ಕಳೆದ ಬಾರಿಯ ಫೈನಲಿಸ್ಟ್ಗಳು ಇಂದು ಮುಖಾಮುಖಿ, ಕೊನೇ ಕ್ಷಣದಲ್ಲಿ ಸೆರಾನ್ , ಪಾರ್ತಾಲುಗೆ ಸ್ಥಾನ ನೀಡಲು ಕ್ವಾಡ್ರಟ್ ಚಿಂತನೆ
ಬೆಂಗಳೂರು: ಕಳೆದ ಬಾರಿಯ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳೆರಡು ಈ ಋತುವಿನ ಆರಂಭದಲ್ಲೇ ಎದುರಾಗುತ್ತಿವೆ. ಆದರೆ ಸೋಮವಾರ ಫಟೋರ್ಡಾ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್ ಸಿ ಮತ್ತು ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಮುಖಾಮುಖಿಯಾದಾಗ ಮನರಂಜನೆ ನೀಡುವುದು ನಿಜ ಎಂದು ಬೆಂಗಳೂರು ಎಫ್ ಸಿ ಕೋಚ್ ಕಾರ್ಲ್ಸ್ ಕ್ವಾಡ್ರಟ್ ನಿರೀಕ್ಷಿಸಿದ್ದಾರೆ.
ಬೇಡಿಕೆ ಏನು ಎಂಬುದರ ಬಗ್ಗೆ ತಮ್ಮೆಲ್ಲರಿಗೂ ಗೋವಾ ಎದುರಿನ ಪಂದ್ಯದ ಮೂಲಕ ಅರಿವಿದೆ. ಗೋವಾ ನಮ್ಮನ್ನು ಹೋಲುವ ತಂಡವೇ ಆಗಿದೆ. ಅವರು ತಮ್ಮ ಸಿಬ್ಬಂದಿ ಮತ್ತು ತಂಡವನ್ನು ಉಳಿಸಿಕೊಂಡಿದ್ದಾರೆ ಹಾಗೂ ಸ್ವಲ್ಪ ಸಮಯದವರೆಗೂ ಒಟ್ಟಿಗೆ ಇದ್ದಾರೆ. ಹಾಗೆಯೇ ನಾವಿಬ್ಬರು ಪರಸ್ಪರ ಆಟದ ಶೈಲಿಯ ಬಗ್ಗೆ ತಿಳಿದಿದ್ದೇವೆ. ನಮ್ಮ ನಡುವಿನ ಆಟಗಳು ಯಾವಾಗಲೂ ಎರಡೂ ಕಡೆಯ ಬೆಂಬಲಿಗರನ್ನು ರಂಜಿಸುತ್ತವೆ ಮತ್ತು ಸೋಮವಾರದ ಪಂದ್ಯದಲ್ಲಿ ಯಾವುದೇ ಭಿನ್ನತೆ ಇರುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಇದು ಋತುವಿನ ಆರಂಭಿಕ ಹಂತವಾಗಿರುವ ಕಾರಣ ಅಂಕಗಳು ಮುಖ್ಯವಾಗಿದ್ದರೂ ಸಹ ನಾವು ನಾಟಕೀಯವಾಗಿ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿಲ್ಲ .ಆದ್ದರಿಂದ ಎರಡೂ ತಂಡಗಳು ಅಭಿಮಾನಿಗಳು ಮತ್ತು ದೂರದರ್ಶನಕ್ಕಾಗಿ ಉತ್ತಮ ಪ್ರದರ್ಶನ ನೀಡಬಹುದು, ಎಂದು ಕ್ವಾಡ್ರಟ್ ಹೇಳಿದ್ದಾರೆ.
ಕಳೆದ ವಾರ ತವರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಋತುವಿನಲ್ಲಿ ಅಭಿಯಾನ ಆರಂಭಿಸಿದ ಬೆಂಗಳೂರು ಎಫ್ ಸಿ, ಸಂಪೂರ್ಣ ಮೇಲುಗೈ ಸಾಸಿದ ಹೊರತಾಗಿಯೂ ಪಂದ್ಯ ಗೋಲ್ ರಹಿತ ಡ್ರಾಗೊಂಡ ಪರಿಣಾಮ ತಲಾ ಒಂದು ಅಂಕ ಹಂಚಿಕೊಳ್ಳಲಷ್ಟೇ ಶಕ್ತಗೊಂಡಿತು. ಹಿಂದಿನ ಪಂದ್ಯದಲ್ಲಿ ದಾಳಿಯ ಅಸಮರ್ಥತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ವಾಡ್ರಟ್, ನಮಗೆ ಮನು, ಆಶಿಕ್, ಛತ್ರಿ, ಮತ್ತು ಉದಾಂತ ಅವರಿಂದ ಅವಕಾಶಗಳು ಸೃಷ್ಟಿಯಾಗುತ್ತವೆ. ಅದು ನಾವು ವಿಭಿನ್ನ ಆಟಗಾರರನ್ನು ಹೊಂದಿರುವುದನ್ನು ಸೂಚಿಸುತ್ತದೆ. ಫುಟ್ಬಾಲ್‌ನಲ್ಲಿ ಚೆಂಡನ್ನು ಮೀರಿದ ದಿನಗಳಿವೆ. ಸೋಮವಾರ ಆ ದಿನಗಳಲ್ಲಿ ಒಂದಾಗಿದೆ. ಮುಖ್ಯ ವಿಷಯ ಏನೆಂದರೆ ನಾವು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ನಿಗದಿತ ಸಮಯದೊಳಗೆ ಇದನ್ನು ಸೃಷ್ಟಿಸಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸ್ಪೇನ್ ಕೋಚ್ ನುಡಿದಿದ್ದಾರೆ.
ಈ ಮಧ್ಯೆ ಸೆರ್ಗಿಯೊ ಲೊಬೆರಾ ನೇತೃತ್ವದ ಎಫ್ ಸಿ ಗೋವಾ ತವರಿನಂಗಳದಲ್ಲಿ ಋತುವಿನ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ 3-0 ಅಂತರದಲ್ಲಿ ಗೆದ್ದು ಶುಭಾರಂಭ ಮಾಡಿದೆ. ಬ್ಲೂಸ್ ತಂಡದ ಮಾಜಿ ಆಟಗಾರ ಲೆನ್ ದೌಂಗೆಲ್, ಫೆರಾನ್ ಕೊರೊಮಿನಾಸ್ ಮತ್ತು ಕಾರ್ಲೊಸ್ ಪೆನಾ ಆ ಪಂದ್ಯದಲ್ಲಿ ಗೋಲ್ ಗಳಿಸಿದ್ದರು. ಗಾಯ, ಫಿಟ್ಟೆಸ್ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗೌರ್ಸ್, ಹುಗೊ ಭೌಮಾಸ್ ಮತ್ತು ಎಡು ಬೆಡಿಯಾ ಸೋಮವಾರದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಮೊರೊಕ್ಕೊದ ಮಿಡ್‌ಫೀಲ್ಡರ್ ಅಹ್ಮದ್ ಜಾಹೊಹ್ ಸೇವೆ ದೊರೆಯಲಿದೆ ಎಂದು ಬಿಎಫ್ಸಿ ಕೋಚ್ ಹೇಳಿದ್ದಾರೆ. ಈ ನಡುವೆ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಡಿಫೆಂಡರ್ ಅಲ್ಬರ್ಟ್ ಸೆರಾನ್ ಮತ್ತು ಮಿಡ್ ಫೀಲ್ಡರ್ ಎರಿಕ್ ಪಾರ್ತಾಲು ಸೋಮವಾರದ ಪಂದ್ಯದಲ್ಲಿ ಕಣಕ್ಕಿಳಿಸಲು ಕ್ವಾಡ್ರಟ್ ಚಿಂತಿಸುತ್ತಿದ್ದಾರೆ.
ಉಭಯ ತಂಡಗಳ ಮುಖಾಮುಖಿ ದಾಖಲೆ ಗಮನಿಸಿದರೆ ಬ್ಲೂಸ್ ಮೇಲುಗೈ ಸಾಸಿದೆ. ಆಡಿದ ಐದು ಪಂದ್ಯಗಳ ಪೈಕಿ ಬಿಎಫ್ಸಿ ನಾಲ್ಕರಲ್ಲಿ ಜಯ ಗಳಿಸಿದೆ. ಆದರೆ ಉಭಯ ತಂಡಗಳ ಅಂಕಿ ಅಂಶಗಳ ಫಲಿತಾಂಶವನ್ನು ಬಿಎಫ್ಸಿ ಕೋಚ್ ನಿರಾಕರಿಸಿದ್ದಾರೆ. ನಮ್ಮ ನಡುವಿನ ಪಂದ್ಯ ಯಾವಾಗಲು ನಿಕಟಪೂರ್ವವಾಗಿರುತ್ತದೆ ಹಾಗೂ ಫಲಿತಾಂಶವನ್ನು ಸ್ವಲ್ಪಮಟ್ಟಿಗೆ ಒಂದು ತಂಡದ ಪರವಾಗಿ ಸೂಚಿಸುತ್ತಿರುವುದು ಒಂದು ಅಂಶ ಅಷ್ಟೇ , ತಂಡವನ್ನು ಉತ್ತಮವಾಗಿ ಸಿದ್ಧಗೊಳಿಸುವುದು ಕೋಚ್‌ಗಳ ಕೆಲಸ. ಆದರೆ ಸೋಮವಾರದ ಪಂದ್ಯ ಖಂಡಿತವಾಗಿಯೂ ಲೊಬೆರಾ ಮತ್ತು ನನ್ನ ನಡುವೆ ಅಲ್ಲ . ಬದಲಿಗೆ ಉಭಯ ತಂಡಗಳ ತಲಾ 11 ಆಟಗಾರರ ನಡುವೆ ಎಂದು ಕಾರ್ಲ್ಸ್ ಹೇಳಿದ್ದಾರೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.