ತವರಿನಾಚೆ ಐದನೇ ಗೆಲುವಿಗೆ ಬ್ಲೂಸ್ ಹುಡುಕಾಟ, ಎದುರಾಳಿ ತಂಡದ ಬಗ್ಗೆ ಎಚ್ಚರಿಕೆ ರವಾನಿಸಿದ ಕೋಚ್ ಕ್ವಾಡ್ರಟ್
ಗುವಾಹಟಿ: ಅಂಕಪಟ್ಟಿಯಲ್ಲಿನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿರುವ ಬೆಂಗಳೂರು ಎಫ್ ಸಿ ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ವಿರುದ್ದ ಕಣಕ್ಕಿಳಿಯುತ್ತಿದೆ.
ಪ್ರಸಕ್ತ ಋತುವಿನಲ್ಲಿ ಆಡಿದ 8 ಪಂದ್ಯಗಳಿಂದ 22 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್ಸಿ ಲೀಗ್ ಇತಿಹಾಸದಲ್ಲೇ ಯಾವುದೇ ಕ್ಲಬ್ ಮಾಡದ ಸಾಧನೆ ಮಾಡಿದ್ದು, ಎಲ್ಲಾ ತಂಡಗಳ ವಿರುದ್ಧ ಪ್ರಭುತ್ವ ಕಾಯ್ದುಕೊಂಡಿದೆ. ಅತ್ತ 9 ಪಂದ್ಯಗಳಿಂದ 18 ಅಂಕ ಹೊಂದಿರುವ ಕೋಚ್ ಎಲ್ಲೊ ಸ್ಟೋರಿಸ್ ಬಳಗ ಐಎಸ್ಎಲ್‌ನಲ್ಲೇ ಅತ್ಯಧಿಕ ಅಂಕ ದಾಖಲಿಸಿದ ಸಾಧನೆ ಮಾಡಲು ಕೇವಲ ಎರಡು ಅಂಕಗಳ ಕೊರತೆ ಎದುರಿಸುತ್ತಿದೆ.
“ಪ್ರಸಕ್ತ ಋತುವಿನಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಉತ್ತಮ ಪ್ರದರ್ಶನ ತೋರಿದೆ. ಅವರ ಈ ಪ್ರದರ್ಶನದ ಹಿಂದೆ ಸಾಕಷ್ಟು ಪರಿಶ್ರಮವಿದೆ ಎಂಬುದನ್ನು ಹೇಳಬಹುದು. ಅವರು ಉತ್ತಮ ಆಟವಾಡುತ್ತಿದ್ದು, ಅವರ ಮನೆಯಂಗಳಕ್ಕೆ ನಾವು ಪ್ರಯಾಣಿಸುತ್ತಿದ್ದೇವೆ. ನಮಗೆ ಇದು ಕಠಿಣ ಪಂದ್ಯಗಳಲ್ಲೊಂದಾಗಿದೆ, ” ಎಂದು ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫ್ರಾನ್ಸ್ ಸ್ಪೆಕರ್ ಬಾರ್ಥೊಲೊಮೆವ್ ಒಗೈಚೆ ದಾಳಿಯ ಬಲದೊಂದಿಗೆ ನಾರ್ತ್‌ಈಸ್ಟ್ ಕಣಕ್ಕಿಳಿಯಲು ಎದುರು ನೋಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 8 ಗೋಲ್ ಗಳಿಸಿರುವ ಒಗ್ಲೆಚೆ ಗೋಲ್‌ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ ರಕ್ಷಣೆಯಲ್ಲೂ ಅವರು ಮಿಂಚಿರುವ ಕಾರಣ ಪಂದ್ಯ ಯಾವು ರೀತಿ ಮುಕ್ತಾಯವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು ತಂಡ ಸಹ ಉರುಗ್ವಯ ಮಿಡ್‌ಫೀಲ್ಡರ್ ಫೆಡೆರಿಕೊ ಗಲೆಗೊ ಅವರ ಲಭ್ಯತೆಗೆ ಹಾತೊರೆಯುತ್ತಿದೆ. ಎತ್ತರದ ಆಟಗಾರರ ಮೇಲೆ ಪರಿಣಾಮ ಬೀರುವ ಫೆಡೆರಿಕೊ ಪ್ರಸಕ್ತ ಸಾಲಿನಲ್ಲಿ ನೆರವು ನೀಡಿದ ಐದು ಗೋಲ್‌ಗಳ ಪೈಕಿ ಎರಡು ಗೋಲ್‌ಗಳು ದಾಖಲಾಗಿವೆ.
ಈ ಮಧ್ಯೆ ಬೆಂಗಳೂರಿಗೆ ಶುಭ ಸುದ್ದಿಯೊಂದಿದೆ. ಸ್ಪೇನ್ ಡಿಫೆಂಡರ್ ಅಲ್ಬರ್ಟ್ ಸೆರಾನ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಕಳೆದ ವಾರ ತವರಿನಂಗಳದಲ್ಲಿ ನಡೆದ ಎಫ್ ಸಿ ಪುಣೆ ಸಿಟಿ ವಿರುದ್ಧ ಪಂದ್ಯದಲ್ಲಿ ಬಿಎಫ್ಸಿಗೆ 2-1ರ ಜಯಕ್ಕೆ ಕಾರಣವಾದರೂ ಗಾಯಕ್ಕೆ ತುತ್ತಾಗಿದ್ದರು. ಮುನ್ನಚ್ಚರಿಕೆಯಿಂದ ನಾವು 19 ಆಟಗಾರರೊಂದಿಗೆ ಪ್ರಯಾಣಿಸಿದ್ದೇವೆ.ಆದರೆ ಅಲ್ಬರ್ಟ್ ರೋಕಾ ಬೆಳಗ್ಗೆ ಉತ್ತಮ ಅಭ್ಯಾಸ ನಡೆಸಿದ್ದಾರೆ, ” ಎಂದು ಕ್ವಾಡ್ರಟ್ ಹೇಳಿದ್ದಾರೆ. ವರ್ಷದಂತ್ಯದವರೆಗೂ ಮಿಕು ತಂಡಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಚೆಂಚೊ ರೈಲ್ಡ್ಶನ್ ಮತ್ತು ಸೆಂಬೊಯಿ ಹಾಕಿಷ್ ಅವರನ್ನು 9 ಆಟಗಾರರ ಪೈಕಿ ಬಳಸಿಕೊಳ್ಳಲು ಕೋಚ್ ಚಿಂತಿಸಿದ್ದಾರೆ. ಆದರೆ ಇವರಿಬ್ಬರು ಋತುವಿನಲ್ಲಿ ಈವರೆಗೂ ಖಾತೆ ತೆರೆದಿಲ್ಲ. “ಮಿಕು ಅವರ ಗುಣಮಟ್ಟದ ಆಟವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಅವರ ಪಾತ್ರಕ್ಕೆ ಆಯ್ಕೆಯಾಗಿ | ಪರಿಗಣಿಸಬಹುದಾಗಿದೆ.ಅವರೆಲ್ಲರೂ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ.
ಋತುವಿನಲ್ಲಿ ನಿಧಾನಗತಿ ಆಟ ಆರಂಭಿಸಿದ ಉದಾಂತ ಸಿಂಗ್ ಇದೀಗ ಬೆಂಗಳೂರು ತಂಡದ ಕೇಂದ್ರ ಬಿಂದುವಾಗುತ್ತಿದ್ದಾರೆ. ಗೋವಾ , ಡೆಲ್ಲಿ ವಿರುದ್ದದ ತಂಡದ ಗೆಲುವಿನಲ್ಲಿ ಉದಾಂತ ಪಾತ್ರ ಅಮೋಘವಾಗಿದೆ. ಕಳೆದ ವಾರ ಬೆಂಗಳೂರು ಎಫ್ಸಿ ಪುಣೆ ವಿರುದ್ಧ ಜಯ ಗಳಿಸಿದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್, ಹಾಟ್ ಸ್ಟಾರ್ ಮತ್ತು ಜಿಯೊ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.