ಕೇರಳ ವಿರುದ್ಧದ ಪಂದ್ಯದಲ್ಲಿ ಮತ್ತಷ್ಟು ಉತ್ತಮಗೊಳ್ಳುವತ್ತ ಬೆಂಗಳೂರು ಎಫ್.ಸಿ ಹೆಜ್ಜೆ

ಬ್ಲಾಸ್ಟರ್ಸ್ ತಂಡದ ನಮೋನೈಸು ಪಂದ್ಯದಿಂದ ಅಮಾನತ್ತು. ಭೆಕೆ, ಬ್ರೌನ್ ಸ್ನಾಯುಗಳ ಸಣ್ಣ ಸಮಸ್ಯೆಯಿಂದಾಗಿ ಆಡುವುದು ಅನುಮಾನ.

ಬೆಂಗಳೂರು ಎಫ್‌ಸಿ ಈ ಆವೃತ್ತಿಯ ತಮ್ಮ ಇಂಡಿಯನ್ ಸೂಪರ್ ಲೀಗ್ ನ ಅಜೇಯ ಆರಂಭವನ್ನು ಮುಂದುವರೆಸಲು ಪ್ರಯತ್ನಿಸಲಿದೆ ಮತ್ತು ಭಾನುವಾರ ಮಾರ್ಗಾವೊದ ಫತೋರ್ಡಾ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಮೂರು ಅಂಕಗಳನ್ನು ಪಡೆದು ಅಂಕ ಪಟ್ಟಿಯಲ್ಲಿ ದಾಖಲಿಸುವ ವಿಶ್ವಾಸದಲ್ಲಿದೆ.

ಕಾರ್ಲೆಸ್ ಕ್ವಾಡ್ರಾಟ್ ಹುಡುಗರು ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ತಮ್ಮ ಎದುರಾಳಿಯ ವಿರುದ್ಧದ ಈ ಗೆಲುವು ಬಹು ಮುಖ್ಯವಾಗಿದೆ. ಈ ಪಂದ್ಯದ ಫಲಿತಾಂಶ ಈ ತಿಂಗಳಲ್ಲಿನ ಒಡಿಶಾ, ಎಟಿಕೆ ಮೋಹನ್ ಬಗಾನ್ ಮತ್ತು ಜಮ್ಶೆಡ್ಪುರ್ ತಂಡಗಳ ವಿರುದ್ಧದ ಆಟಗಳಿಗೆ ಮಹತ್ವಪೂರ್ಣವಾಗಿದೆ.

ಈ ಮಧ್ಯೆ ಬ್ಲಾಸ್ಟರ್ಸ್ ಆವೃತ್ತಿಯಾರಂಭದಿಂದಲೂ ಉತ್ತಮ ಆರಂಭ ಪಡೆಯದೆ ವಿಫಲವಾಗಿದ್ದು, ಒಂಬತ್ತನೇ ಸ್ಥಾನದಲ್ಲಿ ಎರಡು ಡ್ರಾ ಮತ್ತು ಸೋಲುಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ. ಅವರ ಕಳೆದ ಪಂದ್ಯದ ಫಲಿತಾಂಶದಲ್ಲಿ ಎಫ್‌ಸಿ ಗೋವಾ ವಿರುದ್ಧ 3-1 ಗೋಲುಗಳ ಅಂತರದ ಸೋಲು ಕಂಡಿದೆ. ಕೇರಳ ತಂಡದ ಜಿಂಬಾಬ್ವೆಯ ಸೆಂಟರ್-ಬ್ಯಾಕ್ ಕೋಸ್ಟಾ ನಮೋನೈಸು ಅವರ ಅಮಾನತ್ತಿನ ಕಾರಣ ತಂಡದಿಂದ ಕೈಬಿಡಲಾಗಿದ್ದು ಭಾನುವಾರದ ಬೆಂಗಳೂರು ವಿರುದ್ಧದ ಪಂದ್ಯವನ್ನು ಅವರು ಆಡದೆ ಕಳೆದುಕೊಳ್ಳುತ್ತಾರೆ.

“ಕೇರಳ ಬ್ಲಾಸ್ಟರ್ಸ್ ಈವರೆಗೆ ಎರಡು ಅಂಕಗಳನ್ನು ಪಡೆದಿದ್ದಾರೆ ಮತ್ತು ಆವೃತ್ತಿಯಲ್ಲಿ ಎದುರಾಳಿಗಳಿಗೆ ಸವಾಲು ಎಸೆಯಲು ಮತ್ತಷ್ಟು ಪಂದ್ಯಗಳನ್ನು ಗೆಲ್ಲುವ ಅಗತ್ಯ ತಂಡಕ್ಕೆ ಇರುತ್ತದೆ. ನಾವು ಪಂದ್ಯಕ್ಕಾಗಿ ಯೋಜನೆಯನ್ನು ಹೊಂದಿದ್ದೇವೆ ಮತ್ತು ನಾವು ಎಂದಿನಂತೆ ಮೂರು ಅಂಕಗಳಿಗಾಗಿ ಹೋರಾಡುತ್ತೇವೆ. ಅಭಿಮಾನಿಗಳಿಗೆ ಬಹಳಷ್ಟು ಬೇಸರವಾಗಿರಬಹುದು ಏಕೆಂದರೆ ಬಹಳವಾಗಿ ಬೆಂಬಲಿಸಿ ತಂಡದ ಗೆಲುವಿನಲ್ಲಿ ಭಾಗಿಯಾಗಿರುತ್ತಿದ್ದರು ಮತ್ತು ಬಹಳಷ್ಟು ಆನಂದಿಸಬಹುದಾದಂತಹ ಆಟ ಇದಾಗಿತ್ತು. ಕಂಠೀರವ ಮತ್ತು ಕೇರಳದಲ್ಲಿನ ಕ್ರೀಡಾಂಗಣದಲ್ಲಿನ ವಾತಾವರಣವು ಉತ್ತಮವಾಗಿರುತಿತ್ತು. ಈ ಆವೃತ್ತಿಯಲ್ಲಿ ಇದು ಸಂಭವಿಸುವುದಿಲ್ಲ ಆದರೆ ಈ ಎರಡು ತಂಡಗಳು ಸ್ಪರ್ಧಿಸುವಾಗ ಇದು ಸಾಮಾನ್ಯವಾಗಿ ಅತ್ತ್ಯುತ್ತಮ ಆಟವಾಗಿರಲಿದೆ ಎಂದು ನನಗೆ ಖಾತ್ರಿಯಿದೆ, ”ಎಂದು ಕ್ವಾಡ್ರಾಟ್ ಆಟಕ್ಕೆ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.

ವಾರದ ಆರಂಭದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್‌ನೊಂದಿಗೆ ಅಂಕ ಹಂಚಿಕೊಳ್ಳದೇ ಬೆಂಗಳೂರು 2-1 ಮುನ್ನಡೆ ಸಾಧಿಸಿರಬಹುದಾಗಿತ್ತು, ಸಾಧ್ಯವಾಗಿರಲಿಲ್ಲ. ಆದರೆ ಕ್ವಾಡ್ರಾಟ್ ಆಟದಿಂದ ಕೆಲವು ಸಕಾರಾತ್ಮಕ ವಿಷಯಗಳನ್ನು ಪಡೆದುಕೊಂಡಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿನ ಉತ್ತಮ ಪ್ರದರ್ಶನದಿಂದ, ಬ್ಲೂಸ್ ತಮಗೆ ಪರಿಚಿತ ಗೆಲುವಿನ ಲಯದೊಂದಿಗೆ ಆವೃತ್ತಿಯಲ್ಲಿ ಮುಂದೆ ಸಾಗುತ್ತಿದೆ.

“ನಾವು ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಕಾಣುತ್ತಿದ್ದೇವೆ. ನಾವು ಹೈದರಾಬಾದ್ ಎಫ್‌ಸಿ ವಿರುದ್ಧ ಆಡಿದ್ದಕ್ಕಿಂತ ಚೆನ್ನೈಯಿನ್ ಎಫ್‌ಸಿ ವಿರುದ್ಧ ಉತ್ತಮವಾಗಿ ಆಡಿದ್ದೇವೆ ಮತ್ತು ಚೆನ್ನೈಯಿನ್ ಎಫ್‌ಸಿ ವಿರುದ್ಧ ನಾವು ಮಾಡಿದ್ದಕ್ಕಿಂತ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಉತ್ತಮವಾಗಿ ಆಡಿದ್ದೇವೆ. ವಾರದಿಂದ ವಾರಕ್ಕೆ ನಾವು ನಮ್ಮ ಅತ್ಯುತ್ತಮ ಗೆಲುವುಗಳ ಕಡೆಗೆ ಸಾಗುತ್ತಿದ್ದೇವೆ. ”

ಬ್ಲೂಸ್‌ ಯಾವುದೇ ಶಿಸ್ತು ಕ್ರಮಗಳ ನಿರ್ಬಂಧಗಳನ್ನು ಎದುರಿಸದಿದ್ದರೂ, ಕ್ವಾಡ್ರಾಟ್ ತನ್ನ ಒಂದೆರಡು ಆಟಗಾರರು ಸಣ್ಣ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. “ನಾವು ಪೂರ್ಣ ತಂಡವನ್ನು ಹೊಂದಿದ್ದೇವೆ ಮತ್ತು ನಾವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ, ಮತ್ತು ತರಬೇತುದಾರನಾಗಿ, ನಾನು ಹಲವಾರು ವಿಭಿನ್ನ ಸಂಯೋಜನೆಗಳನ್ನು ಹೊಂದಬಹುದು, ಅದು ಒಳ್ಳೆಯದು. ಈ ವಾರ ರಾಹುಲ್ ಭೆಕೆ ಮತ್ತು ದೇಶೋರ್ನ್ ಬ್ರೌನ್ ಸ್ನಾಯು ಸಮಸ್ಯೆಗಳಿರುವುದರಿಂದ ತಂಡದ ಪರ ಆಡುವುದಿಲ್ಲ. ಉಳಿದವರೆಲ್ಲರೂ ಸಿದ್ಧರಾಗಿದ್ದಾರೆ ಮತ್ತು ನಮ್ಮ ಅತ್ಯುತ್ತಮ ತಂಡವನ್ನು ಕೇರಳ ಬ್ಲಾಸ್ಟರ್ಸ್ ವಿರುದ್ಧ ಪಿಚ್‌ಗೆ ಇಳಿಸಲು ಪ್ರಯತ್ನಿಸುತ್ತೇವೆ. ”

ಕಳೆದ ಆವೃತ್ತಿಯ ಅಂತ್ಯದಲ್ಲಿ ಕೇರಳ ತಂಡದ ಪರ ಆಡಲು ಸಹಿ ಹಾಕುವ ಮೊದಲು ಐದು ಯಶಸ್ವಿ ಆವೃತ್ತಿಗಳಲ್ಲಿ ಬ್ಲೂಸ್‌ ಪರ ಆಡಿದ್ದ ನಿಶು ಕುಮಾರ್‌ ಮೊದಲ ಬಾರಿಗೆ ಎದುರಾಳಿ ತಂಡದಲ್ಲಿ ನಿಂತು ಆಡಲಿದ್ದಾರೆ.

ಫತೋರ್ದಾ ಕ್ರೀಡಾಂಗಣದಲ್ಲಿ ಕಿಕ್‌ಆಫ್ ಸಂಜೆ 7.30 ಕ್ಕೆ ನಿಗದಿಯಾಗಿದ್ದು, ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಜಿಯೋಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security