ರೇಂಜರ್ಸ್ ಎಫ್ ಸಿ ಜಗಿನ ಸಹಭಾಗಿತ್ವ ಪ್ರಕಟಿಸಿದ ಬೆಂಗಳೂರು ಎಫ್ ಸಿ

ಎರಡು ವರ್ಷಗಳ ಸಹಯೋಗದಲ್ಲಿ ಕ್ಲಬ್ ಗಳು ಫುಟ್ಬಾಲ್ ಮತ್ತು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿವೆ ಬೆಂಗಳೂರು

ಬೆಂಗಳೂರು: ಬೆಂಗಳೂರು ಎಫ್ ಸಿಸ್ಕಾಟೆಂಡ್ ನದೈತ್ಯ ಸಂಸ್ಥೆಯಾದರೇಂಜರ್ಸ್‌ಫುಟ್ಬಾಲ್ ಕ್ಲಬ್ ಜತೆ ಎರಡು ವರ್ಷಗಳ ಸಹಯೋಗದೊಂದಿಗೆ (ಪರಸ್ಪರ ಒಪ್ಪಂದ ಮೇಲೆ ಸ್ತರಿಸುವ ಆಯ್ಕೆಯೊಂದಿಗೆ) ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದು ಎರಡೂ ಕ್ಲಬ್ ಗಳಿಗೆ ಹಲವಾರು ಫುಟ್ಬಾಲ್ ಮತ್ತು ವಾಣಿಜ್ಯ ಅಂಶಗಳನ್ನು ಒದಗಿಸುತ್ತದೆ ಎಂದು ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಬೆಂಗಳೂರು ಎಫ್ಟಿ ಸೆಪ್ಟೆಂಬರ್ 27 ಶುಕ್ರವಾರ ಘೋಸಿದೆ.

1872ರಲ್ಲಿ ಆರಂಭವಾದ ಈ ಕ್ಲಬ್ ಇಬ್ರೂಕ್ಸ್ ಕ್ರೀಡಾಂಗಣ ಇದರ ತವರು ಮನೆಯಾಗಿದೆ. 54 ಬಾರಿ ಲೀಗ್ ಕಿರೀಟ ಗೆದ್ದಿರುವ ರೇಂಜರ್ಸ್ , 33 ಬಾರಿ ಸ್ಕಾಟಿಷ್ ಕಪ್ ಮತ್ತು 27 ಬಾರಿ ಸ್ಕಾಟಿಷ್ ಲೀಗ್ ಕಪ್ ಗೆದ್ದ ಸಾಧನೆ ಮಾಡಿದೆ. ಜತೆಗೆ 1961ರಲ್ಲಿ ಯುರೋಪಿಯನ್ ಕಪ್ ನರ್ಸ್ ಕಪ್ ನಲ್ಲಿ ಫಿಯೋರೆಂಟಿನಾ ತಂಡವನ್ನು ಎದುರಿಸುವ ಮೂಲಕ ಯುಇಎಎಫ್ ಎ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಬ್ರಿಟಿಷ್ ಕ್ಲಬ್ ಎಂಬ ಶ್ರೇಯಕ್ಕೂ ಇದು ಪಾತ್ರವಾಗಿದೆ. ಸದ್ಯ ಸ್ಟೀವನ್ ಗೆರಾರ್ಡ್ ಈ ಕ್ಲಬ್ ಅನ್ನು ನಿರ್ವಸುತ್ತಿದ್ದಾರೆ.

ಈ ಎರಡು ವರ್ಷಗಳ ಸಹಭಾಗಿತ್ವದ ಅವಧಿಯಲ್ಲಿ ಜ್ಯೂಸ್ ತಂಡ ಭಾರತೀಯ ಮಾರುಕಟ್ಟೆಯಲ್ಲಿ ಸದಾ ಸಕ್ರಿಯವಾಗಿರುವ ಜತೆಗೆ ಅಂತಾದ್ಘಾಯ ಪ್ರೇಕ್ಷಕರನ್ನು ಸೆಳೆಯಲು ಎದುರು ನೋಡಲಿದೆ. ಈ ಸಹಭಾಗಿತ್ವದಿಂದ ಇಂಡಿಯನ್ ಸೂಪರ್ ಲೀಗ್ ತಂಡದೊಂದಿಗೆ ಸ್ಕಾಟಿಷ್ ಸಂಪರ್ಕ ಒಳಗೊಳ್ಳುತ್ತದೆ ಮತ್ತು ಅವಕಾಶಗಳನ್ನು ತೆರೆಯುವ ಉದ್ದೇಶದಿಂದ ಭಾರತದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಲು ನೆರವಾಗಲಿದೆ. ರೇಂಜರ್ಸ್ ಅಕಾಡೆಮಿಯು ಭಾರತಕ್ಕೆ ಪ್ರಯಾಣಿಸಲಿದ್ದು, ರಾಜ್ಯದ ತರಬೇತಿಯ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಸ್ವಾಗತಿಸಲಾಗುತ್ತದೆ.

ಜತೆಗೆ ರೇಂಜರ್ಸ್ ಫುಟ್ಬಾಲ್ ಶಾಲೆಗಳು ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆಯೋಜಿಸಲು ನಿರ್ಧರಿಸಿವೆ. ಈ ಹಿಂದೆ ಗೆರ್ಸ್ ಎಂದು ಜನಪ್ರಿಯಗೊಂಡಿರುವ ಕ್ಲಬ್‌ನ ರೇಂಜರ್ಸ್ ದಿಗ್ಗಜರ ತಂಡ ಭಾರತಕ್ಕೆ ಪ್ರಯಾಣಿಸಲಿದ್ದು, ಇಲ್ಲಿನ ತಂಡದೊಂದಿಗೆ ಆಡಲಿದೆ. ಜತೆಗೆ ಫುಟ್ಬಾಲ್ ಶಾಲೆಗಳ ಶಿಬಿರಕ್ಕೆ ಭೇಟಿ ನೀಡುವ ವೇಳೆ ಅಭಿಮಾನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.

ಜ್ಞಾನ ಹಂಚಿಕೆಯ ಸಂಸ್ಕೃತಿಯನ್ನು ಸಹ ಬೆಳಸಲಾಗುತ್ತದೆ. ಎರಡೂ ಕ್ಲಬ್ ಗಳಲ್ಲಿ ಹಲವಾರು ಭಿನ್ನ ಭಾಗಗಳಲ್ಲಿ ಅನುಭವ ಮತ್ತು ಅವಕಾಶಗಳನ್ನು ಚರ್ಚಿಸಲಾಗುತ್ತದೆ. ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಸೀನಿಂಗ್ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಬೆಳೆಯಲು ಎದುರು ನೋಡುತ್ತಿದೆ.

ರೇಂಜರ್ಸ್ ವ್ಯವಸ್ಥಾಪಕ ನಿರ್ದೇಶ ಸೈವಾರ್ಟ್ ರಾಬರ್ಟನ್ , ನಾವೆಲ್ಲರು ಉತ್ಸುಕರಾಗಿದ್ದೇವೆ ಮತ್ತುಹಾಲಿ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಬೆಂಗಳೂರು ಎಫ್ ಸಿ ಜತೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದನ್ನು ಪ್ರಕಟಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ಶೇಷವಾಗಿ 1.3 ಶತಕೋಟಿ ಜನರಿರುವ ಭಾರತದಲ್ಲಿ ಫುಟ್ಬಾಲ್ ಅಭೂತಪೂರ್ವ ಯಶಸ್ಸು ಕಾಣುತ್ತಿರುವ ಈ ಸಮಯದಲ್ಲಿ ಸಹ ಭಾಗಿತ್ವ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ, ಎಂದಿದ್ದಾರೆ.

ಕ್ಲಬನ್ ಅಂತಾರಾಯ ಕಾರ್ಯತಂತ್ರವು ನಮ್ಮ ಬೆಳವಣಿಗೆಯ ಯೋಜನೆಗಳಿಗೆ ಒಂದು ಪ್ರಮುಖ ಆಧಾರ ಸ್ತಂಭವಾಗಿದೆ. ಈ ಸಹಭಾಗಿತ್ತವು ಭಾರತದ ಶಾಲ ಫುಟ್ಬಾಲ್ ಸಮುದಾಯಕ್ಕೆ ರೇಂಜರ್ಸ್ ಗಳನ್ನು ಮುಕ್ತಗೊಳಿಸುತ್ತದೆ. ಜತೆಗೆ ವ್ಯಾಪಕ ರೀತಿಯಲ್ಲಿ ಅಭಿಮಾನಿಗಳನ್ನು ತಲುಪಲು ನಮಗೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಲುದಾರಿಕೆಯ ವೇಳೆ ಮಾತನಾಡಿದ ಬೆಂಗಳೂರು ಎಫ್ ಸಿ ಸಿಇಒ ಮಂದಾರ್ ತಮ್ಹಾನೆ, ರೇಂಜರ್ಸ್ ಎಫ್ ಸಿ ಯೊಂದಿಗಿನ ಸಹಭಾಗಿತ್ವದ ಷಯ ನಮಗೆ ಹೆಮ್ಮೆ ಪಡುವಂತದ್ದು, ಈ ಕ್ಲಬ್ ಇತಿಹಾಸದ ಜತೆಗೆ ಜಾಗತಿಕ ಮಟ್ಟದ ಅಗ್ರ ಕ್ಲಬ್ ಗಳಲ್ಲಿ ಒಂದಾಗಿದೆ, ಎಂದಿದ್ದಾರೆ.

ಪಾಲುದಾರಿಕೆಯು ಜ್ಞಾನ ಮತ್ತು ಸೇವೆಗಳ ನಿಮಯವನ್ನು ಆಧರಿಸಿದೆ. ನಾವು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇವೆ. ಬೆಂಗಳೂರು ಎಫ್ ಸಿ ರೇಂಜರ್ಸ್ ಮಾರ್ಗದರ್ಶನದೊಂದಿಗೆ ಭಾರತೀಯ ಫುಟ್ಬಾಲ್ ಬೆಳವಣಿಗೆಗೆ ಶ್ರಮಿಸಲಿದೆ. ಮುಂಬರುವ ವರ್ಷಗಳಲ್ಲಿ ಫುಟ್ಬಾಲ್ ಶಾಲೆಗಳು ಮತ್ತು ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.