ಚೆನ್ನೈಯಿನ್ ವಿರುದ್ಧ ಬೆಂಗಳೂರು ಅಭಿಯಾನ ಕಳೆದ ವರ್ಷದ

ಫೈನಲ್ ಪುನರಾವರ್ತನೆಯೊಂದಿಗೆ ಬ್ಲೂಸ್ ಶುಭಾರಂಧ ನಿರೀಕ್ಷೆ, ಆದರೆ ಕೇವಲ ಮೂರು ಪಾಯಿಂಟ್ಸ್ ಗುರಿ -ಕ್ವಾಡ್ರಟ್

ಬೆಂಗಳೂರು: ಶ್ರೀ ಕಂಠೀರವ ಕ್ರೀಡಾಂಗಣ ದಕ್ಷಿಣ ಭಾರತದ ಅತಿದೊಡ್ಡ ಪಂದ್ಯವೊಂದಕ್ಕೆ ಮತ್ತೆ ವೇದಿಕೆ ಕಲ್ಪಿಸಿದೆ. ಭಾನುವಾರ ಚೆನ್ನೈಯಿನ್ ಎಫ್ ಸಿ ವಿರುದ್ದ ಬೆಂಗಳೂರು ಎಫ್ ಸಿ ಕಣಕ್ಕಿಳಿಯುವ ಮೂಲಕ ಇಂಡಿಯನ್ ಸೂಪರ್ ಲೀಗ್ ಐದನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿದೆ.

ಕೋಚ್ ಜಾನ್ ಗ್ರೆಗೋರಿ ನೇತೃತ್ವದ ಚೆನ್ನೈಯಿನ್ ಒಂದು ಗೋಲು ಹಿನ್ನಡೆ ಕಂಡರೂ ನಂತರ 3–2 ಗೋಲುಗಳಿಂದ ಚೆನ್ನೈಯಿನ್ ಎಫ್ಸಿ ತಂಡವನ್ನು ಸೋಲಿಸಿ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಬಾರಿಯ ಫೈನಲ್ ಪುನಾರವರ್ತನೆ ಎಂಬುದು ನಮಗೆಲ್ಲ ತಿಳಿದಿದೆ. ಆದರೆ ನಾವು ಋತುವಿನ ಆರಂಭಿಕ ಆಟವನ್ನು ಎದುರು ನೋಡುತ್ತಿದ್ದೇವೆ.

ಅವರ ಆಟವನ್ನು ನಾವು ಅಧ್ಯಯನ ಮಾಡಿದ್ದೇವೆ. ಆದರೆ ನಮ್ಮ ಬಲದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ ಮತ್ತು ಪಂದ್ಯದಲ್ಲಿ ಹೇಗೆ ನಮ್ಮ ಕಾರ್ಯತಂತ್ರಗಳನ್ನು ಬಳಸಿಕೊಳ್ಳಬೇಕೆಂಬುದರ ಬಗ್ಗೆ ಯೋಜಿಸುತ್ತಿದ್ದೇವೆ, ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಿಎಫ್ಸಿ ಕೋಚ್ ಕ್ವಾಡ್ರಟ್ ಹೇಳಿದ್ದಾರೆ.

ಕಳೆದ ಜುಲೈನಲ್ಲಿ ಒಂದೆಡೆ ಸೇರಿದ್ದ ಬ್ಲೂಸ್ ಪೂರ್ವಾಭ್ಯಾಸಕ್ಕಾಗಿ ಶೋನಲ್ಲಿ ಸಾಕಷ್ಟು ಕಸರತ್ತು ನಡೆಸಿದೆ. ಬಾರ್ಸಿಲೋನಾ ಬಿ ಮತ್ತು ವಿಲರಿಯಲ್ ಬಿ ವಿರುದ್ಧ ಸೌಹಾರ್ದ ಪಂದ್ಯಗಳನ್ನಾಡಿರುವ ಬೆಂಗಳೂರು ಎಫ್ಸಿ ಸಾಕಷ್ಟು ಕೌಶಲ ಮತ್ತು ಬಲದೊಂದಿಗೆ ಪ್ರವಾಸ ಮುಗಿಸಿ ಬಂದಿದೆ ಎಂದು ಕ್ವಾಡ್ರಟ್ ನುಡಿದಿದ್ದಾರೆ.

ಸ್ಪೇನ್‌ನಲ್ಲಿ ಕೆಲವು ಸೌಹಾರ್ದ ಪಂದ್ಯಗಳನ್ನಾಡಿದೆವು. ನಮ್ಮ ಹುಡುಗರಿಗೆ ಇದೊಂದು ಉತ್ತಮ ಅನುಭವ ನೀಡಿತು. ಅವರು ಕಠಿಣ ಎದುರಾಳಿಗಳಾಗಿದ್ದರು. ಇದೀಗ ನೂತನ ಲೀಗ್ ಆವೃತ್ತಿಯಲ್ಲಿ ನಮ್ಮ ಕಾರ್ಯತಂತ್ರಗಳನ್ನು ಬಳಕೆ ಮಾಡಲು ಸೂಕ್ತ ಸಮಯ ಬಂದಿದೆ, ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.

ಸ್ನೇಹ ಪರತೆಯಲ್ಲಿ ಅನುಭವಿ ಸೆಂಟರ್ ಬ್ಯಾಕ್ ಆಲ್ಬರ್ಟ್ ಸೆರಾನ್ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಇವರು ಜುವನಾನ್ ಗೋಸ್ಟಲೆಜ್ ಜತೆ ಪಾಲುದಾರನಾಗುವ ನಿರೀಕ್ಷೆಯಿದೆ. ರಕ್ಷಣೆಯಲ್ಲಿ ಮತ್ತಷ್ಟು ಸ್ಥಿರತೆ ಮೂಡಬೇಕಿದೆ. ಧಾನವಾಗಿ ಇದು ನಡೆಯಲಿದ್ದು , ತಂಡ ಲಯ ಕಂಡುಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಎಎಫ್‌ಸಿ ಕಪ್‌ನಲ್ಲಿ ಪಾಲ್ಗೊಳ್ಳುವ ಕಾರಣ ಸಾಕಷ್ಟು ಮುಂಚಿತವಾಗಿ ಪೂರ್ವಾಭ್ಯಾಸದಲ್ಲಿ ಬಿಎಫ್‌ಸಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ.

ಇತರ ತಂಡಗಳಿಗಿಂತ ನಮ್ಮ ತಂಡ ಮುಂಚಿತವಾಗಿ ಸೇರಿತ್ತು ಎಂಬುದು ನಿಜ. ಆದರೆ ಈ ಪಂದ್ಯ ಪಂದ್ಯದ ದಿನ ನೀಡುವ ಪ್ರದರ್ಶನವನ್ನು ಅವಲಂಭಿಸಿರುತ್ತದೆ. ಮನೆಯಂಗಳದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ನಾವು ಎಂದೂ ಗೆದ್ದಿಲ್ಲ ಎಂಬುದು ತಿಳಿದಿದೆ. ಆದರೆ ಪ್ರತಿ ಪಂದ್ಯವು ತನ್ನದೇ ಆದ ಇತಿಹಾಸ ಹೊಂದಿರುತ್ತದೆ. ಹಾಗೆಯೇ ಭಾನುವಾರದ ಪಂದ್ಯದಲ್ಲಿ ನಾವು ಅದನ್ನು ಬದಲಾಯಿಸಲು ಯತ್ನಿಸಲಿದ್ದೇವೆ, ಎಂದು ಕೋಚ್ ಕ್ವಾಡ್ರಡ್ ತಿಳಿಸಿದ್ದಾರೆ. ಈ ಮಧ್ಯೆ, ಚೆನ್ನೈಯಿನ್ ಎಫ್ಸಿ ಕೋಚ್ ಜಾನ್ ಗ್ರಿಗೋರಿ, ಗಾಯದ ಸಮಸ್ಯೆಯಿಂದಾಗಿ ಮಿಡ್‌ಫೀಲ್ಡರ್ ಧನ್ಸಾಲ್ ಗಣೇಶ್ ಲೀಗ್‌ನ ಮೊದಲ ಹಂತದಿಂದ ಹೊರಬಿದ್ದಿದ್ದಾರೆ.

ಎಲಿ ಸಬಿಯಾ, ಆ್ಯಂಡ್ರಿಯಾ ಒರ್ಲಾಂಡ್ ಮತ್ತು ಕಾರ್ಲೊಸ್ ಸಿಮ್ ಸೇರಿ ನೂತನ ವಿದೇಶಿ ಆಟಗಾರರೊಂದಿಗೆ ಚೆನ್ನೈಯಿನ್ ಋತುವಿನಲ್ಲಿ ಕಣಕ್ಕಿಳಿಯುತ್ತಿದೆ ಎಂದು ತಿಳಿಸಿದ್ದಾರೆ.ಆಸಕ್ತಿದಾಯಕ ವಿಷಯ ಎಂದರೆ ಬೆಂಗಳೂರು ಎಫ್ ಸಿ ಆರಂಭದಲ್ಲಿ ನಿಧಾನಗತಿ ಆಟಕ್ಕೆ ಒತ್ತು ನೀಡಿದರೂ ನಂತರ ಚೇತರಿಕೆ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಒಳಗೊಂಡಿದೆ.

ಪಂದ್ಯ ಭಾನುವಾರ ಸಂಜೆಯ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security