ಕ್ರಿಸ್ಟಿಯಾನ್ ಆಪ್ಸೆತ್, ಫ್ರಾನ್ ಗೊನ್ಜಾಲೆಸ್ ಅವರಿಗೆ ಬೆಂಗಳೂರು ಎಫ್ ಸಿ ಇಂದ ಆವೃತ್ತಿಯಾದ್ಯಂತಕ್ಕೆ ಒಪ್ಪಂದ

ನಾರ್ವೆ ಸ್ಟ್ರೈಕರ್ ಹಾಗೂ ಪ್ರತಿಭಾನ್ವಿತ ಸ್ಪ್ಯಾನಿಷ್ ಡಿಫೆಂಡರ್ 2020-21 ಸಾಲಿನ ಇಂಡಿಯನ್ ಸೂಪರ್ ಲೀಗ್ ನಲ್ಲಿ ತಂಡದಲ್ಲಿನ ಮೀಸಲು ವಿದೇಶಿ ಆಟಗಾರರ ಸ್ಥಾನವನ್ನು ತುಂಬಲಿದ್ದಾರೆ.

ಬೆಂಗಳೂರು: ಬೆಂಗಳೂರು ಎಫ್ಸಿ, ನಾರ್ವೇಯ ಸ್ಟ್ರೈಕರ್ ಕ್ರಿಸ್ಟಿಯಾನ್ ಆಪ್ಸೆತ್ ಮತ್ತು ಸ್ಪ್ಯಾನಿಷ್ ಸೆಂಟರ್-ಬ್ಯಾಕ್ ಫ್ರಾನ್ಸಿಸ್ಕೊ ‘ಫ್ರಾನ್’ ಗೊನ್ಜಾಲೆಸ್ ಅವರನ್ನು ನವೆಂಬರ್ ನಲ್ಲಿ ಆರಂಭವಾಗಲಿರುವ 2020-21 ರ ಇಂಡಿಯನ್ ಸೂಪರ್ ಲೀಗ್ ಗಾಗಿ ಒಪ್ಪಂದಗಳನ್ನು ಮಂಗಳವಾರ ಘೋಷಿಸಿತು. ಬ್ರೆಜಿಲಿಯನ್ ಮಿಡ್ಫೀಲ್ಡರ್ ರಾಫೆಲ್ ಅಗಸ್ಟೊ ಮತ್ತು ಸ್ಪ್ಯಾನಿಷ್ ಡಿಫೆಂಡರ್ ಆಲ್ಬರ್ಟೋ ಸೆರಾನ್ ಅವರ ನಿರ್ಗಮನ ಘೋಷಿಸಿದ ನಂತರ, ಇವರಿಬ್ಬರ ಆಗಮನದೊಂದಿಗೆ ತಂಡದಲ್ಲಿ ವಿದೇಶಿಯರಿಗೆ ಮೀಸಲಿದ್ದ ಆಟಗಾರರ ಸ್ಥಾನದ ಹಂಚಿಕೆ ಪೂರ್ಣಗೊಂಡಿದೆ.

6 ಅಡಿ 2 ಅಂಗುಲದ ಆಪ್ಸೆತ್, ನಾರ್ವೆಯ ಕೌಪಂಜೆರ್ ಐ ಎಲ್ ನಲ್ಲಿ ತಮ್ಮ ವೃತ್ತಿಪರ ಆಟವನ್ನು ಆರಂಭಿಸಿದ್ರು. ಅದಕ್ಕು ಮುನ್ನ ಫೋರ್ಡ್ , ಸೋಗ್ಡಲ್ ಮತ್ತು ಬೋಡೋ / ಗ್ಲಿಮ್ ಎಫ್ಸಿಯಲ್ಲಿನ ಸ್ಟಿನ್ಟ್ ಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. 30 ರ ಹರೆಯದ ಈ ಆಟಗಾರ 2018-19ರ ಕ್ರೀಡಾ ಆವೃತ್ತಿಯನ್ನು ಟರ್ಕಿಯಲ್ಲಿ ಇರ್ಝುರುಮ್ಫೋರ್ ಜೊತೆ ಎ-ಲೀಗ್ನಲ್ಲಿ ಇತ್ತೀಚೆಗೆ ಅಡೆಲೇಡ್ ಯುನೈಟೆಡ್ನೊಂದಿಗಿ ಆಡಿದರು.

“ಈ ಹೊಸ ಸವಾಲಿನಿಂದ ನಾನು ಉತ್ಸುಕನಾಗಿದ್ದೇನೆ. ಇಂಡಿಯನ್ ಸೂಪರ್ ಲೀಗ್ ಪ್ರತಿ ವರ್ಷವೂ ಉತ್ತಮಗೊಳ್ಳುತ್ತಿದೆ. ಆ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾನು ಕೊಡುಗೆ ನೀಡುವ ಆಶಯವಿದೆ. ನಾನು ಗೋವಾದಲ್ಲಿ ನನ್ನ ಹೊಸ ತಂಡದ ಸದಸ್ಯರನ್ನು ಭೇಟಿಯಾಗಲು ಹಾತೊರೆಯುತ್ತಿದ್ದೇನೆ ಏಕೆಂದರೆ ನಾವು ಒಟ್ಟಿಗೆ ಅಭ್ಯಸಿಸುವುದು ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ. ತರಬೇತುದಾರ ಕಾರ್ಲೆಸ್ ಕ್ವಾಡ್ರತ್ ಅವರೊಂದಿಗೆ ಮಾತನಾಡಿದ ನಂತರ ನನಗೆ ಉತ್ತಮ ಭಾವನೆ ಇದೆ ಮತ್ತು ಬೆಂಗಳೂರು ತಂಡ ಯಾವಾಗಲೂ ಪ್ರಬಲವಾದ ಪ್ರತಿಸ್ಪರ್ಧಿಯಾಗಿದ್ದು, ಪ್ರಶಸ್ತಿಯನ್ನು ಪಡೆಯುವ ನಂಬಿಕೆ ಹೊಂದಿದ್ದೇನೆ” ಎಂದು ಆಪ್ಸೆತ್, ಆವೃತ್ತಿಯಾದ್ಯಂತದ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೇಳಿದರು.

ನಾರ್ವೇಯ ಆಟಗಾರ ಇಂಡಿಯನ್ ಫುಟ್ಬಾಲ್ಗೆ ಹೊಸಬರಾಗಿದ್ದರೆ, ಒಪ್ಪಂದಕ್ಕೆ ಸಹಿ ಹಾಕಿದ ಸಹ ವಿದೇಶಿ ಆಟಗಾರ ಫ್ರಾನ್ ಗೊನ್ಜಾಲೆಜಸ್ ಈಗಾಗಲೇ 2019-20ರ ಐ-ಲೀಗ್ ಪ್ರಶಸ್ತಿ ವಿಜೇತರಾದ ಮೊಹನ್ ಬಗಾನ್ನೊಂದಿಗೆ ಆಡಿದ ಅನುಭವ ಹೊಂದಿದ್ದಾರೆ. ಈ ಸ್ಪಾನಿಯಾರ್ಡ್ – ಸೈಪ್ರಸ್, ಥೈಲ್ಯಾಂಡ್, ಪೋಲೆಂಡ್ ಮತ್ತು ಹಾಂಗ್ ಕಾಂಗ್ನಲ್ಲಿ ಸ್ಟಿಂಟ್ಗಳನ್ನು ಆಡಿದ ಅನುಭವ ಇದ್ದು, ಕಳೆದ ಆವೃತ್ತಿಯಲ್ಲಿ ಮ್ಯಾರಿನ್ನರ್ ಗೆ 10 ಗೋಲುಗಳನ್ನು ಗಳಿಸಿದ್ದು ಅಲ್ಲದೆ ಐ-ಲೀಗ್ನಲ್ಲಿ ಜಂಟಿ-ಎರಡನೇ ಅತಿ ಹೆಚ್ಚು ಗೋಲು ಗಳಿಸಿದವರಾಗಿದ್ದಾರೆ.

“ಭಾರತದಲ್ಲಿನ ಒಂದು ಆವೃತ್ತಿಯ ನಂತರ, ಬೆಂಗಳೂರು ಎಫ್ ಸಿ ಕ್ಲಬ್ ನಾನು ಊಹಿಸಿದಕ್ಕಿಂತಲು ದೊಡ್ಡದು ಎಂದು ನಾನು ಅರಿತುಕೊಂಡಿದ್ದೇನೆ. ಈ ಹೊಸ ಸವಾಲನ್ನು ಸ್ವೀಕರಿಸಿರುವ ನಾನು ತಂಡದ ಸದಸ್ಯರು ಮತ್ತು ತರಬೇತಿ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ಸವಾಲುಗಳನ್ನು ಎದುರಿಸಲು ಉತ್ಸುಕನಾಗಿದ್ದೇನೆ. ನಮ್ಮ ಅಭಿಮಾನಿಗಳಿಲ್ಲದೆ ಗೋವಾದಲ್ಲಿ ನಮ್ಮ ಪಂದ್ಯಗಳನ್ನು ಆಡುತ್ತಿರುವುದು ಖಚಿತವಾಗಿ ವಿಭಿನ್ನ ಆವೃತ್ತಿಯಾಗಿರಲಿದೆ, ಆದರೆ ನಾವು ತಂಡದಲ್ಲಿನ ಒಗ್ಗಟ್ಟಿನಿಂದ ಯಶಸ್ವಿಯಾಗಬಹುದೆಂದು ನನಗೆ ವಿಶ್ವಾಸವಿದೆ. ನಾನು ಆವೃತ್ತಿಯ ಆರಂಭಕ್ಕಾಗಿ ಕಾಯಲು ಸಾಧ್ಯವಾಗುತ್ತಿಲ್ಲ!” ಎಂದು ಒಂದು ವರ್ಷದ ಒಪ್ಪಂದಕ್ಕೆ ಸಹಿಮಾಡಿದ ನಂತರ ಗೊನ್ಜಾಲೆಸ್ ಹೇಳಿದರು.

ಕೋಚ್ ಕಾರ್ಲೆಸ್ ಕ್ವಾಡ್ರತ್, ಆಪ್ಸೆತ್ ಮತ್ತು ಗೊನ್ಜಾಲೆಸ್ ಅವರು ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ತಂಡಕ್ಕೆ ಇನ್ನಷ್ಟು ಬಲ ತುಂಬಲಿದೆ ಎಂದು ಹೇಳಿದರು. “ತಂಡಕ್ಕೆ ಈ ಆವೃತ್ತಿಯಲ್ಲಿ ಕ್ರೈಸ್ಟಿಯಾನ್ ಮತ್ತು ಫ್ರಾನ್ ಅವರ ಸೇರ್ಪಡೆಯಾಗಿರುವುದು ನಮಗೆ ಅತ್ಯಂತ ಸ್ಪರ್ಧಾತ್ಮಕ ತಂಡವನ್ನು ರಚಿಸುವಲ್ಲಿ ಸಹಾಯಮಾಡುತ್ತದೆ ಮತ್ತು ಅದನ್ನೇ ಬೆಂಗಳೂರು ಎಫ್.ಸಿ ಯಲ್ಲಿ ನಾವು ಆವೃತ್ತಿಯ ನಂತರ ಆವೃತ್ತಿಗಳಲ್ಲಿ ಪ್ರಯತ್ನಿಸುತ್ತಿದ್ದೇವೆ. ಫ್ರಾನ್ ಕಳೆದ ಆವೃತ್ತಿಯಲ್ಲಿ ಗೆಲುವಿನ ರುಚಿ ಕಂಡಿದ್ದಾರೆ ಮತ್ತು ಅವರಿಗೆ ಭಾರತೀಯ ಪರಿಸ್ಥಿತಿಗಳ ಬಗೆಗೆ ತಿಳುವಳಿಕೆ ಇದೆ. ಈ ಮಧ್ಯೆ, ಕ್ರಿಸ್ಟಿಯಾನ್ ಒಬ್ಬ ಅನುಭವಿ ಗೋಲ್ ಸ್ಕೊರರ್ ಆಗಿದ್ದು, ದೇಶೌರ್ನ್ ಬ್ರೌನ್ ಮತ್ತು ಕ್ಲಿಟಾನ್ ಸಿಲ್ವಾ ಅವರೊಂದಿಗೆ ಅವರು ನಮಗೆ ಆಟದಲ್ಲಿ ಅಗತ್ಯವಿರುವ ಬಲ ತುಂಬುತ್ತಾರೆ ಎಂಬ ವಿಶ್ವಾಸವಿದೆ.”

Malcare WordPress Security