ಬಿಎಫ್ಸಿಗೆ ಸಾಟಿಯಾಗದ ಪುಣೆ

ಅಗ್ರಸ್ಥಾನದಲ್ಲಿ ಮುಂದುವರಿದ ಬೆಂಗಳೂರು ಎಫ್ ಸಿ, ಉದಾಂತ, ರಾಹುಲ್ ಭೆಕೆ ಮಿಂಚು

ಬೆಂಗಳೂರು: ಎದುರಾಳಿ ತಂಡಕ್ಕೆ ಉಡುಗೊರೆ ಗೋಲ್ ನೀಡಿದರೂ ನಂತರ ತಂಡದ ಪರ ಗೆಲುವಿನ ಗೋಲ್ ಗಳಿಸಿದ ರಾಹುಲ್ ಭೆಕೆ, ಎಫ್ಸಿ ಪುಣೆ ವಿರುದ್ದ ಬೆಂಗಳೂರು ತಂಡಕ್ಕೆ ಮೂರು ಅಂಕ ಗಳಿಸಲು ನೆರವಾಗುವ ನಿಟ್ಟುಸಿರು ಬಿಟ್ಟರು.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 2-1 ಗೋಲ್‌ಗಳಿಂದ ಎಫ್ ಸಿ ಪುಣೆ ಸವಾಲನ್ನು ಬಗ್ಗು ಬಡಿಯಿತು. ಇದರೊಂದಿಗೆ ಒಟ್ಟು 22 ಅಂಕ ಕಲೆಹಾಕಿದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಹತ್ತು ತಂಡಗಳ ಅಂಕಪಟ್ಟಿಝ್ಲಿ ತನ್ನ ಮೊದಲ ಸ್ಥಾನವನ್ನು ಇನ್ನಷ್ಟು ಭದ್ರಗೊಂಡಿತು.

ಬೆಂಗಳೂರು ಎಫ್ ಸಿ ಪರ ಉದಾಂತ ಸಿಂಗ್ (11ನೇ ನಿಮಿಷ) ಮತ್ತು ರಾಹುಲ್ ಭೆಕೆ (88ನೇ ನಿಮಿಷ)ಒಂದು ಗೋಲ್‌ಗಳಿಸಿದರೆ, ಎಫ್ಸಿ ಪುಣೆ ಪರ ಬಿಎಫ್ಸಿ ತಂಡದ ರಾಹುಲ್ ಭೆಕೆ (13ನೇ ನಿಮಿಷ) ಸ್ವಯಂ ಗೋಲ್ ನೀಡಿದರು. ಕೊನೆಗೂ 88ನೇ ನಿಮಿಷದಲ್ಲಿ ಎದುರಾಳಿ ರಕ್ಷಣೆಯ ಕಣ್ಣಪ್ಪಿಸಿದ ಛತ್ರಿ ಬಳಗ ಮುನ್ನಡೆಯನ್ನು 21ಕ್ಕೆ ವಿಸ್ತರಿಸಿಕೊಳ್ಳುವಲ್ಲಿ ಸಫಲತೆ ಕಂಡಿತು. ಇದಕ್ಕೆ ಕಾರಣವಾಗಿದ್ದು , ರಾಹುಲ್ ಭೆಕೆ. ಹರ್ಮನ್‌ಜೋತ್ ಖಾಬ್ರರಿಂದ ಚೆಂಡು ಸ್ವೀಕರಿಸಿದ ಭಕೆ ಸುಲಭವಾಗಿ ಚೆಂಡನ್ನು ಗೋಲಿನ ಪೆಟ್ಟಿಗೆಯೊಳಗೆ ಸೇರಿಸಿ ತವರು ಅಭಿಮಾನಿಗಳು ಹಾಗೂ ತಂಡದ ಸದಸ್ಯರ ಹರ್ಷೋದ್ದಾರಕ್ಕೆ ಕಾರಣರಾದರು.

66ನೇ ನಿಮಿಷದಲ್ಲಿ ಆಟಗಾರರ ಬದಲಾವಣೆಗೆ ಬಿಎಫ್ಸಿ ಒತ್ತು ನೀಡಿದರೂ ಇದು ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಮುನ್ನಡೆ ಗಳಿಕೆಯ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದ ಉಭಯ ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಆದರೆ ಗೋಲ್ ಗಳಿಕೆಯ ಹಲವು ಅವಕಾಶಗಳನ್ನು ಆತಿಥೇಯ ತಂಡದ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ .

ಪ್ರಥಮಾರ್ಧದ ಹೆಚ್ಚುವರಿ ಸಮಯದಲ್ಲಿ ಬಿಎಫ್ಸಿ ಮುನ್ನಡೆಗೆ ನಡೆಸಿದ ಎಲ್ಲ ಹರಸಾಹಸಗಳ ಕೈಗೂಡದ ಕಾರಣ ಬ್ಲೂ ಬಳಗ ವಿರಾಮಕ್ಕೆ 1-1ರಲ್ಲಿ ತೆರಳಬೇಕಾಯಿತು. ಅದರಲ್ಲೂ 45ನೇ ನಿಮಿಷದಲ್ಲಿ ಎರಿಕ್ ಪಾರ್ತಾಲು ಗೋಲಿಗಾಗಿ ಯತ್ನಿಸಿದ ಚೆಂಡು ಗೋಲ್ ಪೆಟ್ಟಿಗೆಯ ಅಡ್ಡ ಕಂಬಕ್ಕೆ ತಾಗಿ ಹಿಮ್ಮುಖವಾಗಿದ್ದು , ತವರು ಅಭಿಮಾನಿಗಳ ನಿರಾಸೆಗೆ ಕಾರಣವಾಯಿತು.ಇದಕ್ಕೂ ಮುನ್ನ 37ನೇ ನಿಮಿಷದಲ್ಲಿ ಚೆಂಚೊ ಅವರಿಂದ ಚೆಂಡು ಸ್ವೀಕರಿಸಿದ ಛತ್ರಿ ಉತ್ತಮ ಗೋಲ್ ಗಳಿಕೆಯ ಅವಕಾಶವನ್ನು ಕೈಚಲ್ಲಿದರು.

21ನೇ ನಿಮಿಷದಲ್ಲಿ ಗೋಲ್ ಗಳಿಕೆಯ ಅವಕಾಶ ಕಳೆದುಕೊಂಡ ಬೆಂಗಳೂರು ಎಫ್‌ಸಿ, ಛತ್ರಿ, ಪಾರ್ತಾಲು, ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದ ಪರಿಣಾಮ 26ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ಕೋಟೆ ಬಳಗವನ್ನು ಆತಂಕಕ್ಕೆ ದೂಡಿತು. ಆದರೆ ಮುನ್ನಡೆ ಗಳಿಸುವ ಆತಿಥೇಯರ ಬಯಕೆ ಈಡೇರಲಿಲ್ಲ.

ಆತಿಥೇಯ ತಂಡದ ರಾಹುಲ್ ಭೆಕೆ ಎಸಗಿದ ಪ್ರಮಾದದಿಂದಾಗಿ ಎಫ್ ಸಿ ಪುಣೆ 13ನೇ ನಿಮಿಷದಲ್ಲಿ ಉಡುಗೊರೆ ಗೋಲು ಸ್ವೀಕರಿಸಿತು. ಹೀಗಾಗಿ 1-1ರಲ್ಲಿ ಹೋರಾಟ ತೋರಿತು. ಟ್ಯಾಕಲ್‌ನಲ್ಲಿ ಆತಿಥೇಯ ಆಟಗಾರರ ಹೊಂದಾಣಿಕೆಯ ಕೊರತೆ ಪ್ರವಾಸಿ ತಂಡಕ್ಕೆ ಲಾಭವಾಗಿ ಪರಿಣಮಿಸಿತು. 13ನೇ ನಿಮಿಷದಲ್ಲಿ ಡಿಮಾಸ್ ಡೆಲ್ಟಾಡೊ ಅವರ ಉತ್ತಮ ಗೋಲಿನ ಯತ್ನದಿಂದ ಬಿಎಫ್‌ಸಿ ಮುನ್ನಡೆಯನ್ನು 2-0ಗೆ ವಿಸ್ತರಿಸುವ ಅವಕಾಶ ಹೊಂದಿತ್ತಾದರೂ ಕಮಲ್‌ಜಿತ್ ಸಿಂಗ್ ದಿಟ್ಟ ರಕ್ಷಣೆ ಒಡ್ಡಿದ್ದರಿಂದ ಇದು ವಿಫಲಗೊಂಡಿತು.

ಇದಕ್ಕೂ ಮುನ್ನ ತವರಿನ ಸಂಪೂರ್ಣ ಲಾಭ ಹೊಂದಿದ್ದ ಬಿಎಫ್ಸಿ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ ಸ್ಟಾರ್‌ ಸೈಕರ್ ಉದಾಂತ ಸಿಂಗ್, ಹರ್ಮನ್‌ಜೋತ್ ಖಾಬ್ರ ಅವರ ನೆರವಿನಿಂದ 11ನೇ ನಿಮಿಷದಲ್ಲಿ ಅದ್ಭುತ ಗೋಲ್ ದಾಖಲಿಸಿ ಆರಂಭದಲ್ಲೇ ಆತಿಥೇಯ ತಂಡಕ್ಕೆ 1-0 ಅಂತರದ ಮೇಲುಗೈ ಒದಗಿಸಿದರು. ಇದೇ ಅಂಗಣದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಅಂತಿಮ ಕ್ಷಣದಲ್ಲಿ ಗೋಲ್ ಗಳಿಸಿದ್ದ ಉದಾಂತ ಜಯದ ರೂವಾರಿಯೆನಿಸಿದ್ದರು.

ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್ ಸಿ ಮತ್ತೊಂದು ಜಯ ಗಳಿಸಿ ಪ್ಲೇ ಹಂತವನ್ನು ಭದ್ರಪಡಿಸಿಕೊಳ್ಳುವ ಗುರಿಯೊಂದಿಗೆ ಪುಣೆ ಎದುರು ಕಣಕ್ಕಿಳಿದರೆ, ಅತ್ತ ತನ್ನ ವಿರುದ್ದ ಲೀಗ್‌ನಲ್ಲಿ ಆರು ಗೋಲ್ ಗಳಿಸಿರುವ ಸುನಿಲ್ ಛತ್ರಿ ಭಯದಲ್ಲಿ ಪ್ರವಾಸಿ ತಂಡ ಮೈದಾನಕ್ಕಿಳಿಯಿತು. ಬೆಂಗಳೂರು ಎಫ್ ಸಿ ಡಿಸೆಂಬರ್ 5ರಂದು ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದೆ.

Malcare WordPress Security