ಬಿಎಫ್ಸಿಗೆ ಹ್ಯಾಟ್ರಿಕ್ ಗೆಲುವಿನ ಗುರಿ

ಹೈದರಾಬಾದ್ ಪುಟಿದೇಳುವ ಆತಂಕದಲ್ಲಿ ಕಾರ್ಲೊಸ್ ಕ್ವಾಡ್ರಟ್ ಬಳಗ; ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಬ್ಲೂಸ್ ಕಣ್ಣು

ಹೈದರಾಬಾದ್: ಹೈದರಾಬಾದ್ ಹಾದಿಯಲ್ಲಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬೆಂಗಳೂರು ಎಫ್ ಸಿ, ಹೈದರಾಬಾದ್‌ನ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಂಕಪಟ್ಟಿಯ ಕೆಳ ಸ್ಥಾನಿ ಹೈದರಾಬಾದ್ ಎಫ್ಸಿ ವಿರುದ್ಧ ಗೆದ್ದು , ಹ್ಯಾಟ್ರಿಕ್ ಗೆಲುವಿನೊಂದಿಗೆ ಐಎಸ್ ಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.

ಆದರೆ, ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತು ತೀರಾ ಅಗತ್ಯ ತಿರುವು ಪಡೆಯಲು ಮನೆಯಂಗಳದ ಎಲ್ಲ ಅನುಕೂಲಗಳನ್ನು ಬಳಸಿಕೊಳ್ಳಲು ಎದುರು ನೋಡುತ್ತಿರುವ ಹೈದರಾಬಾದ್ ತಂಡವನ್ನು ಲಘವಾಗಿ ಪರಿಗಣಿಸದಿರಲು ಕ್ವಾಡ್ರಟ್ ಚಿಂತಿಸಿದ್ದಾರೆ. ಹೈದರಾಬಾದ್ ಅಂಕಗಳ ಅಗತ್ಯದಲ್ಲಿದೆ. ಆದ್ದರಿಂದ ಈ ಪಂದ್ಯ ನಮಗೆ ಕಠಿಣವಾಗಲಿದೆ.ವಿಶೇಷವಾಗಿ ಅವರು ಚೆನ್ನೈಯಿನ್ ವಿರುದ್ಧದ ಪಂದ್ಯದನ್ನು ಕಳೆದುಕೊಂಡ ನಂತರ ಅವರು ಅದರಿಂದ ಹೊರಬರಲು ಎದುರುನೋಡುತ್ತಿದ್ದಾರೆ. ಹೀಗಾಗಿ ಅವರು ಮುಂಚಿನ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡಲು ಹವಣಿಸುತ್ತಿದ್ದಾರೆ,” ಎಂದು ಸ್ಪೇನ್‌ನ ಕಾರ್ಲೋಸ್ ಹೇಳಿದ್ದಾರೆ.

ಒಂಬುತ್ತು ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಬೆಂಗಳೂರು ತಂಡ, ತನಗಿಂತ ಒಂದು ಅಂಕ ಹೆಚ್ಚು ಹೊಂದಿರುವ ಜಮ್ಶೆಡ್ಡುರ ಮತ್ತು ಎಟಿಕೆ ತಂಡಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಮೂರು ಡ್ರಾಗಳೊಂದಿಗೆ ಈ ಬಾರಿಯ ಋತು ಆರಂಭಿಸಿದ ಬೆಂಗಳೂರು, ಅಂಕಪಟ್ಟಿಯಲ್ಲಿ ಹಿಂದೆಂದೂ ಕಾಣದ ಕೆಳ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಆದಾಗ್ಯೂ ಚೆನ್ನೈಯಿನ್ ಎಫ್ ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳ ವಿರುದ್ಧ ಗೆಲ್ಲುವುದರೊಂದಿಗೆ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಪ್ರತಿ ಫುಟ್ಬಾಲ್ ಪಂದ್ಯವೂ ನನಗೆ ಚೆಸ್ ಆಟವಿದ್ದಂತೆ. ನೀವು ಯೋಜನೆಯ ಬಗ್ಗೆ ಯೋಚಿಸಬೇಕು, ನೀವು ಅದನ್ನು ಆಟಗಾರರಿಗೆ ವಿವರಿಸಬೇಕು. ನಂತರ ನೀವು ಸರಿಯಾಗಿ ಮುನ್ನಡೆಯುತ್ತಿದ್ದರೆಂದು ಖಚಿತಪಡಿಸಿಕೊಳ್ಳಬೇಕು, ಪ್ರತಿಯಾಟಕ್ಕೆ ತಯಾರಿ ಮಾಡುವಾಗ ನಾವು ಸಾಕಷ್ಟು ಕೆಲಸಗಳನ್ನು ಮಾಡುತ್ತೇವೆ ಮತ್ತು ಫಲಿತಾಂಶ ಪಡೆಯಲು ನಾವು ಹೇಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎನ್ನುವುದು ಇದು ತಿಳಿಯುತ್ತದೆ,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ವಾಡ್ರಟ್ ನುಡಿದರು. ಕಳೆದ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದ ಸೈಕರ್ ಮ್ಯಾನುಯೆಲ್ ಒನ್ನು ಮತ್ತು ಡಿಫೆಂಡರ್ ರಾಹುಲ್ ಭೇಕೆ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಬಿಎಫ್ಸಿ ಇದೆ. ಆದರೆ ಕ್ವಾಡ್ರಟ್ ಇವರ ಸೇರ್ಪಡೆ ಕುರಿತು ತಡವಾಗಿ ನಿರ್ಧಾರಿಸಲಾಗುವುದು ಎಂದಿದ್ದಾರೆ.

ತವರಿನ ತಂಡವು ತಮ್ಮದೇ ಆದ ಗಾಯದ ಸಮಸ್ಯೆಗಳಿಂದ ಕೂಡಿದೆ. ಚೆನ್ನೈಯಿನ್ ಎಫ್‌ಸಿ ವಿರುದ್ದ ಐದನೇ ಸುತ್ತಿನ ಪಂದ್ಯದಲ್ಲಿ ಆ ತಂಡ ಕೇವಲ ಐವರು ವಿದೇಶಿಗರೊಂದಿಗೆ ಕಣಕ್ಕಿಳಿದಿತ್ತು. ಹೀಗಾಗಿ ಬದಿ (ಮೀಸಲು ಆಟಗಾರರು)ಯಲ್ಲಿದ್ದ ಬಹುತೇಕ ಆಟಗಾರರು ಇದೀಗ ತಂಡಕ್ಕೆ ಮರಳುವಂತಾಗಿದೆ. ರಾಷ್ಟ್ರೀಯ ಸೇವೆಯಲ್ಲಿದ್ದಾಗ ಗಾಯಗೊಂಡಿದ್ದ ಪ್ರಮುಖ ಆಟಗಾರ ಆದಿಲ್ ಖಾನ್ ಅವರ ಲಭ್ಯತೆ ಸಹ ಅನುಮಾನವಾಗಿದೆ.

ವ್ಯತಿರಿಕ್ತ ರಕ್ಷಣಾತ್ಮಕ ಪ್ರದರ್ಶನಗಳ ಹಿನ್ನೆಲೆಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಕೇವಲ ಒಂದು ಗೋಲ್ ಬಿಟ್ಟುಕೊಟ್ಟಿರುವ ಬ್ಲೂಸ್ ಪ್ರಸ್ತುತ ಲೀಗ್‌ನಲ್ಲೇ ಅತ್ಯುತ್ತಮ ರಕ್ಷಣಾ ತಂಡ ಎನಿಸಿದೆ. ಆತಿಥೇಯ ತಂಡ 12 ಗೋಲ್‌ಗಳನ್ನು ಬಿಟ್ಟುಕೊಟ್ಟಿದೆ. ಸುನಿಲ್ ಛತ್ರಿ ಮತ್ತು ಮಾರ್ಸಿಲಿನ್ನೂ ತಲಾ ಎರಡು ಗೋಲ್‌ಗಳಿಂದ ಗೋಲ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

“ನೀವು ದೇಶದ ಅತ್ಯುತ್ತಮ ಸ್ಪೆಕರ್‌ಗಳಲ್ಲಿ ಒಬ್ಬರಾಗಿದ್ದಾಗ ನೀವು ತಂಡಕ್ಕೆ ಸಾಕಷ್ಟು ಕೊಡುಗೆ ನೀಡಬೇಕು ಮತ್ತು ತಂಡವು ನಿಮ್ಮ ಮೇಲೆ ಸಾಕಷ್ಟು ಅವಲಂಬಿಸಿರುತ್ತದೆ. ಛಿ ಈಗಾಗಲೇ ಎರಡು ಬಾರಿ ಗೋಲ್ ಬಾರಿಸಿದ್ದು, ಉತ್ತಮ ಸ್ಥಾನದಲ್ಲಿದ್ದಾರೆ. ಅವರ ಪ್ರದರ್ಶನ ನನಗೆ ತೃಪ್ತಿ ತಂದಿದೆ. ಕಳೆದ ಕೆಲುವು ಪಂದ್ಯಗಳಲ್ಲಿ ನಿಕಟ ಅವಕಾಶಗಳನ್ನು ಪಡೆದಿದ್ದ ಹೆಚ್ಚಿನ ಆಟಗಾರರನ್ನು ನಾವು ಹೊಂದಿದ್ದೇವೆ. ಎರಿಕ್ , ಉದಾಂತ ಮತ್ತು ಸೆಂಬೊಯಿ ಗೋಲ್ ಗಳಿಸಲು ಅವಕಾಶ ಹೊಂದಿದ್ದ ಆಟಗಾರರು. ಆದ್ದರಿಂದ ತಂಡವಾಗಿ ಅವಕಾಶಗಳನ್ನು ಸೃಷ್ಟಿಸುವುದು ಮುಖ್ಯವೇ ಹೊರತು ಕೇವಲ ಒಬ್ಬ ಆಟಗಾರರನ್ನು ಅವಲಂಬಿಸಿಲ್ಲ .” ಎಂದು ಗೋಲಿನ ಅವಕಾಶಗಳ ಸೃಷ್ಟಿಯ ಮಹತ್ವದ ಕುರಿತು ಕ್ವಾಡ್ರಟ್ ಹೇಳಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ಇರಲಿದೆ.

Malcare WordPress Security