬಾಲಿಸಲಿದ್ದಾರೆ.

ಆತಿಥೇಯರನ್ನು ಫೆರಾನ್ ಕೊರೊಮಿನಾಸ್‌ ಅವರ ಅನುಪಸ್ಥಿತಿ ಕಾಡುವುದರೊಂದಿಗೆ, ಸ್ಪೇನಿಯಾರ್ಡ್‌ನ ನಿರ್ಗಮನ, ಅವರ ಸ್ಥಾನ ಭರ್ತಿ ಮಾಡುವುದು ಅಂತರ ಸೃಷ್ಟಿಸಿದ್ದರು, ಎಫ್‌ಸಿ ಗೋವಾ ಅವರ ಸಹವರ್ತಿ, ಮತ್ತೊಬ್ಬ ಸ್ಟ್ರೈಕರ್, ಇಗೊರ್ ಅಂಗುಲೋ ಅವರ ನೇಮಕ ಎದುರಾಳಿ ಬ್ಲೂಸ್‌ನ ಡಿಫೆನ್ಸ್ ಅವರ ತುದಿಗಾಲಲ್ಲಿ ಆಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ .

“ಗೋವಾ ತಂಡ, ಹೊಸ ಆಟಗಾರರು ಮತ್ತು ಹೊಸ ಮುಖ್ಯ ತರಬೇತುದಾರರನ್ನು ಹೊಂದಿರುವುದರಿಂದ, ಹೊಸ ಆಲೋಚನೆಗಳಿಂದ ಕೂಡಿದೆ. ಅವರು (ಎಫ್‌ಸಿ ಗೋವಾ) ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಮತ್ತು ಹಿಂದಿನ ಆವೃತ್ತಿಗಳಿಗಿಂತ ಬೇರೆಯದೇ ದೃಷ್ಟಿಕೋನದಲ್ಲಿ ಆಡಲು ಪ್ರಯತ್ನಿಸುತ್ತಾರೆ ಹಾಗಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು ”ಎಂದು ಕ್ವಾಡ್ರತ್ ಹೇಳಿದರು.

ತಂಡಕ್ಕೆ ಸೇರ್ಪಡೆಗೊಂಡ ಆಟಗಾರರ ಕುರಿತು ಮಾತನಾಡುತ್ತಾ, ಬೆಂಗಳೂರು ತಂಡ ಕೆಲ ಉತ್ತಮ ಆಟಗಾರರನ್ನು ಅನ್ವೇಷಿಸಿಕೊಂಡಿದೆ. ತಂಡದ ದಾಳಿ ಮತ್ತಷ್ಟು ಮೊನಚಾಗಲಿದೆ. ಹೊಸ ಆವೃತ್ತಿಯಲ್ಲಿ ಕ್ವಾಡ್ರತ್ ಅವರ ಮೊದಲ ವಿದೇಶಿ ಆಯ್ಕೆಯಾಗಿ ಬ್ರೆಜಿಲ್ ನ ಕ್ಲೀಟನ್ ಸಿಲ್ವಾ ಒಬ್ಬರಾದರೆ, ನಾರ್ವೇಯ ಸ್ಟ್ರೈಕರ್ ಕ್ರಿಸ್ಟಿಯನ್ ಒಪ್ಸೆತ್ ಮತ್ತು ಡಿಫೆಂಡರ್ ಫ್ರಾನ್ ಗೊನ್ಜಾಲೆಜ್ ತಂಡದಲ್ಲಿ ಆಡಲಿದ್ದಾರೆ. ಹೊಸದಾಗಿ ಸೇರ್ಪಡೆಯಾದ ಈ ಆಟಗಾರರು ಗೋಲ್ ಗಳಿಸುವಲ್ಲಿ ತಂಡಕ್ಕೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಕ್ವಾಡ್ರಾತ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

“ಕಳೆದ ಆವೃತ್ತಿಯಲ್ಲಿ ನಾವು ಸ್ಪರ್ಧಾತ್ಮಕವಾಗಿದ್ದೆವು, ಟ್ರೋಫಿ ಗಳಿಸಲು ಸವಾಲು ತೆಗೆದುಕೊಂಡಿದ್ದೆವು. ಆದರೆ ಅದು ಸಾಕಷ್ಟು ಉತ್ತಮವಾಗಿರಲಿಲ್ಲ. ಆವೃತ್ತಿಯುದ್ದಕ್ಕೂ ಡಿಫೆನ್ಸ್ ಅಲ್ಲಿ ಉತ್ತಮ ಆಟವಾಡಿದರು ದಾಳಿ ಮಾಡಿ ಆಡುವಲ್ಲಿ ಸ್ವಲ್ಪ ಎಡವಿದ್ದೆವು. ನಾವು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡರೂ, ನಾವು ಇನ್ನಷ್ಟು ಹೆಚ್ಚಿನ ಗೋಲ್ ಗಳಿಸಬೇಕಿತ್ತು. ಹಾಗಾಗಿ ಈಗ ತಾಂತ್ರಿಕವಾಗಿ ಇನ್ನು ಹೆಚ್ಚಿನ ಪರಿಶ್ರಮದ ತರಬೇತಿ ತಂಡಕ್ಕೆ ನೀಡಿದ್ದೇವೆ” ಎಂದು ಯೋಜಿಸಿರುವುದಾಗಿ ಕ್ವಾಡ್ರತ್ ಹೇಳಿದರು.

ಕ್ವಾಡ್ರತ್ ಅವರು ತಮ್ಮ ಬಳಿ ಸಂಪೂರ್ಣ ಸದೃಢವಾದ ತಂಡ ಹೊಂದಿರುವುದಾಗಿ ಖಚಿತಪಡಿಸಿದರು. ಪಂದ್ಯ ಸಂಜೆ 7.30 ಕ್ಕೆ ಪ್ರಾರಂಭವಾಗುತ್ತದೆ.

Malcare WordPress Security