ನಾರ್ತ್‌ಈಸ್ಟ್ ವಿರುದ್ದ ಅಂಕ ಹಂಚಿಕೊಂಡ ಬಿಎಫ್‌ಸಿ

ಬಿಎಫ್ಸಿ ಸೋಲು ತಪ್ಪಿಸಿದ ಚೆಂಚ್ ಗಿಲ್‌ಶನ್, ಪಂದ್ಯ 1-1ರಲ್ಲಿ ಡ್ರಾ

ಗುವಾಹಟಿ: ಪಂದ್ಯದ ಅಂತಿಮ ಕ್ಷಣದಲ್ಲಿ ಚೆಂಚೊ ಗಿಲ್ಲೆಶೆನ್ ಬಾರಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ಸಿ ತನ್ನ 9ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಡ್ರಾ ಮಾಡಿಕೊಂಡಿದೆ. ಉಭಯ ತಂಡಗಳಿಗೆ ತಲಾ ಒಂದು ಅಂಕ ಲಭಿಸಿವೆ.

ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸಮಬಲದ ಹೋರಾಟ ತೋರಿದ ಬಿಎಫ್ಸಿ ಮತ್ತು ನಾರ್ತ್‌ಈಸ್ಟ್ ತಂಡಗಳು 1-1ರಲ್ಲಿ ಡ್ರಾ ಸಾಧಿಸಿದವು. ಬಿಎಫ್ಸಿ ಪರ ಚೆಂಕೊ (90ನೇ ನಿ.) ಏಕೈಕ ಗೋಲ್ ಗಳಿಸಿದರೆ, ಆತಿಥೇಯ ನಾರ್ತ್‌ಈಸ್ಟ್ ಪರ ಫೆಡರಿಕೊ ಗಲ್ಲೆಗೊ(64ನೇ ನಿ.) ಒಂದು ಗೋಲ್ ದಾಖಲಿಸಿದರು.

ಪಂದ್ಯದ ೨೦ನೇ ನಿಮಿಷದವರೆಗೂ ಆತಿಥೇಯ ತಂಡ 1-0 ಅಂತರದಲ್ಲಿ ಮೇಲುಗೈ ಸಾಧಿಸಿದ್ದ ಕಾರಣ ಬಿಎಫ್ಸಿಗೆ ಪ್ರಸಕ್ತ ಲೀಗ್‌ನಲ್ಲಿ ಮೊದಲ ಸೋಲು ಎದುರಾಗುವ ಭೀತಿ ಎದುರಾಯಿತು. ಆದರೆ ಚೆಂಚೊ ಅವರ ಅದ್ಭುತ ಗೋಲಿನಿಂದ ತಂಡ ಸೋಲಿನ ದವಡೆಯಿಂದ ಹೊರಬಿದ್ದಿತು. ಇದರೊಂದಿಗೆ ಬೆಂಗಳೂರು ಎಫ್ಸಿ ಆಡಿದ ಒಟ್ಟು 9 ಪಂದ್ಯಗಳಿಂದ 23 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಅಬಾಧಿತಗೊಳ್ಳುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಹಿನ್ನಡೆ ತಗ್ಗಿಸುವ ಒತ್ತಡದಲ್ಲಿದ್ದ ಬೆಂಗಳೂರಿಗೆ ಚೆಂಬೊ ಆಗಮನವಾದರೂ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಈ ಮಧ್ಯೆ ನಾರ್ತ್‌ಈಸ್ಟ್‌ನ ಒಗ್ಲೆಚೆ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.

66ನೇ ನಿಮಿಷದಲ್ಲಿ ಚೆಂಡನ್ನು ಹಿಮ್ಮೆಟ್ಟಿಸುವ ಭರದಲ್ಲಿ ಪ್ರಮಾದ ಎಸಗಿದ ಬಿಎಫ್‌ಸಿ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾಗಿದ್ದು ತಂಡಕ್ಕೆ ಬಾರಿ ಹಿನ್ನಡೆ ಉಂಟು ಮಾಡಿತು. ಇದಕ್ಕೂ ಮುನ್ನ 64ನೇ ನಿಮಿಷದಲ್ಲಿ ಬೆಂಗಳೂರಿನ ಪ್ರಬಲ ರಕ್ಷಣಾ ಕೋಟೆಯನ್ನು ಬೇಧಿಸಿದ ನಾರ್ತ್‌ಈಸ್ಟ್ ಯುನೈಟೆಡ್ ಕೊನೆಗೂ 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡು ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿತು. ಬಾರ್ಥೊಲೊಮೆವ್ ಒಗ್ಗಚೆ ನೆರವಿನಿಂದ ಸ್ಟಾರ್ ಮುನ್ನಡೆ ಆಟಗಾರ ಫೆಡೊರಿಕೊ ಗಲ್ಲೆಗೊ ಗೋಲ್ ಗಳಿಸಿ ಆತಿಥೇಯ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

56ನೇ ನಿಮಿಷದಲ್ಲಿ ಬಿಎಫ್ಸಿಯ ಎರಿಕ್ ಪಾರ್ತಾಲು ಉತ್ತಮ ಗೋಲಿನ ಯತ್ನ ನಡೆಸಿದರು. ಆದರೆ ಆತಿಥೇಯ ತಂಡದ ಗೋಲ್‌ಕೀಪರ್ ಪವನ್ ಕುಮಾರ್ ದಿಟ್ಟ ರಕ್ಷಣೆ ಮಾಡಿ ತಂಡಕ್ಕೆ ಆಗುತ್ತಿದ್ದ ಹಿನ್ನಡೆ ತಪ್ಪಿಸಿದರು. ಮುನ್ನಡೆಯ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಎರಡೂ ತಂಡಗಳು ಚೆಂಡಿನ ಟ್ಯಾಕಲ್ ವೇಳೆ ಹಲವು ಪ್ರಮಾದಗಳನ್ನು ಎಸಗಿದರು. ಆದರೆ ಇದು ತಂಡದ ಯಾವುದೇ ಅಡ್ಡ ಪರಿಣಾಮ ಬೀರಲಿಲ್ಲ.

ಉಭಯ ತಂಡಗಳ ಪ್ರಬಲ ರಕ್ಷಣೆಯಿಂದಾಗಿ ವಿರಾಮದ ವೇಳೆಗೆ ಮುನ್ನಡೆ ಕಂಡುಕೊಳ್ಳುವ ಎರಡೂ ತಂಡಗಳ ಕಾರ್ಯತಂತ್ರ ಫಲ ನೀಡಲಿಲ್ಲ. ಹೀಗಾಗಿ ಇತ್ತಂಡಗಳು 0-0ರಲ್ಲಿ ಮೊದಲಾರ್ಧ ಕೊನೆಗೊಳಿಸಿದವು. ಆತಿಥೇಯ ನಾರ್ತ್‌ಈಸ್ಟ್ 2ನೇ ಬಾರಿ ಶಾಟ್ಸ್ ಆಫ್ ಟಾರ್ಗೆಟ್‌ನಲ್ಲಿ ಯಶ ಕಂಡರೆ, ಬೆಂಗಳೂರು ಕೇವಲ ಒಂದಕ್ಕೆ ಸೀಮಿತಗೊಂಡಿತು.

25ನೇ ನಿಮಿಷದವರೆಗೂ ಬೆಂಗಳೂರು ಎಫ್ಸಿ ಗೋಲಿನ ಮೇಲೆ ನಿಯಂತ್ರಣ ಸಾಧಿಸಿದರೂ ಗೋಲ್ ಗಳಿಸುವ ಉತ್ತಮ ಅವಕಾಶಗಳನ್ನು ಕಲ್ಪಿಸದೆ ಪ್ರಬಲ ರಕ್ಷಣೆ ಒಡ್ಡಿತು. ಹೀಗಾಗಿ ಇತ್ತಂಡಗಳ ಹೋರಾಟ 0-0 ಅತ್ತೆ ಮುಂದುವರಿಯಿತು.

11ನೇ ನಿಮಿಷದಲ್ಲಿ ಸುನಿಲ್ ಛತ್ರಿ ಅವರ ಗೋಲಿನ ಯತ್ನವನ್ನು ಆತಿಥೇಯತ ತಂಡದ ಪವನ್ ತಡೆಯುವಲ್ಲಿ ಯಶಸ್ವಿಯಾದರು. ಈ ನಡುವೆ ಗೋಲಿಗಾಗಿ ಉಭಯ ತಂಡಗಳ ಆಕ್ರಮಣಕಾರಿ ಆಟ ಮತ್ತಷ್ಟು ರಂಗೇರಿತು. 13ನೇ ನಿಮಿಷದಲ್ಲಿ ಫೆಡೆರಿಕೊ ಗಲೆಗೊ ನಾರ್ತ್‌ಈಸ್ಟ್‌ ಪರ ಖಾತೆ ತೆರೆಯುವ ಅದ್ಭುತ ಯತ್ನ ಮಾಡಿದರು. ಆದರೆ ಬಿಎಫ್ಸಿ ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ.

ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಡಿಮಾಸ್ ಡೆಲ್ಲಾಡೊ ಅವರ ಲಭ್ಯತೆಯೊಂದಿಗೆ ಅಖಾಡಕ್ಕಿಳಿದ ಬಿಎಫ್ಸಿ ಆರಂಭದಲ್ಲೇ ಆಕ್ರಮಣಕಾರಿ ದಾಳಿಗೆ ಮುಂದಾಯಿತು. 8ನೇ ನಿಮಿಷದಲ್ಲಿ ಕ್ರಿಸ್ಟೋ ಎದುರಾಳಿ ಡಿಫೆಂಡರ್‌ಗಳಿಂದ ಚೆಂಡು ಕಸಿದು ಗೋಲಿಗೆ ಯತ್ನಿಸಿದರೂ ಎದುರಾಳಿ ಆಟಗಾರರು ಪ್ರಬಲ ರಕ್ಷಣೆ ಮಾಡಿದರು. ಲೀಗ್ ಲೀಡರ್ ಬೆಂಗಳೂರು ಎಫ್ಸಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಂಕಪಟ್ಟಿಯ ದ್ವಿತೀಯ ಸ್ಥಾನಿ ಪ್ರವಾಸಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಕಣಕ್ಕಿಳಿಯಿತು.

ಬೆಂಗಳೂರು ಎಫ್ ಸಿ ಇದೇ ತಿಂಗಳ 9ರಂದು ಮನೆಯಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮುಂಬಯಿ ಸಿಟಿ ಎಫ್‌ಸಿ ತಂಡವನ್ನು ಎದುರಿಸಲಿದೆ.

Malcare WordPress Security