ಛೇತ್ರಿ ಪೆನಾಲ್ಟಿ ಗೋಲ್ ಇಂದ ಬೆಂಗಳೂರು ತಂಡಕ್ಕೆ ಮೊದಲ ಜಯದ ದಾಖಲೆ, ಕ್ಯುಡ್ರಾಟ್ ಹುಡುಗರು ಅಂಕಪಟ್ಟಿಯಲ್ಲಿ 4 ನೇ ಸ್ಥಾನ.
ಬಂಬೋಲಿಮ್: ಶುಕ್ರವಾರ ಬಾಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಸ್ಪರ್ಧಿ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿನ ಸುನೀಲ್ ಛೆತ್ರಿ ಗೋಲ್ (56 ‘) ತಂಡಕ್ಕೆ 1-0 ಅಂತರದ ಜಯ ತಂದಿತು, ಈ ಆವೃತ್ತಿಯಲ್ಲಿ ಕಾರ್ಲೆಸ್ ಕ್ವಾಡ್ರಾಟ್ ಹುಡುಗರು ಮೊದಲ ಬಾರಿಗೆ ಮೂರು ಅಂಕಗಳನ್ನು ಪಡೆದಿದ್ದಾರೆ . ಚೆನ್ನೈಯಿನ್ ವಿರುದ್ಧದ ಏಳು ಪಂದ್ಯಗಳಲ್ಲಿ ಛೇತ್ರಿಯ ಆರನೇ ಗೋಲ್ ಇದಾಗಿದ್ದು ಮತ್ತು ಬ್ಲೂಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.
ತಂಡದಲ್ಲಿನ ಆಟಗಾರರ ಕೌಶಲ್ಯದ ಆಧಾರದಲ್ಲಿ ಆರಿಸುವ ಅಗತ್ಯವನ್ನು ಗ್ರಹಿಸಿದ ಕ್ವಾಡ್ರಾಟ್ ಕಳೆದ ವಾರಾಂತ್ಯದಲ್ಲಿ ಹೈದರಾಬಾದ್ ಎಫ್‌ಸಿ ಎದುರಿಸಿದ್ದ ತಂಡದಲ್ಲಿ ಪಿಚ್‌ನ ಪ್ರತಿಯೊಂದು ಭಾಗದಲ್ಲೂ ತಲಾ ಒಂದರಂತೆ, ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದರು. ಫ್ರಾನ್ಸ್ ಗೊನ್ಜಾಲೆಜ್ ಅವರಿಗಿಂತ ಮುಂಚೆಯೇ ರಾಹುಲ್ ಭೆಕೆ, ಜುವಾನ್ ಗೊನ್ಜಾಲೆಜ್ ಜೊತೆ ಆಡಿದರೆ, ಡಿಮಾಸ್ ಡೆಲ್ಗಾಡೊ ಮತ್ತು ದೇಶೋರ್ನ್ ಬ್ರೌನ್, ಉದಂತ ಸಿಂಗ್ ಮತ್ತು ಕ್ರಿಸ್ಟಿಯನ್ ಒಪ್ಸೆತ್ ಅವರಿಗಿಂತ ಮುಂಚೆಯೇ ಆಟ ಪ್ರಾರಂಭಿಸಿದರು, ಬ್ಲೂಸ್ 4-3-3ರಲ್ಲಿ ಆಟ ಆರಂಭಿಸಿದ್ದರು.
ನಿಧಾನಗತಿಯಲ್ಲಿ ಆರಂಭವಾದ ಪಂದ್ಯದಲ್ಲಿ , ಎರಡೂ ತಂಡಗಳು ತಮ್ಮ ಪ್ರಾಬಲ್ಯ ಪ್ರದರ್ಶನಕ್ಕೆ ನಿಂತ ಮೊದಲಿನಿಂದಲೇ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದವು. ಆದರೆ ನಡಾವಳಿಯಲ್ಲಿ ಕೊಂಚ ಮೇಲುಗೈ ಸಾಧಿಸುತ್ತ ಬಂದ ಬೆಂಗಳೂರು ತಂಡ, ಚೆಂಡನ್ನು ವಿಂಗ್ಸ್ ಬಳಿ ತಂದು, ಚೆನ್ನೈಯಿನ್ ಅವರ ವಿರುದ್ಧ ರೋಚಕ ಸೆಣೆಸಾಟ ನಡೆಸಿದರು.
31 ನೇ ನಿಮಿಷದಲ್ಲಿ ಡೆಲ್ಗಾಡೊ ಕಾರ್ನರ್ ಇಂದ ಕ್ಲೈಟನ್ ಸಿಲ್ವಾ ಅವರಿಗೆ ಚೆಂಡನ್ನು ತಲುಪಿಸಿದರು. ಆದರೆ ಶಾಟ್ ತೆಗೆದುಕೊಂಡ ಬ್ರೆಜಿಲಿಯನ್ ಆಟಗಾರ, ಮತ್ತೊಂದು ಮೂಲೆಯಲ್ಲಿ ಚೆಂಡು ತಲುಪುವಂತೆ ಮಾತ್ರ ಮಾಡಲು ಸಾಧ್ಯವಾಯ್ತು. ಈ ಸಮಯದಲ್ಲಿ, ಕ್ಲೆಟನ್ ಗೋಲ್ ಪೋಸ್ಟ್ ದಾಟಲು ಯತ್ನಿಸಿದರು, ಅಲ್ಲಿ ಭೆಕೆ ತನ್ನ ಮಾರ್ಕರ್ ಅನ್ನು ತಪ್ಪಿಸಿ ಚೆಂಡನ್ನು ಪೋಸ್ಟ್‌ನತ್ತ ಮುನ್ನಡೆಸುವಲ್ಲಿ ವಿಫಲರಾದರು.
ಬ್ಲೂಸ್‌ನ ಮೊದಲ ಪ್ರಯತ್ನ 37 ನೇ ನಿಮಿಷದಲ್ಲಿ ರಾಹುಲ್ ಭೆಕೆ ಮೂಲಕ ಬಂದಿತು. ಚೆಂಡು ಪೋಸ್ಟ್ ಕಡೆಗೆ ತಲುಪಿಸುವ ಯತ್ನದಲ್ಲಿ ಎರಿಕ್ ಪಾರ್ತಲು ಅಡ್ಡಲಾದರು ಮತ್ತು ಆಸ್ಟ್ರೇಲಿಯಾದ ಜುವಾನಾನ್ ಅದನ್ನು ಮಾರ್ಗದರ್ಶನ ಮಾಡಿದರು, ಆದರೆ ಅವರ ಹೆಡರ್ ವಿಶಾಲ್ ಕೈತ್‌ಗೆ ಸುಲಭವಾಗಿ ಕೈ ಸೇರಿತು.
ಬೆಂಗಳೂರು ದ್ವಿತೀಯಾರ್ಧವನ್ನು ಒಪ್ಸೆತ್ ಬದಲಾಗಿ ಬ್ರೌನ್ ಪ್ರಾರಂಭಿಸಿದರು ಮತ್ತು ಆರಂಭದಲ್ಲೇ ಉತ್ತಮ ಅವಕಾಶ ಸಿಕ್ಕಿ ಪೋಸ್ಟ್ ಅಂಚಿನಲ್ಲಿ ಫ್ರೀ ಕಿಕ್ ಸಿಕ್ಕಾಗ, ಬ್ಲೂಸ್ ಒಗ್ಗಟ್ಟಿನ ಕೊರತೆಯಿಂದ ಅವರು ಅದನ್ನು ಕಳೆದುಕೊಂಡರು. ಆದರೆ ಅವರು ತಪ್ಪಿದ ಅವಕಾಶವನ್ನು ಮರೆಯುವ ಮುನ್ನವೇ, ಬೆಂಗಳೂರಿಗೆ ಮತ್ತೊಂದು ಅವಕಾಶ ಒದಗಿ ಬಂದಿತು. ಅವಕಾಶದ ಫಲ ಪಡೆಯುವಲ್ಲಿ ತಂಡ ಹೆಜ್ಜೆ ಇಟ್ಟಿತು.
ಪೋಸ್ಟ್ ಬಳಿ ಕ್ಲೆಟನ್‌ನನ್ನ ಎಡ್ವಿನ್ ವ್ಯಾನ್ಸ್‌ಪಾಲ್ ಅಡ್ಡಗಾಲಿಟ್ಟರು. ಮತ್ತು ರೆಫರಿ ಸ್ಥಳವನ್ನು ಗುರುತಿಸಿ ಅವಕಾಶ ಇತ್ತರು. ಛೇತ್ರಿ ಯಾವುದೇ ತಪ್ಪನ್ನು ಮಾಡದೇ, 56 ನೇ ನಿಮಿಷದಲ್ಲಿ ಬಿಎಫ್‌ಸಿಯನ್ನು ಮುನ್ನಡೆಸಲು ವಿಶಾಲ್ ಕೈತ್ ಅವರನ್ನು ಮೀರಿ ಅದನ್ನು ಗೋಲ್ ಪೋಸ್ಟ್ ಸೇರಿಸಿದರು.
1 ಗಂಟೆಯ ಆಟದ ಬಳಿಕ, ಬ್ಲೂಸ್‌ಗೆ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸುವ ಅತ್ಯುತ್ತಮ ಅವಕಾಶವಿತ್ತು. ಸುಲಭವಾಗಿ ಡಿಮಾಸ್‌ನ ಥಂಪಿಂಗ್ ಸ್ಟ್ರೈಕ್ ಫ್ರೀ ಕಿಕ್‌ನಿಂದ ಚೆಂಡು ವಿಶಾಲ್ ಕೈತ್ ಬೆರಳಿನಂಚಿನಲ್ಲಿ ಗೋಲಿನ ಚೌಕಟ್ಟನ್ನು ಮೀರಿ ಪೋಸ್ಟ್ ಪಕ್ಕದಲ್ಲಿ ಸಾಗಿತು.
ಬ್ಲೂಸ್ ತಮ್ಮ ಮುನ್ನಡೆ ಕಾಯ್ದುಕೊಳ್ಳುವ ಪ್ರಯತ್ನಿಸುತ್ತಿದ್ದರೆ, 64 ನೇ ನಿಮಿಷದಲ್ಲಿ ವಿರಾಮದ ವೇಳೆಗೆ ಚೆನ್ನೈ ತಂಡ ಬಿಎಫ್‌ಸಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನದಲ್ಲಿತ್ತು. ಜೆರ್ರಿಯ ಕ್ರಾಸ್, ಫಟ್ಖುಲ್ಲೊ ಫಟ್ಖುಲೋವ್ ಅವರನ್ನು ತಲುಪಿ ಗೋಲ್ ಆಗುವ ಸಾಧ್ಯತೆ ಇದ್ದಾಗ, ಗುರ್ಪ್ರೀತ್ ಪೋಸ್ಟ್ನಲ್ಲಿ ತಡೆದರು.
82 ನೇ ನಿಮಿಷದಲ್ಲಿ ಕ್ಲೆಟನ್‌ರನ್ನು ಫ್ರಾನ್ ಗೊನ್ಜಾಲೆಜ್ ಕಡೆಯ ಕ್ಷಣದಲ್ಲಿ ಬೆಂಗಳೂರು ಬದಲಿಸಿದರು. ನಂತರ ಬ್ಲೂಸ್ ಅಕಾಡೆಮಿ ಅಮಯ್ ಮೊರಾಜ್ಕರ್ ಅವರನ್ನು ಸುರೇಶ್ ವಾಂಗ್ಜಮ್ ಬದಲಿಗೆ ಕ್ಲಬ್ ಪರ ಆಟಕ್ಕೆ ಪಾದಾರ್ಪಣೆ ಮಾಡಲು ಕಳುಹಿಸಿದರು. ಆವೃತ್ತಿಯಲ್ಲಿ ಮೂರನೇ ಬಾರಿಗೆ ಕಾಣಿಸಿಕೊಂಡ ವಾಂಗ್ಜಮ್ ನಂತರ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾದರು.
ಆಟದ ಅಂತಿಮ ಕ್ಷಣಗಳಲ್ಲಿ, ಸಿಲ್ವೆಸ್ಟರ್ ಗೋಲ್ ಪಡೆಯುವ ಯತ್ನ ಕಾಣಿಸಿಕೊಂಡಾಗ ಚೆನ್ನೈಯಿನ್ ಅವರ ಗೋಲ್ ಪಡೆಯುವ ಅವಕಾಶ ಇತ್ತಾದರೂ, ಸ್ಲೊವಾಕಿಯ ವಾಸಿ ಮಾಡಿದ ಪ್ರಯತ್ನವನ್ನು ಮತ್ತೊಮ್ಮೆ ಗುರ್‌ಪ್ರೀತ್ ತಮ್ಮ ಸಮರ್ಥ ಕೈಗಳಿಂದ ತಡೆದು ಬ್ಲೂಸ್ ಗೆಲುವಿನ ಅಂಚಿಗೆ ಬರಲು ಕಾರಣರಾದರು.
ಮಂಗಳವಾರ ಫತೋರ್ಡಾದಲ್ಲಿ ನಡೆಯುವ ಮನೆಯಂಗಳದ ಪಂದ್ಯಗಳಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿಯನ್ನು ಎದುರಿಸುವ ಮುನ್ನ ಬೆಂಗಳೂರು ತಂಡಕ್ಕೆ ಚೇತರಿಸಿಕೊಳ್ಳಲು ಮೂರು ದಿನಗಳ ಅಲ್ಪ ವಿರಾಮ ದೊರೆತಿದೆ.