ಹಾಲಿ ಚಾಂಪಿಯನ್ಸ್ ಬ್ಲೂಸ್‌ಗೆ ಚೆನ್ನೈ ಸಿಟಿ ಸವಾಲು

ಹೈವೋಲೇಜ್ ಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ ಐಎಸ್ಎಲ್ ಮತ್ತು ಐ-ಲೀಗ್ ಚಾಂಪಿಯನ್ಸ್ ಮುಖಾಮುಖಿ ಇಂದು

ಭುವನೇಶ್ವರ: ಹಾಲಿ ಚಾಂಪಿಯನ್ಸ್ ಬೆಂಗಳೂರು ಎಫ್ ಸಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಹೀರೋ ಸೂಪರ್ ಕಪ್ ಟೂರ್ನಿಯ ಬಹುನಿರೀಕ್ಷಿತ ಕ್ವಾರ್ಟ‌್ರ ಫೈನಲ್ ಹಣಾಹಣಿಯಲ್ಲಿ ನೆರೆಯ ಚೆನ್ನೈ ಸಿಟಿ ಎಫ್ ಸಿ ತಂಡವನ್ನು ಎದುರಿಸುವುದರೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲಿದೆ.

ಐ-ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಪಟ್ಟ ಗೆದ್ದಿರುವ ಉಭಯ ತಂಡಗಳು ಇದೇ ಮೊದಲ ಸೂಪರ್‌ ಕಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯಲು ಎದುರು ನೋಡುತ್ತಿವೆ. “ಇದೊಂದು ಒಳ್ಳೆಯ ಪಂದ್ಯವಾಗಲಿದೆ. ದೇಶದ ಎರಡು ವಿಭಿನ್ನ ಟೂರ್ನಿಯ ವಿಜೇತ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಖಂಡಿತಾವಾಗಿಯೂ ಉತ್ತಮ ಪ್ರದರ್ಶನ ಹೊರಬರಲಿದೆ. ಚೆನ್ನೈ ಸಿಟಿ ತಂಡದ ಗುಣಮಟ್ಟದ ಕುರಿತು ನಮಗೆ ಅರಿವಿದೆ. ಏಕೆಂದರೆ ಅಭ್ಯಾಸ ಪಂದ್ಯಗಳಲ್ಲಿ ಅವರೊಂದಿಗೆ ನಾವು ಆಡಿದ್ದೇವೆ. ಅದರಲ್ಲೂ ನಮ್ಮನ್ನು ಸೋಲಿಸಿದ ಭಾರತದ ಏಕೈಕ ತಂಡ ಇದಾಗಿದೆ. ಹೀಗಾಗಿ ಅವರು ಅತ್ಯಂತ ಅಪಾಯಕಾರಿ ಎಂಬುದು ತಿಳಿದಿದೆ. ನಮಗೆ ಸಾಕಷ್ಟು ಸಮಸ್ಯೆಗಳನ್ನು ಅವರು ಸೃಷ್ಟಿಸಬಹುದು,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬ್ಲೂಸ್ ತಂಡದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಹೇಳಿದ್ದಾರೆ.

ಉಭಯ ತಂಡಗಳು ಬೇರೆ ಬೇರೆ ಕಾರಣಗಳನ್ನೊಳಗೊಂಡು ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿವೆ. ಬಿಎಫ್ಸಿ 16ರ ಸುತ್ತಿನಲ್ಲಿ ಮೋಹನ್ ಬಗಾನ್ ವಿರುದ್ದ ಬೈ ಪಡೆದರೆ, ಚೆನ್ನೈ ಸಿಟಿ ಕಳಿಂಗ ಕ್ರೀಡಾಂಗಣದಲ್ಲಿ ಸ್ಪರ್ಧಾತ್ಮಕವಾಗಿ ಆಡಿದ ಅನುಕೂಲ ಹೊಂದಿದೆ.

“ನಾವೆಲ್ಲರೂ ಫುಟ್ಬಾಲ್ ಆಡಲು ಉತ್ಸುಕರಾಗಿದ್ದೇವೆ, ಕೋಚ್‌ಗಳು ಮತ್ತು ಆಟಗಾರರು ಯಾವಾಗಲೂ ಪಂದ್ಯಗಳನ್ನಾಡಲು ಬಯಸುತ್ತಾರೆ. ಈ ಋತುವಿನಲ್ಲಿ ಎರಡು ಟ್ರೋಫಿ ಗೆಲ್ಲುವ ವಿಶೇಷ ಸಂದರ್ಭ ಒದಗಿ ಬಂದಿದೆ. ಹೀಗಾಗಿ ನಾವು ಸ್ಪರ್ಧಾತ್ಮಕವಾಗಿ ಆಡಲು ಬಯಸುತ್ತಿದ್ದು , ನಮ್ಮಿಂದಾಗುವ ಎಲ್ಲ ರೀತಿಯ ಪ್ರಯತ್ನ ನಡೆಸಿ ಫೈನಲ್ ಪ್ರವೇಶಿಸಲು ಯತ್ನಿಸಲಿದ್ದೇವೆ. ಇದೊಂದು ಕಠಿಣ ಟೂರ್ನಿ. ಏಕೆಂದರೆ ಜಯ ಗಳಿಸಿದ್ದಲ್ಲಿ ಉಳಿದ ಎಲ್ಲ ಪಂದ್ಯಗಳನ್ನು ಜಯಿಸಲೇಬೇಕು. ಒಂದು ಕೆಟ್ಟ ದಿನ ಎದುರಾದರೂ ಸ್ಪರ್ಧೆಯಿಂದಲೇ ಹೊರ ಬೀಳಬೇಕಾಗುತ್ತದೆ. ಹೀಗಾಗಿ ಎಲ್ಲ ಪಂದ್ಯಗಳು ಫೈನಲ್‌ನಂತೆಯೇ ಇರಲಿವೆ. ಆದರೆ ಹೋರಾಟಕ್ಕೆ ನಾವು ಸಿದ್ಧಗೊಂಡಿದ್ದೇವೆ,” ಎಂದು ಕ್ವಾಡ್ರಟ್ ನುಡಿದಿದ್ದಾರೆ.

ಅಕ್ಟರ್‌ ನವಾಜ್ ಸಾರಥ್ಯದ ಚೆನ್ನೈ ಸಿಟಿ ಎಫ್ಸಿ 16ರ ಸುತ್ತಿನಲ್ಲಿ ಎಫ್ ಸಿ ಪುಣೆ ಸಿಟಿ ವಿರುದ್ಧ 42ರಲ್ಲಿ ಗೆದ್ದು ಕ್ವಾರ್ಟ‌್ರ ಫೈನಲ್ ತಲುಪಿದೆ. ಪಂದ್ಯದ ದ್ವಿತೀಯಾರ್ಧದ ಬಹುತೇಕ ಸಮಯ ಕೇವಲ 10 ಮಂದಿಯೊಂದಿಗೆ ಆಡಿದ ಚೆನ್ನೆ ಕೊನೆಗೂ ಫಿಲಿ ಬ್ರೌನ್ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ತೇರ್ಗಡೆ ಗಳಿಸಿದೆ. ಈ ಪಂದ್ಯದಲ್ಲಿ ಪೆಟ್ರೋ ಮಾನ್ವಿ ಹ್ಯಾಟ್ರಿಕ್ ಗೋಲ್ ಗಳಿಸಿ ಚೆನ್ನೈ ತಂಡಕ್ಕೆ ಗೆಲುವು ತಂದ ಪಂದ್ಯದಲ್ಲಿ ಪೆಡೋ ಮಾಂಡವನ್ನು ಸೋಲಿಸಿ ಮುಂದಿನ.

ಸ್ಪೇನ್ ಆಟಗಾರ ಮಾನ್ವಿ ಬ್ಲೂಸ್ ತಂಡಕ್ಕೆ ಅತಿದೊಡ್ಡ ಸವಾಲೆನಿಸಿದ್ದಾರೆ. 18 ಪಂದ್ಯಗಳಲ್ಲಿ 21 ಗೋಲ್ ಗಳಿಸಿರುವ ಮಾನ್ವಿ ಐ-ಲೀಗ್‌ನಲ್ಲಿ ಅತ್ಯಧಿಕ ಗೋಲ್ ಗಳಿಸಿದ ಆಟಗಾರ ಎನಿಸಿದ್ದಾರೆ. ಅದರಲ್ಲೂ 16ನೇ ಸುತ್ತಿನಲ್ಲಿ ಪುಣೆ ವಿರುದ್ಧದ ಹ್ಯಾಟ್ರಿಕ್ ಗೋಲ್ ದಾಖಲಿಸಿದ ಸ್ಪೇನ್ ಆಟಗಾರ, ಋತುವಿನಲ್ಲಿ ಐದನೇ ಬಾರಿ ಈ ಸಾಧನೆ ಮಾಡಿದ್ದಾರೆ. “ ಚೆನ್ನೈ ತಂಡದಲ್ಲಿ ಗುಣಮಟ್ಟದ ವಿದೇಶಿ ಆಟಗಾರರಿರುವ ಬಗ್ಗೆ ನಮಗೆ ತಿಳಿದಿದೆ. ವಿಶೇಷವಾಗಿ ಮಾನ್ವಿ ಮಿಕುನಂತಹ ಆಟಗಾರನಾಗಿದ್ದಾರೆ. ಉಭಯ ಆಟಗಾರರು ತಂಡಗಳ ಪರ ಗೋಲ್‌ಗಳಿಸಲು ಎದುರು ನೋಡುತ್ತಾರೆ. ಮತ್ತಷ್ಟು ಗೋಲ್‌ಗಳಿಸಲು ಸಹ ಆಟಗಾರರು ಕೂಡ ಅವರಿಗೆ ಸದಾ ಯತ್ನಿಸುತ್ತಾರೆ. ಹಾಗಾಗಿ ಇದು ಆಸಕ್ತಿದಾಯಕ ಪಂದ್ಯವಾಗಲಿದೆ,” ಎಂದು ಸ್ಪೇನ್ ಕೋಚ್ ಹೇಳಿದ್ದಾರೆ. ಈ ಮಧ್ಯೆ ಬ್ಲೂಸ್ ಪ್ರಸಕ್ತ ಋತುವಿನಲ್ಲಿ ಭುವನೇಶ್ವರದಲ್ಲಿ ಏಕೈಕ ಪಂದ್ಯ ಆಡಿಲ್ಲ. ಬದಲಾಗಿ ಹಿಂದಿನ ಗಮನಾರ್ಹ ದಾಖಲೆಯೊಂದಿಗೆ ಕಣಕ್ಕಿಳಿಯತ್ತಿದೆ.

ಈ ನಗರದಲ್ಲಿ ಬೆಂಗಳೂರು ಯಾವುದೇ ಪಂದ್ಯ ಸೋತಿಲ್ಲ. ಅದರಲ್ಲೂ ಕಳಿಂಗ ಕ್ರೀಡಾಂಗಣದಲ್ಲಿ ಸಂಪೂರ್ಣ ದಾಖಲೆ ಹೊಂದಿದೆ. ಈ ಸ್ಥಳದಲ್ಲಿ ಆಡಿದ ಎಲ್ಲ ಐದು ಪಂದ್ಯಗಳಲ್ಲೂ ಬ್ಲೂಸ್ ಜಯಭೇರಿ ಬಾರಿಸಿದೆ. ಎಲ್ಲ ತಂಡಗಳ ವಿರುದ್ದವು ಗೆದ್ದಿದೆ. ತಂಡದಲ್ಲಿ ಸುದ್ದಿಯಲ್ಲಿ ಬೆಂಗಳೂರು ತಂಡವು ರಿನೋ ಆ್ಯಂಟೊ ಅಲಭ್ಯತೆಯೊಂದಿಗೆ ಕಣಕ್ಕಿಳಿಯುತ್ತಿದೆ. ರಿನೊ ಗಾಯಗೊಂಡಿರುವ ಕಾರಣ ಈ ಪ್ರವಾಸ ಕೈಗೊಂಡಿಲ್ಲ. ಈ ನಡುವೆ ಚೆನ್ನೆ ಚಾರ್ಲೆಸ್ ಲಾರ್‌ಡ ಕೂಡ ಅಲಭ್ಯರಾಗದ್ದಾರೆ.

ಪಂದ್ಯ ಗುರುವಾರ ರಾತ್ರಿ 8.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ.

Malcare WordPress Security