ಬೆಂಗಳೂರು – ಬ್ಲಾಸ್ಟರ್ಸ್ ಹೋರಾಟಕ್ಕೆ ಕಂಠೀರವ ಸಜ್ಜು

ಎರಡು ವಾರಗಳ ನಂತರ ಬಹು ನಿರೀಕ್ಷಿತ ಐಎಸ್ ಎಲ್ ಪಂದ್ಯಕ್ಕೆ ಕಂಠೀರವ ಕ್ರೀಡಾಂಗಣ ಸಾಕ್ಷಿ

ಬೆಂಗಳೂರು: ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ದಾಖಲೆ ಪ್ರೇಕ್ಷಕರೊಂದಿಗೆ ನಡೆಯಲಿರುವ ಬೆಂಗಳೂರು ಎಫ್ ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಐಎಸ್ ಎಲ್ ಪಂದ್ಯಕ್ಕೆ ಎಲ್ಲ ರಸ್ತೆಗಳು ದಾರಿ ಮಾಡಿಕೊಡಲಿವೆ.

ಗುರುತಿಸಲಾದ ಮತ್ತು ಮತ್ತೆ ವೇಳಾಪಟ್ಟಿಯಲ್ಲಿ ಗುರುತಿಸಲಾದ ಪಂದ್ಯ ಇದಾಗಿದ್ದು , ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬ್ಲೂಸ್ ತಂಡವನ್ನು ಇದುವರೆಗೂ ಸೋಲಿಸದ ತಂಡದ ಮೇಲೆ ಪ್ರಾಬಲ್ಯ ಮುಂದುವರಿಸಲು ಎದುರು ನೋಡುತ್ತಿದೆ. ಭಾರತ ತಂಡದಲ್ಲಿ ಬೆಂಗಳೂರು ಎಫ್ಸಿ ಆರು ಆಟಗಾರರು ಸ್ಥಾನ ಪಡೆದಿದ್ದ ಕಾರಣ ಅಂತಾರಾಷ್ಟ್ರೀಯ ವಿರಾಮದ ಬಳಿಕ ಲೀಗ್ ಪುನರರಾಂಭವಾಗುತ್ತಿದೆ.

ಶುಕ್ರವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್, “ವಿರಾಮಕ್ಕೂ ಮುನ್ನ ನಾವು ಉತ್ತಮ ಫಲಿತಾಂಶವನ್ನು ಕಂಡಿದ್ದೇವೆ. ಆದರೆ ಇತರ ಪಂದ್ಯಗಳಲ್ಲೂ ನಾವು ಅಂಕ ಗಳಿಸಲು ಅರ್ಹವಾಗಿದ್ದೇವು. ಕ್ಯಾಲೆಂಡರ್ ಏನೇ ಇರಲಿ. ಆದರೆ ರಾಷ್ಟ್ರೀಯ ಕರ್ತವ್ಯಕ್ಕೆ ತೆರಳಿದ್ದ ಆಟಗಾರರು ಸಕ್ರಿಯರಾಗಿದ್ದು ಶನಿವಾರದ ಆಟಕ್ಕೆ ತಾಜಾವಾಗಿರುತ್ತಾರೆ ಎಂದು ಸಕಾರಾತ್ಮಕವಾಗಿ ಹೇಳಬಹುದು,” ಎಂದಿದ್ದಾರೆ.

ಉಭಯ ತಂಡಗಳ ಹಣಾಹಣಿಯ ಟಿಕೆಟ್ ಮಾರಾಟಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಕಾರ್ಲೊಸ್, ಕೇರಳಾ ವಿರುದ್ಧ ಪಂದ್ಯದ ನನೆಪು ಉತ್ತಮವಾಗಿದೆ. ಕಳೆದ ಋತುವಿನಲ್ಲಿ ಇದೇ ವೇಳಾಪಟ್ಟಿಯಲ್ಲಿ 2-2ರಲ್ಲಿ ಡ್ರಾ ಸಾಸಿದ್ದೇವು ಎಂದರು. ಶನಿವಾರ ಕ್ರೀಡಾಂಗಣ ತುಂಬಿರುತ್ತದೆ ಎಂದು ನಾನು ಕೇಳಿದ್ದರಿಂದ ನಾನು ಈ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದ ಆ ತಂಡದ ವಿರುದ್ಧ ಆಡಿದ ಉತ್ತಮ ಅನುಭವಗಳಿವೆ. ಸಾಕಷ್ಟು ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಆಗಮಿಸುವುದರಿಂದ ಫುಟ್ಬಾಲ್ ದೃಷ್ಟಿಯಿಂದ ಇದು ಯಾವಾಗಲೂ ಒಳ್ಳೆಯದು,” ಎಂದು ಸ್ಪೇನ್‌ನ ಕ್ವಾಡ್ರಟ್ ನುಡಿದರು.

ಕೇರಳ ವಿರುದ್ಧ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಅಂಕಪಟ್ಟಿಯ ಐದನೇ ಸ್ಥಾನಿ ಬೆಂಗಳೂರು ತಂಡದ ಕೋಚ್ ಕ್ವಾಡ್ರಟ್, ಕಳೆದ ಬಾರಿ ನಾಲ್ಕು ಸಲ ಈಶ್ಮಿ ಷಟ್ಟೋರಿ ಅವರನ್ನು ಎದುರಿಸಿದ್ದಾರೆ. ನಾರ್ತ್‌ಈಸ್ಟ್ ಯುನೈಟೆಡ್‌ನ ಪ್ರಧಾನ ಕೋಚ್ ಆಗಿದ್ದ ಡಚ್‌ನ ಎಲ್ಲೊ , ಕಠಿಣ ತಂಡದ ವಿರುದ್ದ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಬಲಗೊಳ್ಳುವುದನ್ನು ಎದುರು ನೋಡುತ್ತಿದೆ, ಎಂದಿದ್ದಾರೆ. ನಾಲ್ಕು ಅಂಕ ಹೊಂದಿರುವ ಕೇರಳ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

“ಮೊದಲ ಮೂರು ಪಂದ್ಯಗಳಲ್ಲಿ ಮತ್ತಷ್ಟು ಅಂಕ ಗಳಿಸಲು ನಾವು ಮತ್ತಷ್ಟು ಅರ್ಹರಾಗಿದ್ದೇವು. ಆದರೆ ಈ ಋತುವಿನಲ್ಲಿ ನಾವು ಪಿಚ್‌ನಲ್ಲಿ ಹೆಜ್ಜೆ ಹಾಕಿದಾದಲೆಲ್ಲಾ ಅದನ್ನು ನಿಯಂತ್ರಿಸುತ್ತೇವೆ ಎಂಬ ವಿಶ್ವಾಸದಿಂದ ನಾವು ವಿಶ್ವಾಸ ಮೂಡಿಸಿದ್ದೇವು. ಈಗ ಕಠಿಣ ತಂಡದ ವಿರುದ್ಧ ಆಡುತ್ತಿರುವ ಕಾರಣ ತಂಡದ ಯೋಜನೆಗಳಲ್ಲಿ ಬದಲಾವಣೆಗೆ ಒತ್ತು ನೀಡಲಿದ್ದೇವೆ,” ಎಂದು ಕಾರ್ಲೊಸ್ ಹೇಳಿದರು.

ಟೂರ್ನಿಯಲ್ಲಿ ಅಜೇಯ ದಾಖಲೆ ಹೊಂದಿರುವ ಮೂರರಲ್ಲಿ ಒಂದೆನಿಸಿರುವ ಬಿಎಫ್‌ಸಿ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ 3-0 ಅಂತರದಲ್ಲಿಲ ಜಯ ಗಳಿಸಿದೆ. ಇದಕ್ಕಿನ್ನೂ ಮಹತ್ವ ಎಂದರೆ ಕ್ವಾಡ್ರಟ್ ತಂಡ ಆಡಿದ ನಾಲ್ಕು ಪಂದ್ಯಂಗಳ ಪೈಕಿ ಎಫ್‌ಸಿ ಗೋವಾ ವಿರುದ್ಧ ಏಕೈಕ ಪೆನಾಲ್ಟಿ ಗೋಲ್ ಬಿಟ್ಟುಕೊಟ್ಟಿದೆ.

ಗೆಲುವಿನೊಂದಿಗೆ ಋತು ಆರಂಭಿಸಿದ ಬ್ಲಾಸ್ಟರ್ಸ್, ನಂತರ ಎರಡು ಸೋಲು ಕಂಡಿತು. ಬಳಿಕ ತನ್ನ ಕೊನೆಯ ಪಂದ್ಯದಲ್ಲಿ ಡ್ರಾ ಸಾಸಿ ಅಂಕ ಹಂಚಿಕೊಂಡಿದೆ. ಪ್ರವಾಸಿ ತಂಡ ಖಂಡಿತಾವಾಗಿಯೂ ಅಂಕಪಟ್ಟಿಯಲ್ಲಿ ಮೇಲೇರಲು ಎಲ್ಲ ರೀತಿಯಲ್ಲೂ ಯತ್ನಿಸುವುದರಲ್ಲಿ ಅನುಮಾನವಿಲ್ಲ.

ಎರಡು ವಾರಗಳ ಹಿಂದೆ ನಡೆದ ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ಪೇನ್ ಆಟಗಾರ ಸೆರೈನ್ ತರಬೇತಿಗೆ ಮರಳಿರುವುದನ್ನು ಕ್ವಾಡ್ರಟ್ ಸ್ವಾಗತಿಸಿದ್ದಾರೆ. ಆದರೆ ಮಂಗಳವಾರ ಒಮಾನ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ಒಳಗಾಗಿರುವ ರಾಹುಲ್ ಭೇಕೆ ಸಜ್ಜುಗೊಳಿಸಲು ವೈದ್ಯಕೀಯ ತಂಡ ನಿರತವಾಗಿದೆ.

ಪ್ರವಾಸಿ ತಂಡದ ಸ್ಥಿತಿ ನಿಕೃಷ್ಟವಾಗಿದೆ. ಗಾಯದಿಂದ ಬಳಲುತ್ತಿರುವ ಸೆಂಟ್ರಲ್ ಡಿಫೆಂಡರ್‌ಗಳಾದ ಜೈರೊ ರೋಡ್ರಿಗಸ್ ಮತ್ತು ಗಿಯಾನ್ನಿ ಜುಯಿವೆರ್ಲೂನ್ ಶನಿವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಮಧ್ಯೆ ಸ್ಪೇನ್ ಮಿಡ್‌ಫೀಲ್ಡರ್ ಮಾರಿಯಾ ಅರ್ಕಿಸ್ ಸಹ ಅಲಭ್ಯರಾಗುವ ಸಾಧ್ಯತೆ ಇದೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ಇರಲಿದೆ. ಪಂದ್ಯ ವೀಕ್ಷಿಸಲು ಶ್ರೀಕಂಠೀವ ಕ್ರೀಡಾಂಗಣಕ್ಕೆ ಶನಿವಾರ ಆಗಮಿಸುವ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ. ಏಕೆಂದರೆ ಮೈದಾನದ ಆವಣರದಲ್ಲಿ ಪಾಕಿಂಗ್ ವ್ಯವಸ್ಥೆ ಚಿಕ್ಕದಾಗಿದೆ.

Malcare WordPress Security