ಬೆಂಗಳೂರು ಎಫ್ ಸಿಗೆ ಒಡಿಸಾ ಟೆಸ್ಟ್

ಕೋಚ್ ಜೋಸೆಫ್ ಗೊಂಬ್ ಸಾರಥ್ಯದ ಒಡಿಶಾ ಎಫ್ ಸಿ ವಿರುದ್ಧ ಗೆದ್ದು ಅಗ್ರ ಪಟ್ಟಕ್ಕೇರುವತ್ತ ಕಾರ್ಲೊಸ್ ಕ್ವಾಡ್ರಟ್ ಬಳಗದ ಕಣ್ಣು

ಬೆಂಗಳೂರು: ಕಳೆದ ವಾರ ಹೈದರಾಬಾದ್ ಎಫ್ ಸಿ ವಿರುದ್ಧ ಗೆಲುವಿನ ಅವಕಾಶ ಕಳೆದುಕೊಂಡು ನಿರಾಸೆ ಅನುಭವಿಸಿದ ಬೆಂಗಳೂರು ಎಫ್ ಸಿ, ಬುಧವಾರ ಪುಣೆಯ ಬಾಳೇವಾಡಿಯ ಶ್ರೀ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಐಎಸ್ ಎಲ್ ಪಂದ್ಯದಲ್ಲಿ ಒಡಿಶಾ ಎಫ್ ಸಿ ವಿರುದ್ದ ಪುಟಿದೇಳುವ ನಿಟ್ಟಿನಲ್ಲಿ ಸಿದ್ಧತೆಯಲ್ಲಿ ತೊಡಗಿದೆ.

ಪುಣೆಯಲ್ಲಿ ಬುಧವಾರ ನಡೆಯಲಿರುವ ಪಂದ್ಯವು ಲೀಗ್‌ನ ಏಳನೇ ಸುತ್ತಾಗಿದ್ದು , ಒಂದು ವೇಳೆ ಜೋಸೆಫ್ ಗೊಂಬ್‌ ಸಾರಥ್ಯದ ತಂಡದ ವಿರುದ್ಧ ಗೆದ್ದರೆ, ಬಿಎಫ್ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಪ್ರವಾಸಕ್ಕೂ ಮುನ್ನ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲೂಸ್ ಕೋಚ್ ಕಾರ್ಲೊಸ್ ಕ್ವಾಡ್ರಟ್, “ನಮ್ಮಂತೆಯೇ ಒಡಿಶಾ ಒಂದು ಉತ್ತಮ ತಂಡವಾಗಿದ್ದು , ಪಂದ್ಯದಲ್ಲಿ ತನ್ನ ಪರ ಗೋಲ್ ಬಾರಿಸಲು ಸದಾ ಯತ್ನಿಸುತ್ತದೆ. ಅವರು ತಮ್ಮ ವಿದೇಶಿ ಆಟಗಾರರ ಗುಣಮಟ್ಟದ ಲಾಭ ಪಡೆಯಲು ಎದುರು ನೋಡುತ್ತಿದ್ದಾರೆ.ಅದಕ್ಕಾಗಿ ನಾವು ಒಂದು ಯೋಜನೆಯನ್ನು ರೂಪಿಸಬೇಕಿದೆ,” ಎಂದು ಹೇಳಿದ್ದಾರೆ.

ಅಂಕಪಟ್ಟಿಯಲ್ಲಿ ಪ್ರಸ್ತುತ 6ನೇ ಸ್ಥಾನದಲ್ಲಿರುವ ಒಡಿಶಾ, ಕೊನೆಯ ಮೂರು ಪಂದ್ಯಗಳು ಅಂದರೆ ಚೆನ್ನೈಯಿನ್ ಎಫ್ಸಿ, ಎಟಿಕೆ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ಧ ಡ್ರಾ ಸಾಸಿದೆ. ಹೀಗಾಗಿ ಬುಧವಾರ ಧಾನಾತ್ಮಕ ಫಲಿತಾಂಶ ಪಡೆಯುವತ್ತ ಎದುರಾಳಿ ತಂಡ ಎದುರು ನೋಡುತ್ತಿದೆ ಎಂದು ಕ್ವಾಡ್ರಟ್ ನುಡಿದರು.

“ಚೆಂಡನ್ನು ಉಳಿಸಿಕೊಳ್ಳಲು ಒಡಿಶಾ ನಮ್ಮ ವಿರುದ್ದ ಹೋರಾಟ ನಡೆಸಲಿರುವ ಕಾರಣ ಈ ಪಂದ್ಯ ಆಸಕ್ತಿ ದಾಯಕವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಜೋಸೆಫ್ ಗೊಂಬೌ ಬಗ್ಗೆ ಅರಿವಿದೆ. ಅವರು ಕಷ್ಟಪಟ್ಟು ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿ ಮತ್ತು ಉತ್ತಮ ತರಬೇತುದಾರ. ಈ ಆವೃತ್ತಿಯಲ್ಲಿ ಕ್ರಿಸ್ಕೊ ಹೆರ್ನಾಂಡೆಜ್ ಮತ್ತು ಅರಿಡೇನ್ ಸ್ಯಾಂಟನಾ ಗುಣಮಟ್ಟದ ಆಟಕ್ಕಾಗಿ ವಿದೇಶಿಗರನ್ನು ಸೇರಿಸಿಕೊಂಡಿದ್ದಾರೆ. ಆದ್ದರಿಂದ ನಾವು ಇವರನ್ನು ಕಟ್ಟಿಹಾಕಲು ಏನಾದರೂ ಯೋಜನೆ ರೂಪಿಸಬೇಕಿದೆ,” ಎಂದು ಕ್ವಾಡ್ರಟ್ ಹೇಳಿದರು.

ಹೈದರಾಬಾದ್‌ನಲ್ಲಿ ತಡವಾಗಿ ರಾಬಿನ್ ಸಿಂಗ್ ಗೋಲ್ ಬಾರಿಸುವ ಮೂಲಕ ಬೆಂಗಳೂರು ತಂಡದ ಗೆಲುವಿಗೆ ಅಡ್ಡಿಪಡಿಸಿದರು.ಈ ಋತುವಿನಲ್ಲಿ ಅವರ ಮೊದಲ ಗೋಲು ಇದಾಗಿದೆ. ಆದರೆ ಇದನ್ನು ತಳ್ಳಿ ಹಾಕಿದ ಬೆಂಗಳೂರು ತಂಡದ ಕೋಚ್ ಕ್ವಾಡ್ರಟ್, ನಿಗದಿತ ಸಮಯದಲ್ಲೇ ಪಂದ್ಯ ಪೂರ್ಣಗೊಳಿಸಬೇಕಿತ್ತು ಎಂದಿದ್ದಾರೆ. “ನಾಳಿನ ಪಂದ್ಯ ಕಠಿಣವಾಗಿರುತ್ತದೆ ಎಂದು ನಾನು ನಿರೀಕ್ಷಿಸಿದ್ದೇನೆ. ಹೌದು, ಈ ಋತುವಿನಲ್ಲಿ ನಾವು ನಾಲ್ಕು ಪಂದ್ಯಗಳಲ್ಲಿ ಡಾ ಸಾಸಿದ್ದೇವೆ. ಆದರೆ, ಈ ಎಲ್ಲ ಪಂದ್ಯಗಳಲ್ಲೂ ನಾವು ಪ್ರಾಬಲ್ಯ ಸಾಸಿದ್ದೇವೆ. ಕೆಲವು ಅಂಶಗಳಲ್ಲಿ ನಾವು ಉತ್ತಮವಾಗಿದ್ದ ಕಾರಣ ಅದನ್ನು ನಾವು ಸುಧಾರಿಸಲು ತಂಡವಾಗಿ ಕೆಲಸ ಮಾಡುತ್ತಿದ್ದೇವೆ,”ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್‌ಸ್ಪೋರ್ಟ್ಸ್ ಹಾಗೂ ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ಇರಲಿದೆ.

Malcare WordPress Security