ಬೆಂಗಳೂರು ಎಫ್ಸಿ ಗೆಲುವು 3-0; ಮಾನ್ಯತೆಗಳ ಮೇಲೆ ಹೋಗಿ

ಪುಣೆ ಸಿಟಿ ವಿರುದ್ದ ಬಿಎಫ್ಸಿಗೆ 3 ಅಂಕ ತಂದ ನಾಯಕ ಛತ್ರಿ, ಮಿಕು ಕಾಲ್ಬಳಕ, ತವರಿನಾಚೆ ಕ್ವಾಡ್ರಟ್ ಬಳಗ ಅದ್ಭುತ ಆರಂಭ

ಪುಣೆ: ನಾಯಕ ಸುನಿಲ್ ಚೆಟ್ರಿ ಅವರ ಅವಳಿ ಗೋಲ್‌ಗಳಿಂದ ಮಿಂದೆದ್ದ ಬೆಂಗಳೂರು ಎಫ್‌ಸಿ ಐಎಸ್ ಎಲ್ 5ನೇ ಆವೃತ್ತಿಯ ತನ್ನ ತೃತೀಯ ಪಂದ್ಯದಲ್ಲಿ ಎಫ್ಸಿ ಪುಣೆ ಸಿಟಿ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ 3-0 ಗೋಲ್‌ಗಳ ಅಂತರದಲ್ಲಿ ಆತಿಥೇಯ ಪುಣೆ ಸಿಟಿ ವಿರುದ್ಧ ಏಕಪಕ್ಷೀಯ ಜಯ ದಾಖಲಿಸಿತು, ಋತುವಿನಲ್ಲಿ ಮೊದಲ ಬಾರಿಗೆ ತವರಿನಾಚೆ ಪುಣೆ ಎದುರು ಕಣಕ್ಕಿಳಿದ ಬ್ಲೂಸ್ ಉತ್ತಮ ಆರಂಭ ಕಾಣುವಲ್ಲಿ ಯಶಸ್ವಿಯಾಯಿತು. ಈ ಜಯದೊಂದಿಗೆ ಮೂರು ಪಂದ್ಯಗಳಿಂದ 7 ಅಂಕ ಸಂಪಾದಿಸಿ ಛತ್ರಿ ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಬೆಂಗಳೂರು ತಂಡದ ಪರ ಫಾರ್ವಡ್್ರ ಸುನಿಲ್ ಛತ್ರಿ (41, 43ನೇ ನಿಮಿಷ) ಎರಡು ಹಾಗೂ ಮಿಕು (64ನೇ ನಿಮಿಷ) ಒಂದು ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರು. ಈ ಮೂಲಕ ಪುಣೆ ವಿರುದ್ಧದ ಐದು ಪಂದ್ಯಗಳ ಮುಖಾಮುಖಿಯ ದಾಖಲೆಯಲ್ಲಿ ಗೆಲುವಿನ ಸಂಖ್ಯೆಯನ್ನು ತಿಕ್ಕೆ ವಿಸ್ತರಿಸಿತು. ಉಳಿದೆರಡು ಪಂದ್ಯಗಳು ಡ್ರಾಗೊಂಡಿವೆ. ಅತ್ತ ತವರಿನಲ್ಲಿ ಖಾತೆ ತೆರೆಯುವ ಹಂಬಲದಲ್ಲಿ ಕಣಕ್ಕಿಳಿದ ಪುಣೆ ಪ್ರವಾಸಿ ತಂಡದ ಆಕ್ರಮಣಕಾರಿ ದಾಳಿಗೆ ಬೆಚ್ಚಿತಲ್ಲದೆ ಸೋಲಿನ ಅಂತರ ತಗ್ಗಿಸವಲ್ಲಿಯೂ ವಿಫಲಗೊಂಡು ಸತತ ಎರಡನೇ ಸೋಲಿಗೆ ಒಳಗಾಯಿತು.

ಇದಕ್ಕೂ ಮುನ್ನ ಆತಿಥೇಯರ ಮೇಲಿನ ಪ್ರವಾಸಿ ತಂಡದ ಆಕ್ರಮಣಕಾರಿ ಆಟದ ಫಲವಾಗಿ 64ನೇ ನಿಮಿಷದಲ್ಲಿ ಮಿಕು ಬಿಎಫ್ಸಿ ಪರ ಗೋಲ್ ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ದ್ವಿತೀಯಾರ್ಧದ ಆರಂಭದಲ್ಲೇ ಕ್ವಾಡ್ರಟ್ ಬಳಗದ ಹರ್ಮನ್‌ಜ್ಯೋತ್ ಖಾಬ್ರಾ ಹಳದಿ ಕಾರ್ಡ್‌ಗೆ ಗುರಿಯಾದರೆ, ಪುಣೆ ತಂಡ ಡಿಯಾಗೊ ಕಾರ್ಲೊಸ್ ಮತ್ತು ಶಂಕರ್ ಸಂಪಂಗಿ ರಾಜ್ ಅವರನ್ನು ಕ್ರಮವಾಗಿ ಮಾರ್ಟಿನ್ ಮತ್ತು ನಿಖಿಲ್ ಬದಲಿಗೆ ಕಣಕ್ಕಿಳಿಸಿತು. ಈ ಮಧ್ಯೆ ಸಾಹಿಲ್ ಪನ್ವರ್‌ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.
ಆರಂಭದಲ್ಲಿ ತಾಳ್ಮೆ ಹಾಗೂ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಬಿಎಫ್ ಸಿ, ನಾಯಕ ಸುನಿಲ್ ಛಟ್ರಿ ದಾಖಲಿಸಿದ ಅವಳಿ ಗೋಲ್‌ಗಳ ನೆರವಿನಿಂದ ಪ್ರಥಮಾರ್ಧಕ್ಕೆ 2-0 ಗೋಲ್‌ಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. 41ನೇ ನಿಮಿಷದಲ್ಲಿ ಡಿಮಾಸ್ ಡೆಲ್ಲಾಡೊ ನೆರವಿನಿಂದ ಬಿಎಫ್ಸಿ ಪರ ಖಾತೆ ತೆರೆದ ಫಾರ್ವಡ್್ರ ಆಟಗಾರ ಛಟ್ರಿ, ಇದಾದ ಎರಡೇ ನಿಮಿಷದಲ್ಲಿ ಮಿಕು ಸಹಾಯದಿಂದ ತಂಡದ ಹಾಗೂ ವೈಯಕ್ತಿಕ ಎರಡನೇ ಗೋಲ್ ದಾಖಲಿಸಿದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಛತ್ರಿ ತಮ್ಮ ಗೋಲಿನ ಸಂಖ್ಯೆಯನ್ನು ಮೂರಕ್ಕೇರಿಸಿದರು. ಇದಕ್ಕೂ ಮೊದಲು ಜಮ್ಶೆಡ್‌ಪುರ ತಂಡದ ಪರ ಖಾತೆ ತೆರೆದಿದ್ದರು.

ಡಿಮಾಸ್ ಡೆಲ್ದಾಡೊ 37ನೇ ನಿಮಿಷದಲ್ಲಿ ಕಾರ್ನ‌್ರನಿಂದ ಚೆಂಡನ್ನು ಪೆನಾಲ್ಟಿ ವಲಯದತ್ತ ದೂಡಿದರು. ಈ ಸಂದರ್ಭದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಪಡೆದ ಛತ್ರಿ ಗೋಲ್ ಪೆಟ್ಟಿಗೆಯತ್ತ ಯಶಸ್ವಿಯಾಗಿ ಹೊಡೆದರೂ ಆತಿಥೇಯ ತಂಡದ ಗೋಲ್ ಕೀಪರ್ ಚೆಂಡನ್ನು ತಮ್ಮೆರಡು ಕೈಯಲ್ಲಿ ಬಾಚಿಕೊಂಡರು. ಹೀಗಾಗಿ ಮುನ್ನಡೆ ಗಳಿಸುವ ಬ್ಲೂಸ್ ತಂಡದ ಕನಸು ಈಡೇರಲಿಲ್ಲ.

20 ನಿಮಿಷಗಳ ನಂತರ ಮುನ್ನಡೆಗಾಗಿ ಉಭಯ ತಂಡಗಳು ತಮ್ಮ ಆಕ್ರಣಮಕಾರಿ ಆಟಕ್ಕೆ ಒತ್ತು ನೀಡಿದವು. ಅದರಲ್ಲೂ ಬ್ಲೂಸ್ ನಾಯಕ ಛತ್ರಿ ಮತ್ತು ಉದಾಂತ ಚೆಂಡಿನ ಮೇಲಿನ ಹಿಡಿತಕ್ಕೆ ಇನ್ನಿಲ್ಲದ ಹರಸಹಾಸ ನಡೆಸಿದರು. ಪ್ರವಾಸಿ ಆಟಗಾರರ ಆಟಕ್ಕೆ ತಡೆಯೊಡ್ಡಿದ ಪರಿಣಾಮ ಆತಿಥೇಯ ಪುಣೆ ತಂಡದ ಆಶಿಕ್ ಕುರುನಿಯನ್ 10ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. 15ನೇ ನಿಮಿಷದಲ್ಲಿ ವೆನೆಜುವೆಲಾ ಫಾರ್ವಡ್ ಮಿಕು ಬಿಎಫ್ಸಿ ಪರ ಖಾತೆ ತೆರೆಯಲು ಯತ್ನಿಸಿದ ಚೆಂಡು ಗೋಲ್ ಪೆಟ್ಟಿಗೆ ಮೇಲೆ ಹಾದು ಹೋಯಿತು. ಹೀಗಾಗಿ ಬಿಎಫ್‌ಗೆ ಮತ್ತೆ ನಿರಾಸೆ ಎದುರಿಸಿತು. ಈ ಮಧ್ಯೆ 18ನೇ ನಿಮಿಷದಲ್ಲಿ ಪುಣೆ ತಂಡದ ಮಾರ್ಸಿಲಿನ್ನೋ ಫ್ರೀ ಕಿಕ್ ಮೂಲಕ ಯತ್ನಿಸಿದ ಗೋಲಿನ ಯತ್ನವನ್ನು ಪ್ರವಾಸಿ ತಂಡದ ಸ್ಟಾರ್ ಗೋಲ್ ಕೀಪರ್ ಗುರ್‌ ಪ್ರೀತ್ ಸಿಂಗ್ ಅದ್ಭುತವಾಗಿ ರಕ್ಷಣೆ ಮಾಡಿದರು.

ಕೋಚ್ ಕಾರ್ಲೊಸ್ ಕ್ವಾಡ್ರಟ್ ತಿಳಿಸಿದಂತೆ ಡಿಮಾಸ್ ಡೆಲ್ಲಾಡೊ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದು ತಂಡದ ಆತ್ಮಸ್ಥೆರ್ಯವನ್ನು ಹಿಗ್ಗಿಸಿತು. ಪಂದ್ಯದ 7ನೇ ನಿಮಿಷದಲ್ಲಿ ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ಬದಿಯಿಂದ ಚೆಂಡನ್ನು ನಾಯಕ ಹಾಗೂ ಶೈಕರ್ ಛತ್ರಿಯತ್ತ ಪಾಸ್ ಮಾಡಿದರು. ಆದರೆ ಇದನ್ನು ನಿಯಂತ್ರಣಕ್ಕೆ ಪಡೆಯುವಲ್ಲಿ ಛತ್ರಿ ವಿಫಲವಾದ ಕಾರಣ ಬಿಎಫ್ಸಿಯ ಮುನ್ನಡೆಯ ಯತ್ನ ಸಾಕಾರವಾಗಲಿಲ್ಲ. ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಗೆಲುವು -ಡ್ರಾದ ಅನುಭವ ಹೊಂದಿದ್ದ ಬೆಂಗಳೂರು ಎಫ್ಸಿ ಮೂರು ಅಂಕ ಕಲೆಹಾಕುವ ನಿಟ್ಟಿನಲ್ಲಿ ಪ್ರಸಕ್ತ ಋತುವಿನಲ್ಲಿ ಮೊದಲ ಬಾರಿ ತವರಿನಾಚೆ ಎಫ್ ಸಿ ಪುಣೆ ಸಿಟಿ ವಿರುದ್ಧ ಅಭಿಯಾನ ಆರಂಭಿಸಿತು.

ಬೆಂಗಳೂರು ಎಫ್ಸಿ ಇದೇ 31ರಂದು ಕೋಲ್ಗೊತಾದಲ್ಲಿ ಎಟಿಕೆ ತಂಡವನ್ನು ಎದುರಿಸಲಿದೆ.

Malcare WordPress Security