ಆತಿಥೇಯರಿಂದ ಅಂತರ ಹೆಚ್ಚಿಸುವ ಜತೆಗೆ ಅಂಕಪಟ್ಟಿಯಲ್ಲಿ ಮೇಲೇರುವ ಬ್ಲೂಸ್ ಅವಕಾಶದ ಬಗ್ಗೆ ಎಚ್ಚರಿಕೆ ನೀಡಿದ ಕ್ವಾಡ್ರಟ್
ಕೋಲ್ಗೊತಾ: ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಒಂದು ಕುತೂಹಲಕಾರಿ ಸ್ಪರ್ಧೆಯ ಭರವಸೆ ಮೂಡಿಸಿರುವ ಕ್ರಿಸ್‌ಮಸ್ ದಿನದ ಐಎಸ್ಎಲ್ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಎಟಿಕೆ ವಿರುದ್ಧ ಗೆದ್ದು ವರ್ಷಾಂತ್ಯ ಕೊನೆಗೊಳಿಸುವ ಇರಾದೆಯಲ್ಲಿ ಬೆಂಗಳೂರು ಎಫ್ ಸಿ ಎದುರು ನೋಡುತ್ತಿದೆ.
ಆ್ಯಂಟೊನಿಯೊ ಹಬ್ಬಾಸ್ ತಂಡಕ್ಕಿಂತ ಒಂದು ಅಂಕ ಅಕ ಹೊಂದಿರುವ ಕಾರ್ಲೊಸ್ ಕ್ವಾಡ್ರಟ್ ಬಳಗ, ಮೊದಲ ಸ್ಥಾನಿ ಎಫ್‌ಸಿ ಗೋವಾ ತಂಡದಿಂದ ಅಂಕಪಟ್ಟಿಯ ಮೊದಲ ಸ್ಥಾನದ ಅಂತರವನ್ನು ಹೆಚ್ಚಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಬೇಕಿದೆ. ಆದರೆ ಕ್ವಾಡ್ರಟ್, ಆತಿಥೇಯರ ಬಗ್ಗೆ ಎಚ್ಚರದಿಂದಿರುವಂತೆ ಹಾಗೂ ತವರಿನಲ್ಲಿ ಬಲಿಷ್ಠವಾಗಿರುವ ಕುರಿತು ತಂಡಕ್ಕೆ ಕಿವಿಮಾತು ಹೇಳಿದ್ದಾರೆ.
“ಎಟಿಕೆ ತಂಡವನ್ನು ನಾವು ಸಾಕಷ್ಟು ಗೌರವಿಸುತ್ತೇವೆ. ಅವರು ಎರಡು ಬಾರಿ ಲೀಗ್ ಗೆದ್ದ ನಂತರ ಎರಡು ಋತುವಿನಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಉತ್ತಮ ವಿದೇಶಿಯರು ಮತ್ತು ಭಾರತೀಯರನ್ನೊಳಗೊಂಡ ಉತ್ತಮ ಸಂಯೋಜಿತ ತಂಡವನ್ನು ಕಟ್ಟಿದ್ದಾರೆ. ಹೀಗಾಗಿ ಇದೊಂದು ಕಠಿಣ ಪಂದ್ಯವಾಗಲಿದೆ. ಲೀಗ್‌ನ ಋತುವಿನಲ್ಲಿ ಪ್ರತಿಯೊಂದು ಪಂದ್ಯವು ಕಠಿಣ ಎಂದು ನಾನು ಭಾವಿಸುತ್ತೇನೆ. ಹಬ್ಬಾಸ್ ಸಹ ಇದನ್ನು ಒಪ್ಪುತ್ತಾರೆ. ಮುಂಚೆ ಆಡಿದ ವಿದೇಶಿ ಆಟಗಾರರನ್ನೇ ಎಟಿಕೆ ಒಳಗೊಂಡಿದೆ. ಇದು ಫಲಿತಾಂಶದಲ್ಲಿ ಕಂಡು ಬಂದಿದೆ. ಡೇವಿಡ್ ವಿಲಿಯಮ್ಪನ್, ರಾಯ್ ಕೃಷ್ಣ ಮತ್ತು ಈಗ ಮಂಡಿ ಆಸ್ಟ್ರೇಲಿಯಾದಲ್ಲಿ ಒಟ್ಟಿಗೆ ಆಡಿದ್ದರು. ಅವರು ಪರಸ್ಪರ ತಿಳುವಳಿಕೆಯಿಂದ ತಂಡವನ್ನು ಅಂಕಪಟ್ಟಿಯಲ್ಲಿ ಮೇಲೇರಿಸಲು ಯತ್ನಿಸುತ್ತಾರೆ. ಅದು ಮುಖ್ಯವಾಗಲಿದೆ, ” ಎಂದು ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಋತುವಿನಲ್ಲಿ ಫಿಜಿಯಾದ ಕೃಷ್ಟ ಎಟಿಕೆ ಪರ ಅತ್ಯಕ ಗೋಲ್ (8 ಗೋಲ್)ಗಳಿಸಿದ ಆಟಗಾರನಾಗಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಿಲಿಯಮ್ಸ್ ಜತೆಗೂಡಿ ಎಟಿಕೆ ನಾಯಕ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.’ಎಟಿಕೆ ದಾಳಿಯನ್ನು ತಡೆಯಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಅದು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನಾವು ನೋಡಬೇಕಿದೆ. ನಾನು ಹೇಳಿದಂತೆ ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿರುವ ಆಟಗಾರರನ್ನು ಪಡೆಯುವಲ್ಲಿ ಎಟಿಕೆ ಚುರುಕಾಗಿದೆ. ಹೀಗಾಗಿ ಇದು ಕಠಿಣ ಪರೀಕ್ಷೆ ಮತ್ತು ನಾವು ಮೇಲಿಂದ ಹೊರಬುತ್ತೇವೆ ಎಂದು ಭಾವಿಸುತ್ತೇನೆ. ಕ್ರಿಸ್‌ಮಸ್ ದಿನ ಅಭಿಮಾನಿಗಳಿಗೆ ಉಡುಗೊರೆ ನೀಡಲು ಇದು ಉತ್ತಮ ಅವಕಾಶವಾಗಿದೆ,” ಎಂದು ಕ್ವಾಡ್ರಟ್ ಇದೇ ವೇಳೆ ಹೇಳಿದರು.
ಏತನ್ಮಧ್ಯೆ, 9 ಪಂದ್ಯಗಳ ಪೈಕಿ ಕೇವಲ ಐದು ಗೋಲ್ ಬಿಟ್ಟುಕೊಡುವ ಮೂಲಕ ಈ ಋತುವಿನಲ್ಲಿ ಗುರಿ ಸಾಧನೆ ವೇಳೆ ಬೆಂಗಳೂರು ಅತ್ಯಂತ ಮಿತವ್ಯತ ತಂಡ ಎನಿಸಿದೆ. ಜುವಾನಾನ್ ಗೋನ್ಸಾಲೆಜ್ ಮುಂದಾಳತ್ವದಲ್ಲಿ ಬ್ಯಾಕ್ ಸಂಯೋಜನೆಯಲ್ಲಿ ಚೇತರಿಕೆ ಕಂಡುಬರಲಿದೆ ಎಂದು ಕ್ವಾಡ್ರಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ಸ್ ಪರ ಗೋಲ್‌ಗಳು ಉತ್ತಮವಾಗಿ ದಾಖಲಾಗಿಲ್ಲ. ಆದರೆ ಬುಧವಾರ ಎರಡು ಬಾರಿಯ ಚಾಂಪಿಯನ್ ವಿರುದ್ದ ಉತ್ತಮ ಹೋರಾಟ ಕಂಡು ಬರಲಿದೆ ಎಂದು ಕ್ವಾಡ್ರಟ್ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬಯಿ ವಿರುದ್ಧ 2-1ರಲ್ಲಿ ನಾವು ಹಿನ್ನಡೆಯಲ್ಲಿದ್ದಾಗ ನಮ್ಮ ಹುಡಗರು ಪುಟಿದೇಳಲು ಯತ್ನಿಸಿದ್ದನ್ನು ನೀವು ನೋಡಬಹುದು. ಏಕೆಂದರೆ ಅವರು ಪಂದ್ಯ ಗೆಲ್ಲಲು ಎಲ್ಲ ರೀತಿಯಲ್ಲೂ ಶ್ರಮಿಸಿದರು,” ಎಂದು ಬಿಎಫ್ಸಿ ಕೋಚ್ ನುಡಿದಿದ್ದಾರೆ.
ತವರಿನಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ 2-3ರಲ್ಲಿ ಋತುವಿನ ಮೊದಲ ಸೋಲು ಕಂಡ ನಂತರ ಬೆಂಗಳೂರು ಎಫ್ ಸಿ ಕಳೆದ ವಾರ ಗುವಾಹಟಿಯಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ 2-0 ಅಂತರದಲ್ಲಿ ಪುಟಿದೆದ್ದಿದೆ. ಅತ್ತ ಹೈದರಾಬಾದ್‌ನಲ್ಲಿ ಹೈದರಾಬಾದ್ ವಿರುದ್ಧ ಡ್ರಾ ಸಾಸುವಲ್ಲಿ * ಎಟಿಕೆ ಯಶಸ್ವಿಯಾಗಿದೆ. ಹಿಂದಿನ ಎರಡು ಪಂದ್ಯಗಳಿಂದ ಕೇವಲ ಒಂದಂಕ ಗಳಿಸಿದ ಎಟಿಕೆ ಈಗ ಪೂರ್ಣ ಅಂಕದ ಗುರಿಯೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಲು ತವಕಿಸುತ್ತಿದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರ ಲಭ್ಯ ಇರಲಿದೆ.