ಬೆಂಗಳೂರು – ಜಮ್ಶೆಡ್ಪುರ ಪಂದ್ಯ 2-2ರಲ್ಲಿ ಡ್ರಾ

ಬಳಗ, ಜಮ್ಶೆಡ್‌ಪುರ ತಂಡವನ್ನು ಸೋಲಿನಿಂದ ಪಾರು ಮಾಡಿದ ಸೆರ್ಗಿಯೋ

ಬೆಂಗಳೂರು: ಪಂದ್ಯದ ಹೆಚ್ಚುವರಿ ಸಮಯದಲ್ಲಿ ಎಡವಿದ ಪರಿಣಾಮ ಬೆಂಗಳೂರು ಎಫ್ ಸಿ ಐಎಸ್ ಎಲ್ 5ನೇ ಆವೃತ್ತಿಯ ತನ್ನ ದ್ವಿತೀಯ ಪಂದ್ಯದಲ್ಲಿ ಜಮ್ಶೆಡ್‌ಪುರ ಎಫ್ ಸಿ ವಿರುದ್ಧ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಕೇವಲ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 2-2 ಗೋಲ್‌ಗಳಿಂದ ಜಮ್ಶೆಡ್‌ಪುರ ಎಫ್ ಸಿ ವಿರುದ್ದ ಡ್ರಾ ಮಾಡಿಕೊಂಡು ಅಂಕ ಹಂಚಿಕೊಂಡಿತು. ಇದರೊಂದಿಗೆ ಆಡಿದ ಎರಡು ಪಂದ್ಯಗಳಿಂದ 4 ಅಂಕ ಕಲೆಹಾಕಿದ ಬೆಂಗಳೂರು ಎಫ್ ಸಿ ಲೀಗ್ ಅಂಕಪಟ್ಟಿಯಲ್ಲಿ ಅಗ್ರಪಟ್ಟಕ್ಕೇರುವ ಅವಕಾಶ ಕಳೆದುಕೊಂಡು ನಾಲ್ಕನೇ ಸ್ಥಾನದಲ್ಲಿಯೇ ಉಳಿಯಿತು. ಬೆಂಗಳೂರು ತಂಡದ ಪರ ನಿಶು ಕುಮಾರ್‌ (45ನೇ ನಿಮಿಷ) ಮತ್ತು ನಾಯಕ ಸುನಿಲ್ ಛ(88ನೇ – ನಿಮಿಷ) ತಲಾ ಒಂದು ಗೋಲ್ ಗಳಿಸಿದರೆ, ಜಮ್ಶೆಡ್‌ಪುರ ಪರ ಗೌರವ್ ಮುಖ(81ನೇ ನಿ.) ಮತ್ತು ಸೆರ್ಗಿಯೊ ಸಿಡೋನ್ಹಾ(90ನೇ ನಿ.) ತಲಾ ಒಂದು ಗೋಲ್ ದಾಖಲಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ ಕಾರಣ ಮುನ್ನಡೆಗಾಗಿ ಎರಡೂ ತಂಡಗಳು ಪ್ರಯತ್ನ ನಡೆಸಿದವು. ಆದರೆ ಆತಿಥೇಯ ಬಿಎಫ್ ಸಿ ಇದರಲ್ಲಿ ಯಶಸ್ವಿಯಾಯಿತು. ನಾಯಕ ಸುನಿಲ್ ಛತ್ರಿ 88ನೇ ನಿಮಿಷದಲ್ಲಿ ಹರ್ಮನ್‌ಜ್ಯೋತ್ ಖಾಬ್ರಾ ಅವರ ನೆರವಿನಿಂದ ತಂಡದ 2ನೇ ಗೋಲ್ ಗಳಿಸಿ ತವರು ಅಭಿಮಾನಿಗಳ ಹರ್ಷೋದ್ದಾರಕ್ಕೆ ಕಾರಣರಾದರು. ಅಲ್ಲದೆ ಪ್ರಸಕ್ತ ಲೀಗ್‌ನಲ್ಲಿ ಛತ್ರಿ ಗೋಲಿನ ಖಾತೆ ತೆರೆದರು. ಆದರೆ ಆತಿಥೇಯರ ಸಂಭ್ರಮ ಕ್ಷಣಾರ್ಧದಲ್ಲಿ ಕೊನೆಗೊಂಡಿತು. ೨೦ನೇ ನಿಮಿಷದಲ್ಲಿ ಆತಿಥೇಯ ತಂಡದ ರಕ್ಷಣಾ ಬಳಗ ಎಡವಿದ ಪರಿಣಾಮ ಸೆರ್ಗಿಯೊ ಸಿಡೋನ್ನಾ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮಿಂಚಿನ ಗೋಲ್ ಗಳಿಸಿ ಜಮ್ಶೆಡ್‌ಪುರ ತಂಡವನ್ನು ಸೋಲಿನಿಂದ ಹೊರ ತಂದರು.

71 ಮತ್ತು 72ನೇ ನಿಮಿಷದಲ್ಲಿ ಪ್ರವಾಸಿ ತಂಡ ಆಟಗಾರರ ಬದಲಾವಣೆ ಮಾಡಿತು. 71ನೇ ನಿಮಿಷದಲ್ಲಿ ಜೆರಿ ಬದಲಿಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡ ಗೌರವ್ ಮುಖಿ 81ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ 1-1ರ ಹೋರಾಟಕ್ಕೆ ಸಾಕ್ಷಿಯಾದರು. ಪ್ರಥಮಾರ್ಧದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಬೆಂಗಳೂರು ಎಫ್ ಸಿ ದ್ವಿತೀಯಾರ್ಧದಲ್ಲಿ ಮುನ್ನಡೆ ವಿಸ್ತರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಆಟಕ್ಕೆ ಮುಂದಾಯಿತು. ಈ ಮಧ್ಯೆ ಪದೇ ಪದೇ ಅಡ್ಡಿ ಪಡಿಸಿದ ಎದುರಾಳಿ ತಂಡದ ಮೆಮೊ ಮತ್ತು ಜೆರಿ ಹಳದಿ ಕಾರ್ಡ್‌ಗೆ ಗುರಿಯಾದರು.

ಇದಕ್ಕೂ ಮುನ್ನ ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ನಿಶು ಕುಮಾರ್ ದಾಖಲಿಸಿದ ಗೋಲಿನ ಫಲದಿಂದ ಆತಿಥೇಯ ತಂಡ 1-0 ಅಂತರದ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ 43ನೇ ನಿಮಿಷದಲ್ಲಿ ಮುನ್ನಡೆಯ ಅವಕಾಶವನ್ನು ಕಳೆದುಕೊಂಡ ಛತ್ರಿ ಬಳಗದ ನಿರಾಸೆಯನ್ನು ಮರೆಮಾಚಿಸಿತು.

ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಆದ್ಯತೆ ನೀಡಿದ ಪರಿಣಾಮ 45ನೇ ನಿಮಿಷದವರೆಗೂ ಯಾವುದೇ ಗೋಲ್ ದಾಖಲಾಗಲಿಲ್ಲ. 40ನೇ ನಿಮಿಷದಲ್ಲಿ ಆತಿಥೇಯ ತಂಡದ ನಾಯಕ ಸುನಿಲ್ ಛತ್ರಿಗೆ ತಡೆಯೊಡ್ಡಿದ ಪರಿಣಾಮ ಜಮ್ಶೆಡ್‌ಪುರದ ಯುಮ್ಯಾಮ್ ರಾಜು ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಆದಾಗ್ಯೂ ಪ್ರವಾಸಿ ತಂಡ ವಿರಾಮಕ್ಕೂ ಮುನ್ನ ಚೆಂಡಿನ ಮೇಲೆ ಪ್ರಭುತ್ವ ಸಾಧಿಸಿತು. ಆದರೆ ಆತಿಥೇಯರ ಪ್ರಬಲ ರಕ್ಷಣಾಕೋಟೆಯನ್ನು ಭೇದಿಸುವಲ್ಲಿ ಸಾಧ್ಯವಾಗಲಿಲ್ಲ . ಬಿಎಫ್ಸಿ ಮತ್ತು ಜಮ್ಶೆಡ್‌ಪುರ ಎಫ್ ಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಆಸ್ಟ್ರೇಲಿಯಾದ ಸ್ಟಾರ್ ಫಾರ್ವಡ್್ರ ಮತ್ತು ಆಕ್ರಮಣಕಾರಿ ಮಿಡ್ ಫೀಲ್ಡರ್‌ ಟಿಮ್ ಕಾಹಿಲ್ ಕೊನೆಗೂ ಲೀಗ್‌ನಲ್ಲಿ ಪದಾರ್ಪಣೆ ಮಾಡಿದರು. ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಿಎಫ್ಸಿ ಕೋಚ್ ಕಾರ್ಲಸ್ ಕ್ವಾಡ್ರಟ್ ಹೇಳಿದಂತೆ ಆಕ್ರಮಣಕಾರಿ ದಾಳಿಗೆ ಹೆಸರಾಗಿರುವ ಕಾಹಿಲ್ ಅವರನ್ನು ಆತಿಥೇಯ ರಕ್ಷಣಾ ಬಳಗ ಯೋಜನಾ ಬದ್ಧವಾಗಿ ಕಟ್ಟುಹಾಕುವಲ್ಲಿ ಯಶಸ್ವಿಯಾಯಿತು.

ಮನೆಯಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಆಡಿದ ಲೀಗ್ ಹಂತದ 9 ಪಂದ್ಯಗಳ ಪೈಕಿ 6ರಲ್ಲಿ ಜಯ ಗಳಿಸಿದ ದಾಖಲೆಯೊಂದಿಗೆ ಕಣಕ್ಕಿಳಿದ ಬೆಂಗಳೂರು ಎಫ್ ಸಿ ಪಂದ್ಯದ ಮೊದಲ 20 ನಿಮಿಷಗಳಲ್ಲಿ ಸಿಕ್ಕ ಗೋಲ್ ಗಳಿಕೆಯ ಅವಕಾಶಗಳನ್ನು ಕೈಚೆಲ್ಲಿತು.

ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದ ಬಿಎಫ್ಸಿ ಪರ 12ನೇ ನಿಮಿಷದಲ್ಲಿ ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ಗೋಲ್ ಗಳಿಕೆಯ ಯತ್ನ ನಡೆಸಿದರಾದರೂ ಮುನ್ನಡೆ ಗಳಿಸುವ ಆತಿಥೇಯರ ಯತ್ನ ಕೈಗೊಡಲಿಲ್ಲ . ಮರು ನಿಮಿಷದಲ್ಲಿ ವೆನೆಜುವೆಲಾ ಆಟಗಾರ ಮಿಕು ಚೆಂಡಿನ ಮೇಲಿನ ನಿಯಂತ್ರಣಕ್ಕೆ ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ .15ನೇ ನಿಮಿಷದಲ್ಲಿ ರಾಹುಲ್ ಭೇಕೆ ಉತ್ತಮ ಗೋಲ್ ಗಳಿಕೆಯ ಯತ್ನ ನಡೆಸಿದರು. ಆದರೆ ಎದುರಾಳಿ ಗೋಲ್‌ಕೀಪರ್ ದಿಟ್ಟ ರಕ್ಷಣೆವೊಡ್ಡಿ ತಂಡದ ಹಿನ್ನಡೆ ತಗ್ಗಿಸಿದರು.

ಬೆಂಗಳೂರು ಎಫ್ ಸಿ ಹತ್ತು ದಿನಗಳ ವಿರಾಮದ ಬಳಿಕ ಪ್ರಸಕ್ತ ಲೀಗ್‌ನಲ್ಲಿ ಮೊದಲ ಬಾರಿಗೆ ತವರಿನಾಚೆ ಇದೇ 22ರಂದು ಪುಣೆಯಲ್ಲಿ ಎಫ್ಸಿ ಪುಣೆ ಸಿಟಿ ತಂಡವನ್ನು ಎದುರಿಸಲಿದೆ.

Malcare WordPress Security