ಐಎಸ್ ಎಲ್ ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಉಭಯ ತಂಡಗಳ ಕಣ್ಣು , ಆತಿಥೇಯರಿಂದ ಕಠಿಣ ಸವಾಲಿನ ನಿರೀಕ್ಷೆ: ಕ್ವಾಡ್ರಟ್
ಕೊಲ್ಕತ್ತಾ: ಕೋಳ್ಕೊತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಬುಧವಾರ ಎಟಿಕೆ ವಿರುದ್ದ ಕಣಕ್ಕಿಳಿಯುತ್ತಿರುವ ಬೆಂಗಳೂರು ಎಫ್ ಸಿ ಒಂದು ವೇಳೆ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಇನ್ನೊಂದು ಪಂದ್ಯದ ಕೊರತೆ ಎದುರಾಗದು ಎಂದು ಬಿಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಅಭಿಪ್ರಾಯಪಟ್ಟಿದ್ದಾರೆ. ಮೊದಲ ಮೂರು ಗೇಮ್‌ಗಳಲ್ಲಿ ಅಜೇಯ ದಾಖಲೆ ಹೊಂದಿರುವ ಬೆಂಗಳೂರು ತಂಡ ಬುಧವಾರದ ಪಂದ್ಯದಲ್ಲಿ ಜಯ ಗಳಿಸಿದರೆ, ಲೀಗ್ ಲೀಡರ್ ಎಫ್ ಸಿ ಗೋವಾ ಜತೆ ಸಮವಾಗಿ ಅಂಕ ಹಂಚಿಕೊಳ್ಳಲಿದೆ.
ಆದರೆ ಈ ಪಂದ್ಯಕ್ಕೂ ಮುನ್ನ ಉತ್ತಮ ಲಯಕ್ಕೆ ಮರಳಿರುವ ಪ್ರಬಲ ಕೋಲ್ಯತಾ ವಿರುದ್ಧ ಮೈದಾನದ ಎಲ್ಲಾ ಭಾಗಗಳಲ್ಲೂ ಚುರಕುತನ ತೋರಬೇಕಿದೆ ಎಂದು ಕ್ವಾಡ್ರಟ್ ತಂಡಕ್ಕೆ ಎಚ್ಚರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಬಿಎಫ್ಸಿ ಮತ್ತು ಎಟಿಕೆ ತಲಾ ಏಳು ಅಂಕ ಸಂಪಾದಿಸಿವೆ. ಹೀಗಾಗಿ ಕಠಿಣ ತಂಡದ ವಿರುದ್ಧ ಕಣಕ್ಕಿಳಿಯುತ್ತಿದ್ದು , ಪಂದ್ಯವನ್ನು ಹೇಗೆ ಕೊನೆಗೊಳಿಸಬೇಕೆಂಬುದು ಆಟಗಾರರ ಮೇಲೆ ನಿಂತಿದೆ,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ವಾಡ್ರಟ್ ಹೇಳಿದ್ದಾರೆ.
ಸ್ಟೀವ್ ಕೊಪ್ಪೆಲ್ ಸಾರಥ್ಯದಲ್ಲಿ ಪಳಗಿರುವ ಎಟಿಕೆ ಋತುವಿನ ಆರಂಭದಲ್ಲಿ ಎರಡು ಸೋಲು ಕಂಡಿದೆ. ತವರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಎಟಿಕೆ ಪರಾಭವಗೊಂಡಿತಾದರೂ ಡೆಲ್ಲಿ ಡೈನಮೋಸ್ ಮತ್ತು ಚೆನ್ನೈಯಿನ್ ಎಫ್ ಸಿ ವಿರುದ್ಧ ಗೆದ್ದು ಲಯ ಕಂಡುಕೊಂಡಿದೆ. ಜತೆಗೆ ಜಮ್ಶೆಡ್‌ಪುರ ಎಫ್ ಸಿ ವಿರುದ್ದ ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದೆ. ಲೀಗ್ ಚಿಕ್ಕದಾಗಿರುವ ಕಾರಣ ವೇಗ ಹೆಚ್ಚಿಸಿಕೊಳ್ಳಲು ಇದು ಮತ್ತಷ್ಟು ಅವಕಾಶ ಕಲ್ಪಿಸುವುದಿಲ್ಲ . ಕೋಳ್ಕೊತಾ ಉತ್ತಮ ಫಲಿತಾಂಶದೊಂದಿಗೆ ಬುಧವಾರದ ಪಂದ್ಯಕ್ಕೆ ಅಣಿಯಾಗಿದೆ. ಅವರು ಕೆಲವು ವಿಚಾರಗಳನ್ನು ಪುನರ್‌ನಿರ್ಮಿಸಲು ಅಂತಾರಾಷ್ಟ್ರೀಯ ವಿರಾಮ ಪಡೆದಿದ್ದು, ಅವರು ವಿಭಿನ್ನ ಫಲಿತಾಂಶ ನೀಡಿರುವ ಬಗ್ಗೆ ನೀವು ವೀಕ್ಷಿಸಬಹುದಾಗಿದೆ,” ಇದೇ ವೇಳೆ ಕೋಚ್ ಹೇಳಿದ್ದಾರೆ.
ಎಟಿಕೆಯಲ್ಲಿರುವ ಐವರು ಆಟಗಾರರು ಈ ಹಿಂದೆ ಬೆಂಗಳೂರು ಬ್ಲೂ ಪರ ಆಡಿದವರಾಗಿದ್ದಾರೆ. ಆದರೆ ಜಾನ್ ಜಾನ್ಸನ್ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಇಂಗ್ಲೆಂಡ್ ಡಿಫೆಂಡರ್ ಬ್ಲೂಸ್ ಜತೆ ಐದು ಆವೃತ್ತಿ ಕಳೆದಿದ್ದಾರೆ. ಇದೀಗ ಸುನಿಲ್ ಛೇಟಿ, ಮಿಕು ಮತ್ತು ಉದಾಂತ ಸಿಂಗ್ ಜತೆ ಮತ್ತೆ ಪುನರ್ಮಿಲನವಾಗುತ್ತಿದ್ದಾರೆ. ಇದೇ ವೇಳೆ ಒಂದು ಜಿಜ್ಞಾಸೆ ಸ್ಪರ್ಧೆ ಇದ್ದೇ ಇರುತ್ತದೆ ಎಂದು ಕಾರ್ಲೊಸ್ ನುಡಿದಿದ್ದಾರೆ.ಬೆಂಗಳೂರು ತಂಡಕ್ಕೆ ಜಾನ್‌ಜಾನ್ಸನ್ ಅವರ ಕೊಡುಗೆಯನ್ನು ಸ್ಮರಿಸಿದ ಕ್ವಾಡ್ರಟ್, ಪಿಚ್‌ನಲ್ಲಿ ಈತ ಪ್ರಮುಖ ಆಟಗಾರ. ಇದೀಗ ಅವರ ಸ್ಥಾನಕ್ಕೆ ಒಪ್ಪಂದ ಮಾಡಿಕೊಂಡಿರುವ ಆಲ್ಬರ್ಟ್ ಸೆರೆನ್, ಜುವಾನಾನ್ ಗೋಸ್ವಲೆಜ್ ಜತೆ ಡಿಫೆನ್ಸ್ನ ಹೃದಯ ಭಾಗವಾಗಿದ್ದಾರೆ. “ಅಗ್ರಮಾನ್ಯ ವೃತ್ತಿಪರ ಆಟಗಾರನಾಗಿರುವ ಆಲ್ಬರ್ಟ್ ನಮ್ಮ ವ್ಯವಸ್ಥೆಗೆ ಅನುಗುಣವಾಗಿ ಫಿಟ್ ಆಗಿದ್ದಾರೆ. ಮೈದಾನದಲ್ಲಿ ನಾಳೆ ಜಾನ್ಸನ್ ಅವರವನ್ನು ಎದುರಾಗಲಿದ್ದೇವೆ,” ಎಂದು ಕ್ವಾಡ್ರಟ್ ತಿಳಿಸಿದ್ದಾರೆ.
ಎಟಿಕೆ ಕೋಚ್ ಕೊಪ್ಪೆಲ್ ಚೆನ್ನೈಯಿನ್ ಎಫ್ ಸಿ ವಿರುದ್ದ ಗೋಲ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ನೈಜರೀಯ ಸ್ಪೆಕರ್ ಕಲು ಉಚೆಯನ್ನು ತಂಡದಲ್ಲಿ ಸೇರ್ಪಡೆಗೊಳಿಸಿದ್ದಾರೆ. ಎಫ್ಸಿ ಗೋವಾ ತಂಡದ ಮಾಜಿ ಆಟಗಾರನಾಗಿರುವ ಕಲು ಪ್ರವಾಸಿ ತಂಡದ ಆತಂಕಕ್ಕೂ ಕಾರಣರಾಗಿದ್ದಾರೆ. ಮ್ಯಾನುಯೆಲ್ ಲಾನ್ಸರೋಟ್ ಎಟಿಕೆ ತಂಡದ ಮತ್ತೊಂದು ಅಸ್ತ್ರವಾಗಿದೆ. ಈ ನಡುವೆ ಬೆಂಗಳೂರು ತಂಡದ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯುತ್ತಿದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್ ಮತ್ತು ಜಿಯೊ ಟಿವಿಯಲ್ಲಿ ನೇರ ಪ್ರಸಾರ ಇರಲಿದೆ.