ಬ್ಲೂಸ್‌ಗೆ ಹೈಲ್ಯಾಂಡರ್ಸ್ ಸವಾಲು

ನಾರ್ತ್‌ಈಸ್ಟ್ ದಾಳಿಯ ಆತಂಕದಲ್ಲಿ ಬೆಂಗಳೂರು , ಎರಡು ಪಂದ್ಯಗಳ ಸೆಮಿಫೈನಲ್ ಪ್ಲೇ ಆಫ್ ಗುವಾಹಟಿಯಲ್ಲಿಂದು ಆರಂಭ

ಗುವಾಹಟಿ, ಅಸ್ಸಾಂ: ಇಲ್ಲಿನ ಇಂದಿರಾ ಗಾಂ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧದ ಎರಡು ಪಂದ್ಯಗಳ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಬೆಂಗಳೂರು ಎಫ್ ಸಿ, ಸತತ ಎರಡನೇ ಬಾರಿಗೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪ್ಲೇ ಆಫ್ ಹಂತದ ಅಭಿಯಾನ ಆರಂಭಿಸುತ್ತಿದೆ.

ಲೀಗ್ ಹಂತದಲ್ಲಿ ಉಭಯ ತಂಡಗಳ ಮುಖಾಮುಖಿ ವೇಳೆ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬೆಂಗಳೂರು ತಂಡ ನಾಲ್ಕು ಅಂಕ ಗಿಟ್ಟಿಸಿದೆ. ಆದರೆ ಪ್ಲೇ ಆಫ್ ಹಂತದಲ್ಲೂ ಹಿಂದಿನ ದಾಖಲೆಯನ್ನೇ ಕಾಯ್ದುಕೊಳ್ಳುವುದು ಸ್ಪೇನ್ ಮೂಲದ ಕಾರ್ಲೊಸ್ ಬಳಗದ ಕನಸಾಗಿದೆ. ಸದ್ಯದ ಸ್ಥಿತಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ.

ಟೂರ್ನಿಯಲ್ಲಿ ಗೆಲ್ಲಬೇಕಾದರೆ ಪ್ಲೇ ಆಫ್ ಪಂದ್ಯಗಳಲ್ಲಿ ನಾವು ಶ್ರೇಷ್ಠ ಪ್ರದರ್ಶನ ನೀಡಬೇಕಿದೆ. ನನ್ನ ಪ್ರಕಾರ ನಾವು ಸಾಕಷ್ಟು ಸ್ಥಿರ ಪ್ರದರ್ಶನ ನೀಡಿದ್ದೇವೆ. ಏಕೆಂದರೆ ಸಾಕಷ್ಟು ವಾರಗಳ ಕಾಲ ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದೇವೆ. ಕಳೆದ ಎರಡು ಆವೃತ್ತಿಗಳಿಂದ ನಾವು 74 ಅಂಕ ಕಲೆಹಾಕಿ ಎರಡು ಬಾರಿಯೂ ಅಗ್ರಸ್ಥಾನಿಯಾಗಿ ಹೋರಾಟ ಕೊನೆಗೊಳಿಸಿದ್ದೇವೆ. ಆದರೆ ಪ್ಲೇ ಆಫ್‌ನಲ್ಲಿ ಸೋಲು ಅಥವಾ ಗೆಲುವಿಗೆ ಇದು ಗಣನೆಗೆ ಬಾರದು, ಎಂದು ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಗುವಾಹಟಿಯಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಿದ್ದಾಗ ಕೊನೆಯ ಕ್ಷಣದಲ್ಲಿ ಚೆಂಚ್ ಗಿಲ್‌ಶೆನ್ ದಾಖಲಿಸಿದ ಗೋಲಿನಿಂದ ಬ್ಲೂಸ್ ತಂಡ , 1-1ರಲ್ಲಿ ಡ್ರಾ ಮಾಡಿಕೊಂಡಿತ್ತು. ಮತ್ತೆ ಬೆಂಗಳೂರಿನಲ್ಲಿ ನಡೆದ ಇತ್ತಂಡಗಳ ಮುಖಾಮುಖಿಯಲ್ಲಿ ಬೆಂಗಳೂರು ತಂಡದ 2-1ರ ಗೆಲುವಿಗೆ ಕಾಣಿಕೆ ನೀಡಿದ ಭೂತಾನ್ ವಿಂಗರ್ ಚೆಂಚೊ ಸದ್ಯ ನೆರೊಕಾ ಎಫ್ಸಿಗೆ ಲೋನ್ ಮೇಲೆ ತೆರಳಿದ್ದಾರೆ. ಪ್ರಸಕ್ತ ವರ್ಷ ಬೆಂಗಳೂರು ಎಫ್ಸಿ ಯಾವುದೇ ಗೆಲುವು ಸಾಸಿಲ್ಲ.

ಆದರೆ ತಂಡ ಉತ್ತಮ ಲಯದಲ್ಲಿಲ್ಲ ಎಂಬ ಮಾತುಗಳನ್ನು ಕೋಚ್ ಕಾರ್ಲೊಸ್ ತಳ್ಳಿ ಹಾಕಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬೆಂಗಳೂರು ತಂಡ ಉತ್ತಮ ಫಾರ್ಮ್‌ನಲ್ಲಿ ಇಲ್ಲ ಎಂದು ಹಲವರು ಮಾತನಾಡಿಕೊಂಡಿರುವುದನ್ನು ನಾನು ಕೇಳಿದ್ದೇನೆ. ಆದರೆ ಕ್ರಿಸ್‌ಮಸ್ ಇಂದೀಚಿಗೆ ನಾವು ಎರಡು ಪಂದ್ಯಗಳನ್ನು ಜಯಿಸಿದ್ದೇವೆ. ಇದು ನಾರ್ತ್ ಈಸ್ಟ್ ಮತ್ತು ಮುಂಬಯಿ ವಿರುದ್ಧ ಒಲಿದು ಬಂದಿದೆ. ಪ್ರಬಲ ಗೋವಾ ವಿರುದ್ಧವು ಬೆಂಗಳೂರಿನಲ್ಲಿ ಕೇವಲ ಹತ್ತು ಮಂದಿಯಿಂದ ಗೆದ್ದಿದ್ದೇವೆ. ಇದು ಫುಟ್ಬಾಲ್ ಆಟವಾಗಿರುವ ಕಾರಣ ಯಾವುದೇ ಫಾರ್ಮ್ ಬಗ್ಗೆ ನಂಬಿಕೆ ಇರಿಸಲಾಗದು, ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.

ಜಮ್ಶೆಡ್‌ಪುರ ಎಫ್ ಸಿ ವಿರುದ್ದದ ಅಂತಿಮ ಲೀಗ್ ಪಂದ್ಯದಲ್ಲಿ ಅಮಾನತಿಗೊಳಗಾದ ಕಾರಣ ಡಿಫೆಂಡರ್ ಗುರ್‌ಸಿಮ್ರತ್ ಸಿಂಗ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಬ್ಲೂಸ್ ಕಣಕ್ಕಿಳಿಯುತ್ತಿದೆ. ಇವರಲ್ಲದೆ ಋತುವಿನ ಇತರ ಪಂದ್ಯಗಳಿಗೆ ಅಲಭ್ಯರಾಗಿರುವ ಎರಿಕ್ ಪಾರ್ತಾಲು ಅವರ ಅನುಪಸ್ಥಿತಿಯೂ ಬಿಎಫ್ಸಿಗೆ ಕಾಡುತ್ತಿದೆ. ಇವರ ಸ್ಥಾನಕ್ಕೆ ಸ್ಪೇನ್‌ನ ಮಿಡ್ ಫೀಲ್ಡರ್ ಅಲೆಕ್ಸ್ ಬಾರೆರಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಎಲೆಕ್ಟ್ ಇತ್ತೀಚೆಗೆ ಅಲ್ಪಾವ ಒಪ್ಪಂದಕ್ಕೆ ಬ್ಲೂಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಲೀಗ್‌ನ ಆರಂಭಿಕ ಹಂತದಲ್ಲಿ ಪ್ರಮುಖ ಆಟಗಾರರಿಂದ ಹಲವು ಅಂಕ ಗಿಟ್ಟಿಸಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಅಂತಿಮ ಹಂತಕ್ಕೆ ಬರಲು ನಾನು ಬಯಿಸಿದ್ದೇನೆ. ಆದರೆ ಎರಿಕ್ ಪಾರ್ತಾಲು ಗಾಯಗೊಂಡಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈತ ತಂಡದ ಪ್ರಮುಖ ಮಿಡ್‌ಫೀಲ್ಡರ್ ಆಗಿದ್ದರು. ಇವರಲ್ಲದೆ ಗುರ್‌ಸಿಮ್ರತ್ ಅವರು ಅಲಭ್ಯತೆಯೂ ತಂಡಕ್ಕೆ ಕಾಡಲಿದೆ ಎಂದು ಕಾರ್ಲೋಸ್ ಹೇಳಿದ್ದಾರೆ. ಬೆಂಗಳೂರು ಎಫ್ ಸಿ ದೇಶಿಯ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸುವ ಅವಕಾಶ ಗಿಟ್ಟಿಸಿದ್ದು , ಹೊಸ ದಾಖಲೆ ಬರೆದಿದೆ.

ಕಳೆದ ಬಾರಿಯ ಸೆಮಿಫೈನಲ್‌ನಲ್ಲಿ ಎಫ್ಸಿ ಪುಣೆ ಸಿಟಿ ವಿರುದ್ಧ 3-1ರಲ್ಲಿ ಜಯ ಗಳಿಸಿದ್ದ ಬೆಂಗಳೂರು ಎಫ್ಸಿ ಪ್ರಶಸ್ತಿ ಸುತ್ತು ತಲುಪಿತ್ತು. ಇನ್ನೊಂದೆಡೆ ನಾರ್ತ್‌ಈಸ್ಟ್ ಯುನೈಟೆಡ್ ಇದೇ ಮೊದಲ ಲೀಗ್‌ನಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಿದೆ.

ಸ್ಮಾಟೊರೀಸ್ ಸಾರಥ್ಯದ ನಾರ್ತ್‌ಈಸ್ಟ್ ಲೀಗ್ ಹಂತದಲ್ಲಿ ಕೇವಲ 18 ಗೋಲ್ ಗಳಿಸಿದೆ. ಲೀಗ್ ಹಂತದಲ್ಲಿ 16 ಗೋಲ್ ಹಂಚಿಕೊಂಡಿರುವ ಸೈಕರ್ ಬಾರ್ಥೊಲೊಮೆವ್ ಒಗೈಚೆ ಮತ್ತು ಫೆಡೆರಿಕೊ ಗಿಗೊ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವಕ್‌, ಹಾಟ್‌ ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ.

Malcare WordPress Security