ಗೋವಾ ವಿರುದ್ದ ಡ್ರಾದೊಂದಿಗೆ ಸಕಾರಾತ್ಮ ಅಂಶ ಕಂಡಿರುವ ಬ್ಲೂಸ್‌ಗೆ ಋತುವಿನಲ್ಲಿ ಮೊದಲ ಗೆಲುವಿನತ್ತ ನೋಟ
ಜಮ್ಶೆಡ್ಡುರ: ಎರಡು ಪಂದ್ಯಗಳಲ್ಲಿ ಜಯ ಗಳಿಸದ ಬೆಂಗಳೂರು ಎಫ್ ಸಿ ಕೋಚ್ ಕಾರ್ಲ್ಸ್ ಕ್ವಾಡ್ರಟ್ ಅವರು, ಭಾನುವಾರ ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಸಂಕೀರ್ಣದಲ್ಲಿ ಅಂಕಪಟ್ಟಿಯ ಎರಡನೇ ಸ್ಥಾನಿ ಜಮ್ಶೆಡ್ಡುರ ತಂಡವನ್ನು ಎದುರಿಸಲು ಸಜ್ಜಾಗಿರುವುದರಿಂದ ಯಾವುದೇ ಆತಂಕ ಇಲ್ಲ ಎಂದಿದ್ದಾರೆ.
ಬ್ಲೂಸ್ ತಮ್ಮ ಐಎಸ್ ಎಲ್ ಅಭಿಯಾನವನ್ನು ಎರಡು ಡ್ರಾದೊಂದಿಗೆ ಆರಂಭಿಸಿದೆ. ಆದರೆ ಎರಡೂ ಪಂದ್ಯಗಳಲ್ಲಿ ತಮ್ಮ ತಂಡ ಫುಟ್ಬಾಲ್ ಕುರಿತು ನಡೆದುಕೊಂಡ ರೀತಿಗೆ ಸ್ಪೇನ್ ಕೋಚ್ ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತು ಅಂಕಗಳು ಬರುವ ಮೊದಲು ಮಾನಸಿಕವಾಗಿ ಬಲಶಾಲಿಯಾಗಿರುವ ಒಂದು ಸಂದರ್ಭವೆಂದು ಇದನ್ನು ಪರಿಗಣಿಸಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೀವು ಅಂಕಪಟ್ಟಿಯನ್ನು ಗಮನಿಸಿದರೆ, ಹೌದು, ನಾವು ಸಂಭವನೀಯ ಗಳಿಸಬಹುದಿದ್ದ ಆರು ಅಂಕಗಳ ಪೈಕಿ ನಾಲ್ಕು ಅಂಕಗಳನ್ನು ಬಿಟ್ಟಿಕೊಟ್ಟಿದ್ದೇವೆ. ಆದರೆ ನಮ್ಮ ತಂತ್ರಗಳು ಪರಿಪೂರ್ಣವಾಗಿವೆ . ಕಳೆದ ವಾರ ಗೋವಾ ವಿರುದ್ಧದ ಡ್ರಾದಿಂದ ಸಾಕಷ್ಟು ಸಾಕಾರಾತ್ಮಕ ಅಂಶಗಳು ಕಂಡು ಬಂದವು ಮತ್ತು ನಾವು ಅವುಗಳನ್ನು ನಿರ್ಮಿಸುವುದು ಉತ್ತಮವಾಗಿದೆ. ಆ ರಾತ್ರಿಯಲ್ಲಿ ನಾವು ತೆಗೆದುಕೊಂಡ ಕಾರ್ಯಕ್ಷಮತೆಗೆ ನ್ಯಾಯ ದೊರೆಯಲಿಲ್ಲ. ಆದರೆ ಇದು ಫುಟ್ಬಾಲ್‌ನಲ್ಲಿ ಸಾಮಾನ್ಯ ಮತ್ತು ನಮ್ಮ ಹುಡುಗರು ಇದನ್ನು ಚೆನ್ನೈ ಅರ್ಥೈಸಿಕೊಂಡಿದ್ದಾರೆ.ಇದರರ್ಥ ನಾವು ಮಾನಸಿಕವಾಗಿ ಬಲಶಾಲಿಯಾಗಿರಬೇಕಿದೆ, ಎಂದು ಕ್ವಾಡ್ರಟ್ ಹೇಳಿದ್ದಾರೆ.
ಎಡಬದಿಯಲ್ಲಿದ್ದ ಆಶಿಕ್ ಕುರುನಿಯನ್ ಗಾಯದ ಸಮಯದಲ್ಲಿ ಪ್ರಮಾದವೆಸಗಿ ಪರಿಣಾಮ ಎದುರಾಳಿ ತಂಡಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಇದರ ಪೂರ್ಣ ಲಾಭ ಪಡೆದ ಫೆರಾನ್ ಕೊರೊಮಿನಾಸ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ಗೋವಾ ತಂಡಕ್ಕೆ ಜೀವ ತಂದುಕೊಟ್ಟರು. ಆದರೆ ಯುವ ಆಟಗಾರನ ಬೆಂಬಲಕ್ಕೆ ನಿಂತಿರುವ ಬೆಂಗಳೂರು ಎಫ್‌ಸಿ ಕೋಚ್, ಸೋಮವಾರ ಆಶಿಕ್ ಮಾಡಿದ ಪ್ರಮಾದಗಳಿಂದ ಕಲಿಯುವುದಿದೆ. ಪೆನಾಲ್ಟಿಯನ್ನು ಗುರ್‌ಪ್ರೀತ್ ತಡೆಯಲಾಗಲಿಲ್ಲ. ಗೋವಾ ವಿರುದ್ದ ಇದೇ ಮೊದಲ ಈ ರೀತಿ ಮಾಡಿದೆವು. ಕೇರಳ ವಿರುದ್ಧ ನಿಶು ಪೆನಾಲ್ಟಿ ನೀಡಿದ್ದರೆ, ನಾರ್ತ್‌ಈಸ್ಟ್ ವಿರುದ್ಧ ಖಾಬ್ರಾ ಈ ತಪ್ಪೆಸಗಿದ್ದರು.ಇವೆಲ್ಲವು ತಿದ್ದುಕೊಳ್ಳಲು ಪಾಠವಾಗಿವೆ. ಆಶಿಕ್ ಅತ್ಯದ್ಭುತ ಫುಟ್ಬಾಲ್ ಆಟಗಾರ. ಆ ಪಂದ್ಯದ ನಂತರ ಆತ ಸುಧಾರಿಸಿಕೊಳ್ಳುತ್ತಾನೆಂದು ನಾನು ಖಂಡಿತವಾಗಿಯೂ ಭರವಸೆ ನೀಡುತ್ತೇನೆ ಎಂದು ಬಿಎಫ್‌ಸಿ ಕೋಚ್ ಹೇಳಿದ್ದಾರೆ.
ಬೆಂಗಳೂರು ಎಫ್ ಸಿ ಎದುರಾಳಿ ಜಮ್ಶೆಡ್ಡುರ ತಂಡ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಲೀಗ್‌ನಲ್ಲಿ ಉತ್ತಮ ಆರಂಭ ಕಂಡಿದೆ. ತವರಿನಲ್ಲಿ ಮೂರನೇ ಪಂದ್ಯ ಆಡುತ್ತಿರುವ ಆಂಟೊನಿಯೊ ಐರಿಯಾಂಡೊ ನೇತೃತ್ವದ ತಂಡ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ. ಕೋಚ್ ಆಂಟೊನಿಯೊ ಸಾರಥ್ಯದ ತಂಡ ಅನುಭವಿಗಳನ್ನೊಳಗೊಂಡಿದ್ದು , ತಂಡವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಚೆನ್ನಾಗಿ ತಿಳಿದಿದೆ. ಎರಡರಲ್ಲಿ ಗೆದ್ದಿರುವ ಜಮ್ಶೆಡ್ಡುರ ಸದ್ಯ ಉತ್ತಮ ಲಯದಲ್ಲಿದೆ. ಹೀಗಾಗಿ ನಾವು ಯಾರ ವಿರುದ್ದ ಕಣಕ್ಕಿಳಿಯುತ್ತಿದ್ದೇವೆ ಎಂಬುದು ನಮಗರಿವಿದೆ ಎಂದು ಕ್ವಾಡ್ರಟ್ ಹೇಳಿದ್ದಾರೆ.
ಐತೋರ್, ಮೊನ್ನೊಯ್, ಪಿಟಿ, ಸೆರ್ಗಿಯೊ ಕ್ಯಾಸ್ಟಲ್ ಮತ್ತು ನಿಯೋ ಲೈಕೊಸ್ಟಾ ಸೇರಿದಂತೆ ಸ್ಪೇನ್‌ನ ನಾಲ್ವರು ಜಮ್ಶೆಡ್ಡುರ ತಂಡದಲ್ಲಿರುವುದು ಆ ತಂಡದ ಬಲವನ್ನು ಹೆಚ್ಚಿಸಿದೆ.
ಇನ್ನು ಬೆಂಗಳೂರು ಎಫ್ಸಿ ಕಡೆಯಲ್ಲಿ ಗಾಯದಿಂದ ಇನ್ನೂ ಗುಣಮುಖರಾಗುತ್ತಿರುವ ಮಿಡ್‌ಫೀಲ್ಡರ್ ಎರಿಕ್ ಪಾರ್ತಾಲು ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ. ಆದಾಗ್ಯೂ ಆಸ್ಟ್ರೇಲಿಯಾ ಆಟಗಾರ ಕಂಠೀರವ ಕ್ರೀಡಾಂಗಣದಲ್ಲಿ ಮುಂದಿನ ವಾರ ನಡೆಯಲಿರುವ ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ ಎಂದು ಕೋಚ್ ಹೇಳಿದ್ದಾರೆ. ಈ ಮಧ್ಯೆ ಗಾಯದಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಡಿಫೆಂಡರ್ ಅಲ್ಬರ್ಟ್ ಸೆರಾನ್ ತಂಡಕ್ಕೆ ಮರಳಿದ್ದು ಭಾನುವಾರದ ಪಂದ್ಯದಲ್ಲಿ ಬೆಂಗಳೂರು ಹೊಸ ಕಾರ್ಯತಂತ್ರಗಳನ್ನು ರೂಪಿಸುವ ನಿರೀಕ್ಷೆ ಇದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್‌ಸ್ಪೋರ್ಟ್ಸ್ ವರ್ಕ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರ ಇರಲಿದೆ.