ಛತ್ರಿ, ಪಾರ್ತಾಲು ಕಾಲ್ಬಳಕ, ಗೆಲುವಿನ ಖಾತೆ ತೆರೆದ ಬಿಎಫ್‌ಸಿ

ಚೆನ್ನೈಯಿನ್ ಎಫ್ ಸಿ ವಿರುದ್ದ ಕಾರ್ಲಸ್ ಕ್ವಾಡ್ರಟ್ ಬಳಗಕ್ಕೆ 3-0 ಗೋಲ್‌ಗಳ ಅಂತರದ ಭರ್ಜರಿ ಗೆಲುವು

ಬೆಂಗಳೂರು: ನಾಯಕ ಸುನಿಲ್ ಛಟ್ರಿ , ಎರಿಕ್ ಪಾರ್ತಾಲು ಮತ್ತು ಸಂಬೊಯಿ ಅವರ ಕಾಲ್ಬಳಕದ ನೆರವಿನಿಂದ ಬೆಂಗಳೂರು ಎಫ್ ಸಿ ಪ್ರಸಕ್ತ ಎಎಸ್ಎಲ್ ಟೂರ್ನಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದದಲ್ಲಿ ಭಾನುವಾರ ನಡೆದ ದಕ್ಷಿಣ ಡರ್ಬಿ ಪಂದ್ಯದ ಉಭಯ ಅವಗಳಲ್ಲಿ ಪಾರಮ್ಯ ಸಾಸಿದ ಸುನಿಲ್ ಛಟ್ರಿ ಸಾರಥ್ಯದ ಬಿಎಫ್ಸಿ 3-0 ಗೋಲ್‌ಗಳಿಂದ ಮಾಜಿ ಚಾಂಪಿಯನ್ಸ್ ಚೆನ್ನೈಯಿನ್ ಎಫ್ ಸಿ ವಿರುದ್ದ ಅಕಾರಯುತ ಜಯ ಗಳಿಸಿ ಪೂರ್ಣ ಮೂರು ಅಂಕ ಕಲೆಹಾಕಿತು. ಆತಿಥೇಯ ನ್ಯೂಸ್ ಪರ ಎರಿಕ್ ಪಾರ್ತಾಲು (14ನೇ ನಿಮಿಷ), ಸುನಿಲ್ ಛತ್ರಿ (25ನೇ ನಿಮಿಷ) ಮತ್ತು ಸಂಬೋಯಿ (84ನೇ ನಿಮಿಷ) ತಲಾ ಒಂದು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು. ಇದಕ್ಕೂ ಮುನ್ನ ಬಿಎಫ್ಸಿ ನಾರ್ತ್‌ಈಸ್ಟ್ ಯುನೈಟೆಡ್, ಎಫ್‌ಸಿ ಗೋವಾ ಮತ್ತು ಜಮ್ಶೆಡ್ಡುರ ಎಫ್ಸಿ ವಿರುದ್ದ ಕೇವಲ ಡ್ರಾ ಸಾಸಿ ತಲಾ ಒಂದು ಅಂಕ ಹಂಚಿಕೊಂಡಿತ್ತು. ಒಟ್ಟಾರೆ 6 ಅಂಕ ಹೊಂದಿರುವ ಬಿಎಫ್ಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.

2-0 ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು ತಂಡ ಪಂದ್ಯದ ಕೊನೆಯವರೆಗೂ ರಕ್ಷಣಾ ಕೋಟೆಯನ್ನು ಬಿಗಿಗೊಳಿಸದಲ್ಲದೆ ಮತ್ತೊಂದು ಗೋಲ್ ಬಾರಿಸಿ ಜಯದ ಅಂತರವನ್ನು 3-0ಗೆ ವಿಸ್ತರಿಸಿಕೊಂಡಿತು. ಆದರೆ ಚೆನ್ನೈಯಿನ್ ಮೂರನೇ ಸೋಲಿಗೆ ತುತ್ತಾಗುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಸ್ಥಿರಗೊಂಡಿತು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಿಡ್‌ಫೀಲ್ಡರ್ ಎರಿಕ್ ಪಾರ್ತಾಲು ಮತ್ತು ಶೈಕರ್‌ ಸುನಿಲ್ ಛತ್ರಿ ಅವರ ಸಾಹಸದಿಂದ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ಎಫ್ ಸಿ ಮೊದಲಾರ್ಧಕ್ಕೆ 2-0 ಅಂತರದಲ್ಲಿ ಮುನ್ನಡೆ ಗಳಿಸಿತು. 26ನೇ ನಿಮಿಷದಲ್ಲಿ ರಫೀಲ್ ಆಗಸ್ಟೋ ನೀಡಿದ ಉತ್ತಮ ಪಾಸನ್ನು ಸಮರ್ಥವಾಗಿ ಬಳಸಿಕೊಂಡ ನಾಯಕ ಸುನಿಲ್ ಛತ್ರಿ, ಗೋಲ್ ಕೀಪರ್ ಕಪ್ಪಿಸಿ ತಂಡದ 2ನೇ ಹಾಗೂ ಋತುವಿನ ಮೊದಲ ಗೋಲ್ ಬಾರಿಸಿದರು. ಇದರೊಂದಿಗೆ ಆತಿಥೇಯ ತಂಡ ಮುನ್ನಡೆಯನ್ನು 2-0ಗೆ ವಿಸ್ತರಿಸಿತು. 20ನೇ ನಿಮಿಷದಲ್ಲಿ ಪಾರ್ತಾಲು ಮತ್ತೊಮ್ಮೆ ಹೆಡರ್ ಮೂಲಕ ಗೋಲಿನ ಯತ್ನ ನಡೆಸಿದರು. ಆದರೆ ಚೆಂಡು ಆತಿಥೇಯ ತಂಡದ ಗೋಲ್ ಕೀಪರ್ ವಿಶಾಲ್ ಕೈಥ್‌ ಕೈಸೇರಿತು.

ಆರಂಭದಲ್ಲಿ ಮುನ್ನಡೆ ಗಳಿಸಲಾಗದಿದ್ದರೂ ಕೊನೆಗೂ ಪ್ರವಾಸಿ ರಕ್ಷಣಾ ಕೋಟೆ ಭೇದಿಸಿದ ಎರಿಕ್ ಪಾರ್ತಾಲು 14ನೇ ನಿಮಿಷದಲ್ಲಿ ಬಿಎಫ್ಸಿ ಪರ ಗೋಲಿನ ಖಾತೆ ತೆರೆದು 1-0 ಅಂತರದ ಆರಂಭಿಕ ಮುನ್ನಡೆ ಕಲ್ಪಿಸಿದರು. ಪಾದದ ಗಾಯದಿಂದಾಗಿ ಋತುವಿನ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದ ಪಾರ್ತಾಲು ಈ ಸಾಲಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗೋಲ್ ಸಿಡಿಸಿ ಆತಿಥೇಯ ಅಭಿಮಾನಿಗಳ ಮನ ಗೆದ್ದರು. ಡಿಮಾಸ್ ಅವರಿಂದ ನೆರವು ಪಡೆದ ಪಾರ್ತಾಲು ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು.

ಇದಾದ ಎರಡನೇ ನಿಮಿಷಗಳ ಅಂತರದಲ್ಲಿ ಆತಿಥೇಯರಿಗೆ ಮತ್ತೊಂದು ಗೋಲ್ ಗಳಿಕೆಯ ಅವಕಾಶ ದೊರೆಯಿತ್ತಾದರೂ ಆಟಗಾರರ ಹೊಂದಾಣಿಕೆಯ ಕೊರತೆಯಿಂದ ವಿಫಲಗೊಂಡಿತು. ನಂತರ ಪ್ರವಾಸಿ ಚೆನ್ನೈಯಿನ್ ಮೇಲೆ ಒತ್ತಡ ಮುಂದುವರಿಸಿದ ಸುನಿಲ್ ಛಟಿ ಬಳಗ 11ನೇ ನಿಮಿಷದಲ್ಲಿ ರಫೀಲ್‌, ಛತ್ರಿ ಮತ್ತು ಡಿಮಾಸ್ ತಂಡಕ್ಕೆ ಮುನ್ನಡೆ ತರುವ ಅವಕಾಶ ಕೈಚೆಲ್ಲಿದರು. ಆದರೆ ಆತಿಥೇಯರ ಆಕ್ರಮಣಕಾರಿ ಆಟ ಮಾತ್ರ ಮುಂದುವರಿಯಿತು.

ಟಾಸ್ ಗೆದ್ದ ಆತಿಥೇಯ ಬಿಎಫ್ಸಿ ಎಡ ಬದಿಯಿಂದ ಆಟ ಆರಂಭಿಸಿದರು. ಪಂದ್ಯ ಆರಂಭಗೊಂಡ ಮೂರೇ ನಿಮಿಷದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಸಿದ, ರಾಹುಲ್ ಭೇಕೆ ಚೆಂಡನ್ನು ಪಾರ್ತಾಲು ಬಳಿ ದೂಡಿದರು. ಪಾರ್ತಾಲು ಹೇಡರ್ ಮೂಲಕ ಗೋಲಿನ ಯತ್ನ ನಡೆಸಿದರೂ ಚೆಂಡು ಕೀಪರ್ ಕೈಸೇರಿತು. ಪ್ರಸಕ್ತ ಋತುವಿನ ಮೂರು ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ಹೊರಹಾಕಿದರೂ ಪೂರ್ಣ ಅಂಕ ಕಲೆಹಾಕುವಲ್ಲಿ ಎಡವಿದ್ದ ಬೆಂಗಳೂರು ಎಫ್ಸಿ ಭಾನುವಾರ ಮನೆಯಂಗಳದಲ್ಲಿ ಪೂರ್ಣ ಅಂಕದ ಗುರಿಯೊಂದಿಗೆ ಮಾಜಿ ಚಾಂಪಿಯನ್ಸ್ ಚೆನ್ನೈಯಿನ್ ಎಫ್ಸಿ ವಿರುದ್ಧ ಕಣಕ್ಕಿಳಿಯಿತು.

ಬೆಂಗಳೂರು ಎಫ್ಸಿ ಮುಂದಿನ ಪಂದ್ಯದಲ್ಲಿ ಇದೇ ತಿಂಗಳ 23ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡವನ್ನು ಎದುರಿಸಲಿದೆ.