ಎಟಿಕೆಗೆ ಶರಣಾದ ಬೆಂಗಳೂರು ಎಫ್ ಸಿ

ಎಟಿಕೆ ವಿರುದ್ಧ ಕಾರ್ಲೊಸ್ ಕ್ವಾಡ್ರಟ್ ಬಳಗಕ್ಕೆ 0-1ಅಂತರದ ಸೋಲು

ಕೋಳ್ಕೊತಾ: ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಗೊಂಡ ಬೆಂಗಳೂರು ಎಫ್ ಸಿ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್‌ನ ತನ್ನ 10ನೇ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಪ್ರಬಲ ಎಟಿಕೆ ವಿರುದ್ಧ ಪರಾಭವಗೊಂಡಿತು. ಹೀಗಾಗಿ ಕ್ರಿಸ್ಮಸ್ ದಿನ ಗೆಲುವಿನ ಉಡುಗೊರೆ ನೀಡಿ, ವರ್ಷಾಂತ್ಯ ಕೊನೆಗೊಳಿಸುವ ನಾಯಕ ಸುನಿಲ್ ಛಟ್ರಿ ಬಳಗದ ಕನಸು ಭಗ್ನಗೊಂಡಿತು.

ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹೈವೋಲ್ವೇಜ್ ಹಣಾಹಣಿಯಲ್ಲಿ ಬೆಂಗಳೂರು ಎಫ್ ಸಿ 0-1 ಗೋಲಿನಿಂದ ಎಟಿಗೆ ಶರಣಾಯಿತು. ಈ ಮೂಲಕ ಋತುವಿನಲ್ಲಿ ಎರಡನೇ ಸೋಲಿಗೆ ಬ್ಲೂಸ್ ಒಳಗಾಯಿತು. ಇದಕ್ಕೂ ಮುನ್ನ ತವರಿನಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ದ ಋತುವಿನ ಮೊದಲ ಸೋಲಿಗೆ ತುತ್ತಾಗಿತ್ತು. ಎಟಿಕೆ ಪರ ಡೇವಿಡ್ ವಿಲಿಯಮ್ಸ್ (47ನೇ ನಿಮಿಷ) ಏಕೈಕ ಗೋಲ್ ಬಾರಿಸಿ ಜಯದ ರೂವಾರಿಯೆನಿಸಿದರು. ಈ ಜಯದೊಂದಿಗೆ ಎಟಿಕೆ 18 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಇಷ್ಟೇ ಅಂಕಗಳನ್ನು ಹೊಂದಿರುವ ಎಫ್ ಸಿ ಗೋವಾ ತಂಡ ಗೋಲ್ಗಳ ಆಧಾರದ ಮೇರೆಗೆ ದ್ವಿತೀಯ ಸ್ಥಾನದಲ್ಲಿದೆ. 16 ಅಂಕ | ಹೊಂದಿರುವ ಬಿಎಫ್ಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಕೊನೆಯಲ್ಲಿ ಬಿಎಫ್ಸಿ ಆಟಗಾರರು ಗೋಲಿಗಾಗಿ ಸರ್ವಪ್ರಯತ್ನ ನಡೆಸಿದರೂ ಒಮ್ಮೆಯೂ ಅದೃಷ್ಟ ಕೈಹಿಡಿಯಲಿಲ್ಲ. ಇದಕ್ಕೂ ಮುನ್ನ 60ನೇ ನಿಮಿಷದಲ್ಲಿ ರಾಹುಲ್ ಮೈದಾನ ತೊರೆದರೆ ಅಶಿಕ್ ಮೈದಾನ ಪ್ರವೇಶಿಸಿದರು. ಆದರೆ ತಂಡದ ಮೇಲೆ ಇದ್ಯಾವುದು ಪರಿಣಾಮ ಬೀರಲಿಲ್ಲ. ಪಂದ್ಯ ಮುಕ್ತಾಯಕ್ಕೆ ಕೊನೆಯ 20 ನಿಮಿಷಗಳಿರುವಾಗ ಉಭಯ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪರಿಣಾಮ ಹಲವು ಬಾರಿ ಪ್ರಮಾದಗಳು ನಡೆದವು. ಹೀಗಾಗಿ ರೆಫರಿಯಿಂದ ಪದೇ ಪೇದೆ ಎಚ್ಚರಿಕೆಗೂ ಗುರಿಯಾದರು.

51ನೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ಹಿನ್ನಡೆ ತಗ್ಗಿಸುವ ಉತ್ತಮ ಅವಕಾಶವನ್ನು ಕಳೆದುಕೊಂಡ ಪರಿಣಾಮ ಆತಿಥೇಯ ತಂಡ 1-0 ಅಂತರದಲ್ಲಿ ಮೇಲುಗೈ ಸಾಸಿತು. ಇದಾದ ಎರಡೇ ನಿಮಿಷದಲ್ಲಿ ಎಟಿಕೆ ತಂಡದ ಮಂಡಿ ಸೋಸಾ ಹಳದಿ ಕಾರ್ಡ್‌ಗೆ ಗುರಿಯಾದರು.

ಮೊದಲಾರ್ಧ ಗೋಲ್ ರಹಿತಗೊಂಡ ಪರಿಣಾಮ ಉಭಯ ತಂಡಗಳು ಮುನ್ನಡೆಗಾಗಿ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಪ್ರಾಶಸ್ಯ ನೀಡಿದವು. ಇದರ ಫಲವಾಗಿ ಆತಿಥೇಯ ತಂಡದ ಡೇವಿಡ್ ವಿಲಿಯಮ್ 47ನೇ ನಿಮಿಷದಲ್ಲಿ ಆಕರ್ಷಕ ಗೋಲ್ ಬಾರಿಸಿ ಆತಿಥೇಯ ತಂಡಕ್ಕೆ 1-0 | ಅಂತರದ ಮುನ್ನಡೆ ಕಲ್ಪಿಸುವುದರೊಂದಿಗೆ ತವರು ಅಭಿಮಾನಿಗಳ ಹರ್ಷಕ್ಕೆ ಕಾರಣರಾದರು. ರಾಯ್ ಕೃಷ್ಣ ಚೆಂಡನ್ನು ಪಾಸ್ ಮಾಡಿದರು. ಆದರೆ ಇದನ್ನು ಟ್ಯಾಕಲ್ ಮಾಡುವಲ್ಲಿ ಬಿಎಫ್ಸಿ ಆಟಗಾರ ರಾಹುಲ್ ಭೇಕೆ ವಿಫಲರಾದರು. ಈ ವೇಳೆ ಜಯೇಶ್ ರಾಣೆ ನೀಡಿದ ಚೆಂಡಿನ ಉತ್ತಮ ಪಾಸ್ ಅನ್ನು ಸಮರ್ಥವಾಗಿ ಬಳಸಿಕೊಂಡ ಆಸ್ಟ್ರೇಲಿಯಾದ ಫಾರ್ವಡ್ರರ್ ವಿಲಿಯಮ್ಸ್, ಯಾವುದೇ ತಪ್ಪೆಸಗದೆ ಚೆಂಡನ್ನುಗೋಲಿನ ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ಗೋಲ್ಗಳಿಕೆಯ ಹಲವು ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ ಬೆಂಗಳೂರು ಎಫ್ ಸಿ ಮತ್ತು ಎಟಿಕೆ ಮೊದಲಾರ್ಧದಲ್ಲಿ ಗೋಲ್ ರಹಿತದೊಂದಿಗೆ ವಿರಾಮಕ್ಕೆ ತೆರಳಿದವು. ಕಳೆದ ಬಾರಿಯ ಚಾಂಪಿಯನ್ ಬಿಎಫ್ಸಿ ಶೇಕಡ 58ರಷ್ಟು ಚೆಂಡಿನ ಮೇಲೆ ನಿಯಂತ್ರಣ ಸಾಸಿದರೆ, ಆತಿಥೇಯ ತಂಡ ಸಹ ದಿಟ್ಟ ಆಕ್ರಮಣಕಾರಿ ಆಟ ತೋರಿತು. ಮೈಕಲ್ ಸೂಸೈರಾಜ್ ಆತಿಥೇಯರ ಪರ ಗೋಲ್ ಗಳಿಕೆಯ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿದರು.ಇದನ್ನು ಹೊರತುಪಡಿಸಿ ಎಟಿಕೆಯಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ . ಆದರೆ ಬಿಎಫ್ಸಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಂಪೂರ್ಣ ಎಡವಿತು.

ಉದಾಂತ ಸಿಂಗ್ ಅವರಿಂದ ಚೆಂಡನ್ನು ಕಿತ್ತುಕೊಳ್ಳುವ ಯತ್ನದಲ್ಲಿ ಪ್ರಮಾದವೆಸಗಿದ ಎಟಿಕೆ ಆಟಗಾರ ಪ್ರೀತಮ್ ಕೋಟಲ್ 25ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ನಂತರ | ನಾಯಕ ಸುನಿಲ್ ಛತ್ರಿ ಸೇರಿದಂತೆ ಬ್ಲೂ ಆಟಗಾರರು ಗೋಲಿಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದರೂ ಗೋಲ್ ಮಾತ್ರ ದಾಖಲಾಗಲಿಲ್ಲ .

18ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಮನ್ ಅತ್ಯುತ್ತಮವಾಗಿ ಗೋಲಿನ ಯತ್ನ ನಡೆಸಿದರು. ಆದರೆ ಪ್ರವಾಸಿ ತಂಡದ ಗುರ್‌ಪ್ರೀತ್ ಸಿಂಗ್ ಆತಿಥೇಯರ ಯತ್ನವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿದರು. 23ನೇ ನಿಮಿಷದಲ್ಲಿ ಭೀಕಿಕ್ ಮೂಲಕ ಡಿಮಾಸ್ ಡೆಲ್ಲಾಡೊ ನಡೆಸಿದ ಗೋಲಿನ ಯತ್ನ ತೀರ ಕಳಪೆಯಾದ್ದ ಕಾರಣ ಉಭಯ ತಂಡಗಳ ಹೋರಾಟ 0-0 ಅಂತರದಲ್ಲಿ ಮುಂದುವರಿಯಿತು.

ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಜನವರಿ 3ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

Malcare WordPress Security