ಮತ್ತೆ ಒಂದಂಕಕ್ಕೆ ತೃಪ್ತಿಪಟ್ಟ ಬೆಂಗಳೂರು ಎಫ್ ಸಿ

ಜಮ್ಶೆಡ್ಡುರ ಎಫ್ಸಿ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಸುನಿಲ್ ಚೆಟ್ರಿ ಬಳಗ, ಕ್ವಾಡ್ರಟ್ ಪಡೆಗೆ ಮರಿಚಿಕೆಯಾದ ಗೆಲುವು

ಜಮ್ಶೆಡ್ಡುರ: ಮೊದಲಾರ್ಧದಲ್ಲಿ ದೊರೆತ ಗೋಲ್ ಗಳಿಕೆಯ ಹಲವು ಅವಕಾಶಗಳನ್ನು ಕೈಚೆಲ್ಲಿದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್‌ನ ತನ್ನ ಮೂರನೇ ಪಂದ್ಯದಲ್ಲಿ ಜಮ್ಶೆಡ್ಡುರ ಎಫ್ಸಿ ವಿರುದ್ದ ಡ್ರಾ ಸಾಸಲಷ್ಟೇ ಶಕ್ತಗೊಂಡಿದೆ.

ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ ಮತ್ತು – ಜಮ್ಶೆಡ್ಡುರ ಎಫ್ಸಿ (0-0) ಗೋಲ್ ರಹಿತ ಸಮಬಲ ಸಾಸಿದವು. ಹೀಗಾಗಿ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರೊಂದಿಗೆ ಬಿಎಫ್ಸಿ ಸತತ ಮೂರು ಡ್ರಾದೊಂದಿಗೆ ಕೇವಲ 3 ಅಂಕ ಗಳಿಸಿದೆ.

ಋತುವಿನಲ್ಲಿ ಗೆಲುವಿನ ಖಾತೆ ತೆರೆಯುವ ನಿಟ್ಟಿನಲ್ಲಿ ಸ್ಟಾರ್ ಆಟಗಾರರಾದ ಉದಾಂತ ಸಿಂಗ್, ನಾಯಕ ಸುನಿಲ್ ಛಟ್ರಿ ಮತ್ತು ಆಗಸ್ಟೋ ನಡೆಸಿದ ಎಲ್ಲಾ ಗೋಲಿನ ಯತ್ನಗಳು ಒಮ್ಮೆಯೂ ಕೈಗೂಡಲಿಲ್ಲ .ಇದಕ್ಕೆ ಗೋಲ್ ಕೀಪರ್ ಸುಬ್ರತಾ ಪಾಲ್ ಸಹ ಅವಕಾಶ ಕಲ್ಪಿಸಲೂ ಇಲ್ಲ. ಕೊನೇ ಹತ್ತು ನಿಮಿಷಗಳಲ್ಲಿ ಎರಡೂ ತಂಡಗಳ ಆಟಗಾರರು ಆಟಗಾರರ ಬದಲಾವಣೆಗೆ ಒತ್ತು ನೀಡಿದರು. ಆದರೆ ಇದ್ಯಾವುದು ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ .ಇಪ್ಪತ್ತು ನಿಮಿಷಗಳು ಬಾಕಿ ಇರುವಾಗ ಉಭಯ ತಂಡಗಳು ಗೋಲಿಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದರೂ ರಕ್ಷಣಾ ಪಡೆ ಮಾತ್ರ ಗೋಲ್ ಬಿಟ್ಟುಕೊಡಲಿಲ್ಲ. ಹೀಗಾಗಿ 80 ನಿಮಿಷ ಕಳೆದರೂ ಇತ್ತಂಡಗಳ ಹೋರಾಟ 0-0ಯಿಂದಲೇ ಮುಂದುವರಿಯಿತು.

54 ಮತ್ತು 57ನೇ ನಿಮಿಷಗಳಲ್ಲಿ ಆತಿಥೇಯ ಜಮ್ಶೆಡ್ಡುರ ತಂಡದ ಅಮೋಘ ಗೋಲಿನ ಯತ್ನಗಳನ್ನು ಬಿಎಫ್ಸಿ ರಕ್ಷಣಾ ಬಳಗ ತಡೆಯುವಲ್ಲಿ ಯಶಸ್ವಿಯಾಯಿತು. ಅದರಲ್ಲೂ 57ನೇ ನಿಮಿಷದಲ್ಲಿ ಫಾರೂಖ್ ಯತ್ನಿಸಿದ ಬೈಸಿಕಲ್ ಗೋಲ್ ಕಿಕ್ ಅನ್ನು ಗೋಲ್ಕೀಪರ್ ಗುರ್‌ಪ್ರೀತ್ ಸಿಂಗ್ ರಕ್ಷಣೆ ಮಾಡುವ ಮೂಲಕ ಬಿಎಫ್ಸಿಗೆ ಎದುರಾಗುತ್ತಿದ್ದ ಹಿನ್ನಡೆಯನ್ನು ಹಿಮ್ಮೆಟ್ಟಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಹಲವು ಬಾರಿ ಗೋಲ್ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿದರೂ ಸಹ ಬೆಂಗಳೂರು ಎಫ್ಸಿ ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಥಮಾರ್ಧ 0-0 ಗೋಲ್ ರಹಿತಗೊಂಡಿತು.

41ನೇ ನಿಮಿಷದಲ್ಲಿ ಜಮ್ಶೆಡ್ಡುರ ತಂಡದ ತಿರಿ ಪ್ರಮಾದವೆಸಗಿದ ಕಾರಣ ಹಳದಿ ಕಾರ್ಡ್‌ಗೆ ಗುರಿಯಾದರಲ್ಲದೆ, ಬಿಎಫ್ಸಿಗೆ ಫ್ರೀ ಕಿಕ್ ಅವಕಾಶ ಸಿಕ್ಕಿತು. ಆದರೆ ಇದು ಪ್ರವಾಸಿ ತಂಡಕ್ಕೆ ಮುನ್ನಡೆ ತಂದುಕೊಡಲಿಲ್ಲ. 20 ನಿಮಿಷದಲ್ಲಿ ಬಿಎಫ್‌ಸಿ ತಂಡದ ಅದ್ಭುತ ಗೋಲಿನ ಅವಕಾಶವನ್ನು ಎದುರಾಳಿ ತಂಡದ ಗೋಲ್‌ಕೀಪರ್‌ ಸುಬ್ರತಾ ಪಾಲ್ ಅಷ್ಟೇ ಅದ್ಭುತವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುವ ಮೂಲಕ ತಂಡದ ಹಿನ್ನಡೆಯ ಆತಂಕವನ್ನು ದೂರ ಮಾಡಿದರು.

ಆರಂಭಿದಲ್ಲೇ ದೊರೆತ ಗೋಲ್ ಗಳಿಕೆಯ ಅವಕಾಶಗಳನ್ನು ಕಳೆದುಕೊಂಡರೂ ತನ್ನ ದಾಳಿ ಮುಂದುವರಿಸಿದ ಸುನಿಲ್ ಛತ್ರಿ ಸಾರಥ್ಯದ ಬಿಎಫ್ಸಿ ಪಂದ್ಯದ 14ನೇ ನಿಮಿಷದಲ್ಲಿ ದೊರೆತ ಮತ್ತೊಂದು ಅವಕಾಶದಿಂದಲೂ ವಂಚಿತಗೊಂಡಿತು. ಹೆಡರ್‌ ಮೂಲಕ ಆಗಸ್ಟೋ ಹೊಡೆದ ಚೆಂಡು ಗೋಲ್ ಪೆಟ್ಟಿಗೆ ಸಮೀಪದಲ್ಲೇ ಹಾದು ಹೋಯಿತು. ಹೀಗಾಗಿ ಮುನ್ನಡೆ ಸಾಸುವ ಪ್ರವಾಸಿ ತಂಡದ ಆಸೆ ಈಡೇರಲಿಲ್ಲ.

ಇದಕ್ಕೂ ಮುನ್ನ ಬಿಎಫ್ಸಿ ಆಟಗಾರ ಡಿಮಾಸ್ ಡೆಲ್ಲಾಡೊ 12ನೇ ನಿಮಿಷದಲ್ಲಿ ಕ್ರಾಸ್‌ನಿಂದ ಖಾಬ್ರಾಗೆ ಚೆಂಡನ್ನು ಹೊಡೆಯುವಲ್ಲಿ ಯಶಸ್ವಿಯಾದರು. ಹೊಂದಾಣಿಕೆ ಆಟದ ವೈಫಲ್ಯದಿಂದ ಗೋಲ್ ದಾಖಲಾಗಲಿಲ್ಲ.

ಪೂರ್ಣ ಅಂಕ ಕಲೆಹಾಕುವ ನಿಟ್ಟಿನಲ್ಲಿ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಆರಂಭಿಸಿದ ಬಿಎಫ್ಸಿ 7ನೇ ನಿಮಿಷದಲ್ಲಿ ಆಗಸ್ಟ್ ಅವರಿಂದ ಗೋಲಿನ ಯತ್ನ ನಡೆಸಿತಾದರೂ ಸಹ ಆಟಗಾರರ ಹೊಂದಾಣಿಕೆ ಕೊರತೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಗೆಲುವಿನ ಅವಕಾಶವನ್ನು ಕಳೆದುಕೊಂಡಿದ್ದ ಬೆಂಗಳೂರು ಎಫ್ ಸಿ ಖಾತೆ ತೆರೆಯುವ ವಿಶ್ವಾಸದೊಂದಿಗೆ ಆತಿಥೇಯ ಜಮ್ಶೆಡ್ಡುರ ತಂಡದ ವಿರುದ್ದ ಕಣಕ್ಕಿಳಿಯಿತು. ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ ತಿಂಗಳ 10ರಂದು ಮನೆಯಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ತಂಡವನ್ನು ಎದುರಿಸಲಿದೆ.

Malcare WordPress Security