ಗೆಲ್ಲುವ ವಿಶ್ವಾಸ ಇದ್ದರೂ ಎಚ್ಚರ ತಪ್ಪದ ಬೆಂಗಳೂರು ತಂಡ ಒಡಿಶಾ ಎಫ್.ಸಿ ವಿರುದ್ಧ ಸೆಣೆಸಾಟ

ಗೆಲುವುಗಳೇ ಕಾಣದ ತಂಡದ ವಿರುದ್ಧ ಆಡಿದರೂ ಜಾಗ್ರತೆಯಿಂದ ಎದುರಿಸುವಂತೆ ಕ್ವಾಡ್ರಾಟ್ ವಿಶ್ವಾಸ; ಮುನ್ನೆಚ್ಚರಿಕೆ ಕ್ರಮವಾಗಿ ಭೆಕೆ ಗೆ ವಿಶ್ರಾಂತಿ.

ಪಣಜಿ: ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಗುರುವಾರ ಬೆಂಗಳೂರು ಎಫ್‌ಸಿ ತಂಡವು ಗೆಲುವು ಕಾಣದ ಮತ್ತು ಹತ್ತನೇ ಸ್ಥಾನದಲ್ಲಿರುವ ಒಡಿಶಾ ಎಫ್‌ಸಿಯನ್ನು ಎದುರಿಸುವಾಗ ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲದೇ ಆಡುವುದಾಗಿ ಕಾರ್ಲೆಸ್ ಕ್ವಾಡ್ರಾಟ್ ಹೇಳಿದ್ದಾರೆ. ಸ್ಟುವರ್ಟ್ ಬ್ಯಾಕ್ಸ್ಟರ್ ತಂಡ, ಈ ಆವೃತ್ತಿಯಲ್ಲಿ ಇನ್ನೂ ಗೆಲುವು ದಾಖಲಿಸದ ಮೂರು ತಂಡಗಳಲ್ಲಿ ಒಬ್ಬರಾಗಿದ್ದು, ಇವರನ್ನು ಬೆಂಗಳೂರು ಎದುರಿಸಲಿದೆ ಮತ್ತು ಶೀಘ್ರದಲ್ಲೇ ಪಂದ್ಯಾವಳಿಯಲ್ಲಿ ಹಿಂತಿರುಗುವ ಪಣ ತೊಟ್ಟ ಒಡಿಶಾ ತಂಡ ಈಗ ಹೆಚ್ಚು ಅಪಾಯಕಾರಿಯಾಗಿರುತ್ತದೆ ಎಂದು ಕ್ವಾಡ್ರಾಟ್ ಅಭಿಪ್ರಾಯಪಟ್ಟಿದ್ದಾರೆ.

“ನನ್ನ ಆಟಗಾರರನ್ನು ನನಗೆ ಚೆನ್ನಾಗಿ ಅರಿತಿದ್ದೇನೆ, ಯಾವುದೇ ಪಂದ್ಯ ಚಿಕ್ಕದಲ್ಲ. ನಿರ್ಲಕ್ಷ್ಯಕ್ಕೆ ಆಸ್ಪದವಿಲ್ಲ. ನಾವು ತುಂಬಾ ಸ್ಪರ್ಧಾತ್ಮಕವಾಗಿದ್ದೇವೆ ಮತ್ತು ಒಡಿಶಾ ಎಫ್‌ಸಿ. ಅವರು ಪೂರ್ಣ ಅಂಕ ಗಳಿಸಲು ಪ್ರಯತ್ನಿಸುತ್ತಾರೆ, ನನಗೆ ನಂಬಿಕೆ ಇದೆ. ಇದು ಫುಟ್ಬಾಲ್. ಒಳ್ಳೆಯ ಫಲಿತಾಂಶಗಳನ್ನು ಪಡೆಯದ ತಂಡಗಳು, ಇದ್ದಕ್ಕಿದ್ದಂತೆ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ನಿಬ್ಬೆರಗಾಗಿಸಿರುವ ಸಂಧರ್ಭಗಳನ್ನು ನಾನು ಬಲ್ಲೆ. ಅಂತಹ ಆಟಗಳನ್ನು ನಾವು ನೋಡಿದ್ದೇವೆ. ಈ ಸಮಯದಲ್ಲಿ, ಒಡಿಶಾ ಅಪಾಯಕಾರಿ. ಅವರು ಮೂರು ಅಂಕಗಳಿಗಾಗಿ ಹೋರಾಡುತ್ತಿದ್ದಾರೆ ಆದರೆ ಅದು ಸಾಧ್ಯವಾಗಿಲ್ಲ. ಕೆಲವೇ ಪಂದ್ಯಗಳಲ್ಲಿ ಅವರು ಖಚಿತವಾಗಿ ಗೆಲ್ಲುತ್ತಾರೆ. ಅವರು ಗುಣಮಟ್ಟದ ಆಟಗಾರರು ಮತ್ತು ಉತ್ತಮ ತರಬೇತುದಾರರನ್ನು ಹೊಂದಿದ್ದಾರೆ. ನಾವೂ ಆಟಕ್ಕೆ ಸಿದ್ಧರಿದ್ದೇವೆ, ಆದರೆ ಅತಿಯಾದ ಆತ್ಮವಿಶ್ವಾಸವಿಲ್ಲ. ಐಎಸ್ಎಲ್ನಲ್ಲಿ ನಾವು ಯಾವುದೇ ತಂಡದ ವಿರುದ್ಧ ಲಕ್ಷ್ಯ ಕಳೆದುಕೊಳ್ಳುವುದಿಲ್ಲ ಏಕೆಂದರೆ ಈ ಸ್ಪರ್ಧೆಯನ್ನು ನಾವು ಚೆನ್ನಾಗಿ ತಿಳಿದಿದ್ದೇವೆ ಮತ್ತು ಇಲ್ಲಿ ಯಾವುದೇ ತಂಡವು ಯಾವುದೇ ದಿನ ಎದುರಾಳಿಯನ್ನು ಸೋಲಿಸಬಹುದು, ”ಎಂದು ಕ್ವಾಡ್ರಾಟ್ ಪಂದ್ಯದ ಮುನ್ನಾದಿನದಂದು ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.

ಆವೃತ್ತಿಯ ಆರಂಭದಲ್ಲಿ ಪರಿಪೂರ್ಣ ಅಂಕಗಳು ದೊರೆಯದೆ, ನಂತರ ಬೆಂಗಳೂರು ಎರಡು ಪಂದ್ಯಗಳನ್ನು ಗೆದ್ದು ವೇಗವನ್ನು ಪಡೆದುಕೊಂಡಿದೆ ಮತ್ತು ತಂಡ ಪ್ರದರ್ಶನದಲ್ಲಿಯೂ ಉತ್ತಮವಾಗುತ್ತಾ ಹೋಗಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ 4-2 ಅಂತರದ ಅಮೋಘ ಜಯ ಬ್ಲೂಸ್ನಲ್ಲಿ ಹೊಸ ಚಿಲುಮೆ ಸೃಷ್ಟಿಸಿದೆ. ಅದರೊಂದಿಗೆ ತಂಡದ ನಾಲ್ಕು ಆಟಗಾರರಿಂದ ಗೋಲ್ ಗಳಿಸಿರುವುದು, ಎದುರಾಳಿಗೆ ತಂಡದ ದಾಳಿಯಲ್ಲಿರುವ ಆಟಗಾರರ ಗುಣಮಟ್ಟದ ಬಗೆಗೆ ಹೇಳಿ ತೋರುವಂತಿದೆ.

ಒಡಿಶಾ ಇನ್ನೂ ತಮ್ಮ ಮೊದಲ ಗೆಲುವನ್ನು ದಾಖಲಿಸಬೇಕಾಗಿದೆಯಾದರೂ, ಅವರು ಕೆಲವು ಪಂದ್ಯಗಳಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಖಂಡಿತ ಅಂಕ ಪಡೆಯುವ ಶಕ್ತಿಯುಳ್ಳವರಾಗಿದ್ದಾರೆ. ಒಡಿಶಾ ತಂಡ ತಮ್ಮ ಕಳೆದ ಜಮ್ಶೆಡ್ಪುರ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಹದಿನೈದು ನಿಮಿಷಗಳವರೆಗೆ ಎರಡು ಗೋಲ್ ಬಿಟ್ಟುಕೊಟ್ಟು ಕೈಚೆಲ್ಲಿ ಕುಳಿತಿದ್ದರು ನಂತರದ ಆಟದಲ್ಲಿ ತೀವ್ರ ಹೋರಾಟ ನಡೆಸಿ ಬಹುಬೇಗ 2 ಗೋಲ್ ಪಡೆದು ಎದುರಾಳಿಗಳೊಂದಿಗೆ ಪಂದ್ಯ ಡ್ರಾ ಮಾಡಿಕೊಂಡು ಅಂಕಗಳನ್ನು ಹಂಚಿಕೊಂಡರು. ಮತ್ತೊಂದು ಪಂದ್ಯದಲ್ಲಿ ಇಡೀ ಆಟದಲ್ಲಿ ಮೇಲುಗೈ ಸಾಧಿಸಿ, ಎಡೆಬಿಡದೆ ಕಾಡಿದ ನಂತರ, ಆಟದ ಕೊನೆಯ ನಿಮಿಷದಲ್ಲಿ ಎಟಿಕೆ ಮೋಹನ್ ಬಗಾನ್ ವಿರುದ್ಧ 1-0 ಗೋಲುಗಳಿಂದ ಪಂದ್ಯ ಕಳೆದುಕೊಂಡಿದ್ದು ದುರದೃಷ್ಟಕರ.

ಗೆಲುವಿಗೆ ಕಠಿಣ ಒತ್ತಡ ಹೇರಲು ಒಡಿಶಾ ಶಕ್ತ ಆಟಗಾರರನ್ನು ಹೊಂದಿದೆ ಎಂದು ಕ್ವಾಡ್ರಾಟ್ ನಂಬಿದ್ದಾರೆ. “ಅವರು ಶಕ್ತಿಯುತ, ಅನುಭವಿ ಡಿಫೆಂಡರ್ ಗಳನ್ನು ಹೊಂದಿದ್ದಾರೆ, ಮೂಲದಲ್ಲಿ ಇದು ಬಹಳಷ್ಟು ತಂಡಕ್ಕೆ ಬಲತುಂಬಲಿದೆ. ನಾನು ವಿಶೇಷವಾಗಿ ಕೋಲ್ ಅಲೆಕ್ಸಾಂಡರ್ ಅವರನ್ನು ಇಷ್ಟಪಡುತ್ತೇನೆ; ಅವರು ತಂಡಕ್ಕೆ ಬಹಳಷ್ಟು ಕೊಡುಗೆ ನೀಡುತ್ತಾರೆ. ಪಿಚ್‌ನಲ್ಲಿ ಸಾಕಷ್ಟು ಸಾಧನೆ ಮಾಡುತ್ತಿರುವ ಆಟಗಾರರಲ್ಲಿ ಅವರು ಒಬ್ಬರು. ಎಂದಿನಂತೆ ಎದುರಾಳಿಯನ್ನು ಗಮನಿಸುವ ತಂತ್ರದಂತೆಯೇ ನಾನು ಅಧ್ಯಯನ ಮಾಡುತ್ತಿದ್ದೇನೆ ಮತ್ತು ನಾವು ಆಟವನ್ನು ನಿಯಂತ್ರಿಸಲು ಕೈಲಾದಷ್ಟು ಪ್ರಯತ್ನಿಸುತ್ತೇವೆ. ”

ತಂಡದಲ್ಲಿನ ಸುದ್ದಿಗಳ ಪ್ರಕಾರ, ಬ್ಲೂಸ್ನ ಡಿಫೆಂಡರ್ ರಾಹುಲ್ ಭೆಕೆ ಪಂದ್ಯದಲ್ಲಿ ಆಡುವುದು ಸಂದೇಹ ಎಂದು ಕ್ವಾಡ್ರಾತ್ ನುಡಿದಿದ್ದಾರೆ. “ರಾಹುಲ್ ಸ್ವಲ್ಪ ಸ್ನಾಯು ಸಮಸ್ಯೆಯೊಂದಿಗೆ ಕೇರಳ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲಿಲ್ಲ, ಆದರೆ ಗುರುವಾರ, ನಾವು ಅವರಿಗೆ ವಿಶ್ರಾಂತಿ ನೀಡಲಿದ್ದೇವೆ.”

ರಾತ್ರಿ 7.30 ಕ್ಕೆ ಆಟ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ.

Malcare WordPress Security