ಸಿ ಸತತ ಎರಡನೇ ಬಾರಿ ಫೈನಲ್ ತಲುಪಿದ ಬೆಂಗಳೂರು ಎಫ್ ಸಿ, ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ವಿರುದ್ದ 3-0 ಅಂತರದ ಭರ್ಜರಿ ಗೆಲುವು
ಬೆಂಗಳೂರು: ಮಿಕು, ಡಿಮಾಸ್ ಡೆಲ್ಯಾಡೊ ಮತ್ತು ನಾಯಕ ಸುನಿಲ್ ಛತ್ರಿ ದಾಖಲಿಸಿದ ಗೋಲ್‌ಗಳಿಂದ ಕಂಗೊಳಿಸಿದ ಬೆಂಗಳೂರು ಎಫ್ ಸಿ ಸೆಮಿಫೈನಲ್ ದ್ವಿತೀಯ ಲೆಗ್‌ನಲ್ಲಿ ನಾರ್ತ್‌ಈಸ್ಟ್ ಯುನೈಡೆಟ್ ಎಫ್ ಸಿ ವಿರುದ್ಧ ಭರ್ಜರಿ ಜಯ ಗಳಿಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸತತ ಎರಡನೇ ಬಾರಿ ಫೈನಲ್ ತಲುಪಿದೆ.
ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈವೋಲ್ವೇಜ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ 3-0 ಗೋಲ್‌ಗಳಿಂದ ಪ್ರವಾಸಿ ನಾರ್ತ್‌ಈಸ್ಟ್ ಯುನೈಟೆಡ್ ತಂಡವನ್ನು ಬಗ್ಗು ಬಡಿಯಿತು. ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಬಿಎಫ್ಸಿ 1-2ರಲ್ಲಿ ನಾರ್ತ್‌ಈಸ್ಟ್ ವಿರುದ್ಧ ಸೋತರೂ ದ್ವಿತೀಯ ಲೆಗ್‌ನಲ್ಲಿ 3-0 ಅಂತರದಲ್ಲಿ ಗೆದ್ದ ಕಾರಣ ಎರಡು ಪಂದ್ಯಗಳ ಸರಾಸರಿ ಗೋಲ್‌ಗಳ ಅಂತರದ (4-2) ಮೇರೆಗೆ ಬೆಂಗಳೂರು ಎಫ್ಸಿ ಫೈನಲ್ ಪ್ರವೇಶಿಸಿತು. ಬಿಎಫ್‌ಸಿ ಇದೇ 17ರಂದು ಮುಂಬಯಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಗೋವಾ ಅಥವಾ ಮುಂಬಯಿ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡದ ಪರ ಮಿಕು (72ನೇ ನಿಮಿಷ), ಡಿಮಾಸ್ ಡೆಲ್ಲಾಡೊ (87ನೇ ನಿಮಿಷ) ಮತ್ತು ಸುನಿಲ್ ಛ(90ನೇ ನಿ.) ತಲಾ ಒಂದು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು.
ಇದಕ್ಕೂ ಮುನ್ನ 72ನೇ ನಿಮಿಷದಲ್ಲಿ ಅಂತಿಮವಾಗಿ ಗೋಲ್ ದಾಖಲಿಸಿದ ಮಿಕು ಬಿಎಫ್ ಸಿ ಪಾಳಯದಲ್ಲಿ ಹರ್ಷೋದ್ಧಾರಕ್ಕೆ ಕಾರಣರಾದರು. ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ನೀಡಿದ ಪಾಸನ್ನು ಯಾವುದೇ ತಪ್ಪೆಸಗದೆ ಎದುರಾಳಿ ಗೋಲ್ ಕೀಪರ್ ಕಪ್ಪಿಸಿ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸುವಲ್ಲಿ ವೆನೆಜುವೆಲಾ ಆಟಗಾರ ಯಶ ಕಂಡರು. ಇದರೊಂದಿಗೆ ಬಿಎಫ್‌ಸಿ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು.
ಪಂದ್ಯ ಮುಕ್ತಾಯ ಕೊನೆಯ 30 ನಿಮಿಷಗಳಿರುವಾಗ ಬಿಎಫ್ಸಿ ಆಟಗಾರರ ಬದಲಾವಣೆಗೆ ಮುಂದಾಯಿತು. ಹೀಗಾಗಿ 68ನೇ ನಿಮಿಷದಲ್ಲಿ ಲಾಸ್‌ರೆಂಪುಯಾ ಫನಾಯ್ ಬದಲಿಗೆ ಶೌವಿಕ್ ಘೋಷ ಅಂಗಳಕ್ಕೆ ಮರಳಿದರು.ಈ ಹಂತದಲ್ಲಿ ನಾರ್ತ್‌ಈಸ್ಟ ತಂಡದ ಫೆಡೆರಿಕೊ ಗಲ್ಲೆಗೊ ಗಾಯಕ್ಕೆ ತುತ್ತಾಗಿ ತುರ್ತು ವೈದ್ಯಕೀಯ ಸೇವೆ ಮೂಲಕ ಮೈದಾನ ತೊರೆದರು.
ಮೊದಲಾರ್ಧ ಗೋಲ್ ರಹಿತವಾದ ಕಾರಣ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆಗೆ ಇನ್ನಿಲ್ಲದ ಹರಸಾಹಸ ನಡೆಸಿದವು. ಚೆಂಡಿನ ಮೇಲಿನ ನಿಯಂತ್ರಣದ ಯತ್ನದಲ್ಲಿ ಪ್ರಮಾದವೆಸಗಿದ ರಾಹುಲ್ ಭೆಕೆ 63ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಗೋಲ್ ಗಳಿಕೆ ಹಲವು ಅವಕಾಶಗಳನ್ನು ಕೈಚೆಲ್ಲಿದ ಬೆಂಗಳೂರು ಎಫ್ ಸಿ ಪಂದ್ಯದ ಪ್ರಥಮಾರ್ಧದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ವಿರುದ್ಧ ಮುನ್ನಡೆ ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ಹೀಗಾಗಿ ಮೊದಲಾರ್ಧ 0-0 ಗೋಲ್ ರಹಿತಗೊಂಡಿತು.
ದ್ವಿತೀಯ ಬಾರಿಗೆ ಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ಸುನಿಲ್ ಛತ್ರಿ ಬಳಗ ನಿರೀಕ್ಷೆಯಂತೆ ಚೆಂಡಿನ ಮೇಲೆ ನಿಯಂತ್ರಣ ಕಾಯ್ದುಕೊಂಡಿತು. ಆದರೆ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶ ಕಾಣಲಿಲ್ಲ.
ಪ್ರಥಮಾರ್ಧಲ್ಲಿ ಹ್ಯಾಟ್ರಿಕ್ ಗೋಲ್ ಬಾರಿಸುವ ಅವಕಾಶವನ್ನು ಮಿಕು ಯಶಸ್ವಿಯಾಗಿ ಬಳಸಿಕೊಳ್ಳದ ಕಾರಣ ಪ್ರವಾಸಿ ನಾರ್ತ್‌ಈಸ್ಟ್ ತಂಡ ನಿಟ್ಟಿಸಿರು ಬಿಟ್ಟಿತು. 33ನೇ ನಿಮಿಷದಲ್ಲಿ ಮಿಕು ಇನ್ನೇನು ಗೋಲ್ ಗಳಿಸಿತ್ತಾನೆ ಎನ್ನುವಷ್ಟರಲ್ಲಿ ದುರಾದೃಷ್ಟವಶಾತ್ ಪ್ರವಾಸಿ ಡಿಫೆಂಡರ್‌ಗಳು ದಿಟ್ಟ ರಕ್ಷಣೆ ಮಾಡಿದರು. ಹೀಗಾಗಿ ಮತ್ತೆ ಮೇಲುಗೈ ಸಾಧಿಸುವ ಆತಿಥೇಯರ ಆಸೆ ಈಡೇರಲಿಲ್ಲ. 25ನೇ ನಿಮಿಷದಲ್ಲೂ ಬಿಎಫ್ಸಿ ಪರ ಖಾತೆ ತೆರೆಯುವ ಅವಕಾಶವನ್ನು ಮಿಕು ಮಣ್ಣಾಗಿಸಿದರು. ಇದಕ್ಕೂ ಮುನ್ನ 23ನೇ ನಿಮಿಷದಲ್ಲಿ ನಿಶು ನೀಡಿದ ಚೆಂಡಿನ ಪಾಸನ್ನು ಹಿಡಿತಕ್ಕೆ ಪಡೆದ ಮಿಕು ಗೋಲ್ ಗಳಿಕೆಯ ಅದ್ಭುತ ಅವತಾಶ ಗಿಟ್ಟಿಸಿದರು. ಆದರೆ ವೆನೆಜುವೆಲಾ ಆಟಾಗರ ಹೆಡರ್ ಮೂಲಕ ಯತ್ನಿಸಿದ ಗೋಲಿನ ಯತ್ನ ಸಫಲವಾಗಲಿಲ್ಲ. ಹೀಗಾಗಿ ಆರಂಭದಲ್ಲೇ ಮುನ್ನಡೆ ಪಡೆಯುವ ಆತಿಥೇರ ಬ್ಲೂಸ್‌ಗೆ ಹಿನ್ನಡೆಯುಂಟಾಯಿತು.
ಪಂದ್ಯ ಆರಂಭವಾದ 3ನೇ ನಿಮಿಷದಲ್ಲಿ ನಿಶು ಅವರಿಂದ ಚೆಂಡು ಪಡೆದ ನಾಯಕ ಛತ್ರಿ ಗುರಿಯತ್ತ ಸಾಗಿಸುವಲ್ಲಿ ಎಡವಿದರು. ಇದಾದ 5 ನಿಮಿಷಗಳಲ್ಲಿ ಡಿಮಾಸ್ ಡೆಲ್ಗೊಡಾ ಚೆಂಡನ್ನು ಮಿಕು ಅತ್ತ ದೂಡಿದರು. ಆದರೆ ವೆನೆಜುವೆಲಾ ಆಟಗಾರ ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ವಿಫಲರಾದರು.