ಚಾಂಪಿಯನ್ ಎಟಿಕೆ ಮೋಹನ್ ಬಗಾನ್ ವಿರುದ್ಧ ಬೆಂಗಳೂರು ಎಫ್‌ಸಿಗೆ ಕಠಿಣ ಸವಾಲಿನ ನಿರೀಕ್ಷೆ

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಕ್ವಾಡ್ರಾಟ್ ಕಣ್ಣು…

ಮಾರ್ಗಾವಾ: ಗೋವಾದ ಫತೋರ್ದಾ ಕ್ರೀಡಾಂಗಣದಲ್ಲಿ ಸೋಮವಾರದ ಪಂದ್ಯ ರೋಚಕತೆ ಹೆಚ್ಚಿಸಿದೆ. ಅಂಕಪಟ್ಟಿಯಲ್ಲಿನ ಸ್ಥಾನಗಳ ಸ್ಪರ್ಧೆಯಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುವ ಬಿ.ಎಫ್.ಸಿ ಮತ್ತು ಎಟಿಕೆ ಮೋಹನ್ ಬಗಾನ್ ಹಗ್ಗ ಜಗ್ಗಾಟದ ರೋಮಾಂಚಕ ಬಲಪ್ರದರ್ಶನದ ಪಂದ್ಯದಲ್ಲಿ ನೇರಾನೇರ ಸೆಣೆಸಲಿದೆ.

ಕಾರ್ಲೆಸ್ ಕ್ವಾಡ್ರಾಟ್ ಅವರ ತಂಡವು ಅಂಕಪಟ್ಟಿಯ ಮೂರನೇ ಸ್ಥಾನದಲ್ಲಿದ್ದರೆ, ಎಟಿಕೆ ಮೋಹನ್ ಬಗಾನ್ ಎರಡನೇ ಸ್ಥಾನದಲ್ಲಿದೆ ಮತ್ತು ಸ್ಪೇನ್ ಗುರುವಿನ ಲೆಕ್ಕಾಚಾರದ ಪ್ರಕಾರ ಈ ಪಂದ್ಯದಿಂದ ಕೋಲ್ಕತ್ತಾ ತಂಡ ಬಿಎಫ್ಸಿ ತಂಡಕ್ಕೆ ಜಾಗ ಬಿಟ್ಟುಕೊಡುವ ಸಾಧ್ಯತೆ ಬಹಳಷ್ಟಿದೆ. ಅದರೊಂದಿಗೆ, ಈ ಸಂಘರ್ಷದಲ್ಲಿ ಕುತೂಹಲ ಹೆಚ್ಚಿಸುವ ಹಲವು ವಿಷಯಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ. “ನಾವು ಎಟಿಕೆಎಂಬಿ ವಿರುದ್ಧ ಆಡಲು ತಯಾರಾಗುತ್ತಿದ್ದಂತೆ ನಮ್ಮನ್ನು ಪ್ರೇರೇಪಿಸುವ ಕೆಲ ಅಂಶಗಳಿವೆ. ಕಳೆದ ಆವೃತ್ತಿಯ ಸೆಮಿಫೈನಲ್‌ನಲ್ಲಿ ನಮ್ಮನ್ನು ಸೋಲಿಸಿ ಆವೃತ್ತಿಯಿಂದ ಹೊರಹಾಕಿದ್ದ ತಂಡ ಇದೇ. ಅವರು ಎಎಫ್‌ಸಿ ಚಾಂಪಿಯನ್ಸ್ ಲೀಗ್ ಮತ್ತು ಎಎಫ್‌ಸಿ ಕಪ್ ಸ್ಲಾಟ್‌ಗಳಿಗಾಗಿ ನಮ್ಮೊಂದಿಗೆ ಹೋರಾಡುವ ತಂಡವೂ ಹೌದು. ಅದಿರಲಿ, ಕೇವಲ ಒಂದು ಅಂಶವು ನಮ್ಮನ್ನು ಅವರಿಂದ ಪ್ರತ್ಯೇಕಿಸುತ್ತದೆ. ಆದ್ದರಿಂದ, ಅವರ ವಿರುದ್ಧದ ಈ ಪಂದ್ಯ ಈ ಹಂತದಲ್ಲಿ ಬಹಳ ಕಠಿಣ ಸವಾಲಾಗಲಿದೆ.

ಎಟಿಕೆಎಂಬಿ, ಆಂಟೋನಿಯೊ ಹಬಾಸ್ ಮಾರ್ಗದರ್ಶನದಲ್ಲಿ ತಮ್ಮ ಆವೃತ್ತಿಯ ಸತತ 3 ಪಂದ್ಯಗಳಲ್ಲಿ ಗೆದ್ದು 9 ಅಂಕ ಪಡೆಯುವುದರೊಂದಿಗೆ ಉತ್ತಮ ಆರಂಭ ಪಡೆದುಕೊಂಡಿತು. ನಂತರ ಜಮ್ಶೆಡ್ಪುರ ತಂಡ ಚಾಂಪಿಯನ್ಸ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ಸೋಲುಣಿಸಿದ್ದರೊಂದಿಗೆ ಹಾದಿ ತಪ್ಪಿತು. ಎಟಿಕೆಎಂಬಿ ಆ ನಂತರ ಗೋವಾದ ವಿರುದ್ಧ ಜಯ ಸಾಧಿಸುವ ಮುನ್ನ ಹೈದ್ರಾಬಾದ್ ತಂಡದ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಒಟ್ಟಾರೆ ಈಗ ಅಂಕಪಟ್ಟಿಯ ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿದೆ.

ಈ ಮಧ್ಯೆ, ಬೆಂಗಳೂರು ತಮ್ಮ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಪಡೆದು ಆಟದಲ್ಲಿ ವೇಗ ಕಂಡುಕೊಂಡಿದೆ ಮತ್ತು ಹೈದರಾಬಾದ್ ಸೇರಿದಂತೆ ಆವೃತ್ತಿಯಲ್ಲಿ ಇನ್ನೂ ಸೋಲು ಕಾಣದ ಎರಡು ತಂಡಗಳಾಗಿ ಉಳಿದುಕೊಂಡಿದೆ. ಆದರೆ, ಬೆಂಗಳೂರು ತಂಡಕ್ಕೆ ಎದುರಾಗಿರುವ ಆಟದ ಬಗ್ಗೆ ಕ್ವಾಡ್ರಾಟ್ ಅವರಿಗೆ ಅರಿವಿದೆ.

“ಎಟಿಕೆ ಮೋಹನ್ ಬಗಾನ್ ದೈಹಿಕವಾಗಿ ಸವಾಲನ್ನು ಒಡ್ಡುತ್ತಾರೆ, ಅವರು ಕಠಿಣ ಆಟಗಾರರನ್ನು ಹೊಂದಿರುವ ತಂಡ. ಅವರ ಬಗ್ಗೆ ನಮಗೆ ತಿಳಿದಿದೆ; ಅವರು ಕೆಲವು ಉತ್ತಮ ಆಟಗಾರರನ್ನು ಹೊಂದಿದ್ದಾರೆ ಮತ್ತು ಅವರು ಹೆಚ್ಚಿನ ವೇಗದೊಂದಿಗೆ ಆಡುತ್ತಾರೆ. ಎಫ್‌ಸಿ ಗೋವಾ ವಿರುದ್ಧದ ಅವರ ಆಟದಲ್ಲಿ ಅವರ ಸಾಂಘಿಕ ಪ್ರದರ್ಶನವನ್ನು ಗಮನಿಸಿದ್ದೇವೆ ಮತ್ತು ಪ್ರತಿದಾಳಿಯ ಮೇಲೆ ಹಿಡಿತ ಸಾಧಿಸುವ ಪರಿ ಅದರೊಂದಿಗೆ ಮುಕ್ತ ಸ್ಥಳಗಳಲ್ಲಿ ಅವರು ಲಾಭ ಪಡೆಯಲು ಯತ್ನಿಸಿರುವುದು ತಿಳಿದಿದೆ. ”

ಮೂರು ವಾರಗಳ ಅವಧಿಯಲ್ಲಿ ಈ ಆಟವು ಬೆಂಗಳೂರಿನ ಐದನೆಯ ಪಂದ್ಯವಾಗಿದೆ ಮತ್ತು ಆಟ ಪ್ರಾರಂಭಿಸುವ ಬೆಂಗಳೂರು ತಂಡದಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆಯ ಸುಳಿವನ್ನು ಕ್ವಾಡ್ರಾಟ್ ನೀಡಿದ್ದಾರೆ. “ನಾವು ಸುಮಾರು 21 ದಿನಗಳಲ್ಲಿ ಐದು ಪಂದ್ಯಗಳನ್ನು ಆಡಿದ್ದೇವೆ, ಆದ್ದರಿಂದ ನಾವು ಪಿಚ್‌ನಲ್ಲಿ ಕೆಲ ನವ ಆಟಗಾರರನ್ನು ಕಣಕ್ಕಿಳಿಸಲಿದ್ದೇವೆ. ತಂಡವು ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ, ಆದರೆ ನಾವು ಬದಲಿಸಬೇಕಾಗಿದೆ. ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ಕಡಿಮೆ ನಿಮಿಷಗಳನ್ನು ಆಡಿದ ಆಟಗಾರರನ್ನು ಬಳಸಲು ನಾವು ಪ್ರಯತ್ನಿಸುತ್ತೇವೆ. ಆವೃತ್ತಿಯ ಮೊದಲ ಪಂದ್ಯದಿಂದಲೂ ಇದು ಆಟಗಾರರಿಗೆ ಕಷ್ಟಸಾಧ್ಯವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ”ಎಂದು ಕ್ವಾಡ್ರಾಟ್ ಹೇಳಿದರು.

ರಾಯ್ ಕೃಷ್ಣ ಎಟಿಕೆಎಂಬಿ ಪರ ಆರು ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿ ಅಗ್ರ ಫಾರ್ಮ್‌ನಲ್ಲಿದ್ದರೆ, ಇನ್ನೊಂದು ಬದಿಯಲ್ಲಿ ಕ್ಲೀಟನ್ ಸಿಲ್ವಾ ಮತ್ತು ಸುನಿಲ್ ಛೇತ್ರಿ ತಲಾ ಮೂರು ಗೋಲುಗಳನ್ನು ಹೊಂದಿದ್ದಾರೆ. ಆದಾಗ್ಯೂ, ಕ್ವಾಡ್ರಾಟ್ ಬಹಳ ಕಠಿಣವಾದ ಪಂದ್ಯವನ್ನು ಎದುರುನೋಡುತ್ತಿದ್ದು ಎರಡೂ ತಂಡಗಳ ಡಿಫೆನ್ಸ್ ಉತ್ತಮ ರಕ್ಷಣಾತ್ಮಕ ಆಟವನ್ನು ಆಡಲಿವೆ. “ಎಟಿಕೆಎಂಬಿ ಒಂದು ಕಾರಣಕ್ಕಾಗಿ ಚಾಂಪಿಯನ್ ಆಗಿತ್ತು. ತಮ್ಮ ದಾಳಿಯಲ್ಲಿ ಮತ್ತು ಡಿಫೆನ್ಸ್ ಅಲ್ಲಿ ಹೇಗೆ ಅಪಾಯಕಾರಿಯಾಗಿರಬಹುದು ಎಂದು ಅವರಿಗೆ ತಿಳಿದಿದ್ದುದು. ಅದನ್ನೇ ಸೋಮವಾರದಂದು ನಾವು ಎದುರಿಸಲು ಪ್ರಯತ್ನಿಸಬೇಕು ಮತ್ತು ತಪ್ಪಿಸಬೇಕು. ನಾವು ಸ್ಕೋರ್ ಮಾಡಲು ಸಾಕಷ್ಟು ಅವಕಾಶಗಳನ್ನು ರಚಿಸಬೇಕಾಗಿದೆ ಏಕೆಂದರೆ ಅವರು ರಕ್ಷಣಾತ್ಮಕವಾಗಿ ಉತ್ತಮವಾಗಿದ್ದಾರೆ, ಅವರು ಇಲ್ಲಿಯವರೆಗೆ ಕಡಿಮೆ ಗೋಲುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಉತ್ತಮ ರಕ್ಷಣಾತ್ಮಕ ರಚನೆಯನ್ನು ಬಳಸುತ್ತಾರೆ ಮತ್ತು ನಾವು ಅವರನ್ನು ಸೋಲಿಸಲು ಪ್ರಯತ್ನಿಸುತ್ತೇವೆ.

“ಇದು ಮತ್ತೆ ಅದೇ ರೀತಿಯ ಆಟವಾಗಲಿದೆ, ಅಲ್ಲಿ ಎರಡು ಸ್ಥಿರ ತಂಡಗಳು ನೇರಾನೇರ ಎದುರಿಸಲಿದ್ದು, ದಾಳಿಯಲ್ಲಿ ಬಹಳಷ್ಟು ಸಂಧರ್ಭದಲ್ಲಿ ಗೋಲ್ ಗಳಿಸುವುದು ಅಸಾಧ್ಯವಾಗಿರುತ್ತದೆ. ಡಿಫೆಂಡರ್ಸ್ ಸನ್ನಿವೇಶಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಮತ್ತು ಅದು ಫಲಿತಾಂಶವನ್ನು ನಿರ್ಧರಿಸುವ ಸಣ್ಣ ವಿಷಯವಾಗಿರುತ್ತದೆ ”ಎಂದು ಕ್ವಾಡ್ರಾಟ್ ಹೇಳಿದರು.

ಭಾನುವಾರದಂದು ಬಿಎಫ್ಸಿ ಆಶಿಕ್ ಕುರುನಿಯನ್ ಅವರ ಬಗ್ಗೆ ವಿಷಯ ತಿಳಿಸಿದೆ. ಒಡಿಶಾ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದ ಪಂದ್ಯದಲ್ಲಿ ಎದುರಾಳಿ ತಂಡದ ಆಟಗಾರನಿಗೆ ದೈಹಿಕವಾಗಿ ಡಿಕ್ಕಿ ಹೊಡೆದು ಮುಖದಲ್ಲಿ ಅನೇಕ ಗಾಯಗಳಿಂದ ಬಳಲುತ್ತಿದ್ದ ಆಶಿಕ್, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅವರ ಸ್ಥಿತಿ ಉತ್ತಮವಾಗಿದ್ದು, ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಹೇಳಲಾಗಿದೆ.

ಬ್ಲೂಸ್ ಮತ್ತು ಎಟಿಕೆ ಮೋಹನ್ ಬಗಾನ್ ನಡುವಿನ ಪಂದ್ಯ ಸೋಮವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security