ಡೆಲ್ಲಿ ಪರೀಕ್ಷೆಗೆ ರಾಜಧಾನಿಗೆ ಬಂದಿಳಿದ ಬೆಂಗಳೂರು

ಗೆಲುವಿನ ಲಯಕ್ಕೆ ಮರಳುವತ್ತ ಬ್ಲೂಸ್ ಚಿತ್ತ , ಋತುವಿನ ಮುಂದಿನ ಪಂದ್ಯಗಳಿಗೆ ಎರಿಕ್ ಪಾರ್ತಾಲು ಅಲಭ್ಯ

ಹೊಸದಿಲ್ಲಿ: ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಡೆಲ್ಲಿ ಡೈನಮೋಸ್ ತಂಡವನ್ನು ಎದುರಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಲು ಬೆಂಗಳೂರು ಎಫ್ ಸಿ ತವಕಿಸುತ್ತಿದೆ ಎಂದು ಬಿಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ನುಡಿದ್ದಿದಾರೆ.

ಆದರೆ ಆಸ್ಟ್ರೇಲಿಯಾದ ಮಿಡ್‌ಫೀಲ್ಡರ್ ಎರಿಕ್ ಪಾರ್ತಾಲು ಋತುವಿನ ಇತರ ಪಂದ್ಯಗಳಿಗೆ ಅಲಭ್ಯರಾಗಿರುವುದು ಬಿಎಫ್ಸಿ ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಮೊಣಕಾಲು ಗಾಯಕ್ಕೆ ತುತ್ತಾಗಿರುವ ಪಾರ್ತಾಲು ಲೀಗ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಋತುವಿನಲ್ಲಿ ಬೆಂಗಳೂರು ಎಫ್ ಸಿ ಒಂದು ನಿರ್ಣಾಯಕ ಹಂತಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿ, ಇದೀಗ ಲೀಗ್‌ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗುತ್ತಿರುವ ಆಸೀಸ್ ಆಟಗಾರ ಕುರಿತು ಪ್ರತಿಕ್ರಿಯಿಸಿರುವ ಕೋಚ್ ಕ್ವಾಡ್ರಟ್, ಪ್ಲೇ ಆಫ್‌ಗೆ ಯಾವಾಗ ಹತ್ತೀರ ಎಂದು ಯೋಚಿಸುತ್ತೇವೆಯೋ ಆ ಸಮಯದಲ್ಲೇ ನಿರ್ಣಾಯಕ ಪಂದ್ಯದ ಬಗ್ಗೆ ಯೋಚಿಸಬೇಕಿದೆ. ದುರಾದೃಷ್ಟವಶಾತ್ ಚೆನ್ನೈಯಿನ್ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ಎರಿಕ್ ಪಾರ್ತಾಲು ಈ ಸಾಲಿನ ಇತರ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆದರೆ ಇದು ಫುಟ್ಬಾಲ್ ತಂಡದಲ್ಲಿ ಬದಲಾವಣೆ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಇಂತಹ ಪರಿಸ್ಥಿತಿ ನಿಭಾಯಿಸಲು ಯತ್ನಿಸಲಿದ್ದೇವೆ. ಎರಿಕಾ ಪಾರ್ತಾಲು ಹೊರಗುಳಿಯುತ್ತಿರುವುದು ನಿಜವಾಗಿಯೂ ಕಠಿಣದ ಪರಿಸ್ಥಿತಿಯಾಗಿದೆ. ಏಕೆಂದರೆ, ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿರುವ ಪಾರ್ತಾಲು ಒರ್ವ ಮಹತ್ವದ ಆಟಗಾರನಾಗಿದ್ದಾರೆ. ಆದರೆ ಈತನ ಗೈರು ಹಾಜರಾತಿಯಲ್ಲಿ ಇತರರು ಇದರ ಲಾಭ ಪಡೆಯಲಿದ್ದಾರೆ ಎಂದು ನಿರೀಕ್ಷಿಸಿದ್ದೇನೆ, ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.

31 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ತಂಡದ ಪ್ಲೇ ಆಫ್ ಸ್ಥಾನ ಶನಿವಾರ ಖಾತ್ರಿಯಾಗಬೇಕಾದರೆ ಜಮ್ಶೆಡ್‌ಪುರ ಎಫ್ಸಿ ಶನಿವಾರ ಎಫ್ಸಿ ಪುಣೆ ಸಿಟಿ ವಿರುದ್ಧ ಸೋಲಬೇಕಿದೆ. ಕೋಚ್ ಜೋಸೆಪ್ ಗೊಂಬಾಟ್ ಸಾರಥ್ಯದ ಡೈನಮೋಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಲೀಗ್‌ನಲ್ಲಿ ಎಲ್ಲಾ ತಂಡಗಳು ಅಪಾಯಕಾರಿ ಎಂದು ನಾನು ಎಂದಿಗೂ ನಂಬಿರುವ ಸತ್ಯವಾಗಿದೆ. ಹಾಗೆಯೇ ಡೆಲ್ಲಿ ಡೈನಮೋಸ್ ಸಹ ಭಿನ್ನ ತಂಡವಾಗಿದೆ. ಅವರು ಉತ್ತಮ ಕೋಚ್ ಅನ್ನು ಒಳಗೊಂಡಿದ್ದಾರೆ. ಮಿಶ್ರ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ಡೆಲ್ಲಿ ಉತ್ತಮ ಆಟವಾಡುತ್ತಿದೆ. ಕಳೆದವಾರ ಚೆನ್ನೈಯಿನ್ ವಿರುದ್ಧ ನಾವು ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ ಡೆಲ್ಲಿ ಮತ್ತು ನಮ್ಮ ತಂಡದ ಅಂಕಪಟ್ಟಿ ಸ್ಥಾನ ಫಲಿತಾಂಶದ ಮೇಲೆ ಪ್ರತಿಫಲಿಸುವುದಿಲ್ಲ. ಹೀಗಾಗಿ ಅವರು ಅಪಾಯಯಕಾರಿ ಎಂಬ ಎಚ್ಚರಿಕೆಯಲ್ಲೇ ಆಡಲಿದ್ದೇವೆ ಎಂದು ಕ್ವಾಡ್ರಟ್ ಹೇಳಿದ್ದಾರೆ.

ಶುಕ್ರವಾರ ರಾಜಧಾನಿ ನವದೆಹಲಿಗೆ ಆಗಮಿಸಿರುವ ಬ್ಲೂಸ್ ಸ್ವಲ್ಪಹೊತ್ತು ಅಭ್ಯಾಸ ನಡೆಸಿದೆ. ಚೆನ್ನೈಯಿನ್ ಎದುರಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಉದಾಂತ ಸಿಂಗ್, ಡಿಮಾಸ್ ಡೆಲ್ಲಾಡೊ ಮತ್ತು ಅಲ್ಬರ್ಟ್ ಸೆರಾನ್ ಮತ್ತೆ ತಂಡಕ್ಕೆ ಮರಳಿದ್ದಾರೆ.

ಮೊದಲ ಹಂತದಲ್ಲಿ ನೀರಸ ಪ್ರದರ್ಶನ ನೀಡಿರುವ ಡೆಲ್ಲಿ ಡೈನಮೋಸ್‌ ಮೂರನೇ ಗೆಲುವಿನತ್ತ ಎದುರುನೋಡುತ್ತಿದೆ. 2018ರ ಜನವರಿಯಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ 2-0 ಅಂತರದಲ್ಲಿ ಸೋಲುಂಡಿದ್ದ ಬೆಂಗಳೂರು ಡೆಲ್ಲಿ ವಿರುದ್ಧ ಒಮ್ಮೆಯೂ ಗೆದ್ದಿಲ್ಲ .

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್, ಕಲರ್ಸ್ ಕನ್ನಡ ಟಿವಿ ಮತ್ತು ಜಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ.

Malcare WordPress Security