ಬೆಂಗಳೂರು ಎಫ್ಸಿಗೆ ಎಫ್‌ಸಿ ಗೋವಾ ಸವಾಲು ಅಗ್ರ

ತಂಡಗಳ ಮುಖಾಮುಖಿ ಇಂದು, ಕ್ವಾಡ್ರಟ್, ಲೊಬೆರಾ ಕಾರ್ಯತಂತ್ರಕ್ಕೆ ವೇದಿಕೆ, ಗೋವಾಗೆ ಛತ್ರಿ ಪ್ರಯಾಣ ಸಾಧ್ಯತೆ

ಗೋವಾ: ಕಳೆದ ಬಾರಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಗೋವಾದ ಮಾರ್ಗೊದಲ್ಲಿರುವ ಫಟೋರ್ಡಾ ಕ್ರೀಡಾಂಗಣದಲ್ಲಿ ಗುರುವಾರ ಲೀಗ್ ಲೀಡರ್ ಎಫ್ ಸಿ ಗೋವಾ ಎದುರು ಕಣಕ್ಕಿಳಿಯುವ ಮೂಲಕ ಇಂಡಿಯನ್ ಸೂಪರ್ ಲೀಗ್ 5ನೇ ಆವೃತ್ತಿಯಲ್ಲಿ ಮತ್ತೆ ತನ್ನ ಅಭಿಯಾನ ಪುನರಾರಂಭ ಮಾಡಲಿದೆ.

ಈ ಮೂಲಕ ಕ್ಯಾಟಲಾನ್ ಫುಟ್ಬಾಲ್ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಹಾಗೂ ಎಫ್‌ಸಿ ಗೋವಾ ತಂಡದ ಮುಖ್ಯ ಕೋಚ್ ಸೆರ್ಗಿಯೊ ಲೊಬೆರಾ ಹಾಗೂ ಬಿಎಫ್ ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ನಡುವಿನ ತತ್ವಗಳಿಗೆ ಈ ಪಂದ್ಯ ವೇದಿಕೆಯಾಗಿದೆ. ಲೊಬೆರಾ ಅವರ ಆಟದ ಶೈಲಿ ಆಕ್ರಮಣಕಾರಿ ಪುಟ್ಬಾಲ್ ಆಟವನ್ನು ಹೋಲುತ್ತದೆ. ಹೀಗಾಗಿ ಆತನ ತಂಡ ಸಾಕಷ್ಟು ಗೋಲು ಗಳಿಸಿದೆ. ಆದ್ದರಿಂದ ನಮಗೆ ಇದು ಕಠಿಣ ಪಂದ್ಯ ಎನಿಸಲಿದೆ. ನಾವು ಸಹ ಅವರದೆ ಮನಸ್ಥಿತಿಯನ್ನು ಹೊಂದಿದ್ದೇವೆ. ಇದರರ್ಥ ಪಂದ್ಯ ವೀಕ್ಷಿಸಲು ಹಾಗೂ ಬೆಂಬಲಿಸಲು ಮೈದಾನಕ್ಕಾಗಿಮಿಸುವ ಅಭಿಮಾನಿಗಳಿಗೆ ಉತ್ತಮ ಪಂದ್ಯ ಉಣಬಡಿಸಲಿದ್ದೇವೆ,” ಎಂದು ಕ್ವಾಡ್ರಟ್ ಬುಧವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪಾದದ ನೋವಿನಿಂದ ಕಳೆದ ವಾರ ಅಂತಾರಾಷ್ಟ್ರೀಯ ಸೇವೆಯಿಂದ ಹೊರಗುಳಿದಿದ್ದ ನಾಯಕ ಸುನಿಲ್ ಛೇ, ಇದೀಗ ಚೇತರಿಸಿಕೊಂಡಿದ್ದು , ತಂಡದೊಂದಿಗೆ ಪ್ರಯಾಣಿಸಲು ಸಜ್ಜಾಗಿರುವುದು ಬ್ಲೂಸ್ ತಂಡದ ಆತ್ಮಸ್ಥೆರ್ಯವನ್ನು ವೃದ್ಧಿಸಿದೆ. “ಸುನಿಲ್ ನೋವಿನಿಂದ ಗುಣಮುಖರಾಗಿದ್ದು , ಕಳೆದೆರಡು ದಿನಗಳಿಂದ ನಮ್ಮೊಂದಿಗೆ ಅಭ್ಯಾಸ ನಡೆಸಿದ್ದಾರೆ. ನಾಳಿನ ಪಂದ್ಯಕ್ಕೆ ಆತ ಕಣಕ್ಕಿಳಿಯಲಿದ್ದಾರೆ ಎಂಬ ಧನಾತ್ಮಕ ಅಂಶವನ್ನು ನಾವು ಹೊಂದಿದ್ದೇವೆ ಮತ್ತು ಇದು ನಮಗೆ ನಿಜವಾಗಿಯೂ ಉತ್ತಮ ಸುದ್ದಿಯಾಗಿದೆ,” ಎಂದು ಸ್ಪೇನ್‌ನ ಕ್ವಾಡ್ರಟ್ ಹೇಳಿದ್ದಾರೆ.

ಛತ್ರಿ ಮತ್ತು ನಿಕೋಲಾ ಅವರ ಉಡುಗೊರೆ ಗೋಲಿನ ನೆರವಿನಿಂದ ಬಿಎಫ್ಸಿ ಕೇರಳ ವಿರುದ್ದ ಮೂರು ಅಂಕ ಗಳಿಸಿದೆ. ಇದು ಬ್ಲೂ ಬಳಗದ ತವರಿನಾಚೆಯ ಮೂರನೇ ಪಂದ್ಯವಾಗಿತ್ತು. ಆದರೆ ತವರಿನಾಚೆ ಎಫ್‌ಸಿ ಗೋವಾ ಅತ್ಯಂತ ಬಲಿಷ್ಠ ಸವಾಲಿಗೆದೆ ಎಂದು ಕೋಚ್ ಕ್ವಾಡ್ರಟ್ ನಂಬಿದಿದ್ದಾರೆ. ತನಗಿಂತ ಎರಡು ಹೆಚ್ಚು ಪಂದ್ಯಗಳನ್ನಾಡಿರುವ ಗೋವಾ ವಿರುದ್ಧ ಬಿಎಫ್‌ಸಿ ಗುರುವಾರ ಮೂರು ಅಂಕ ಗಿಟ್ಟಿಸಿದರೆ ಅಂಕಪಟ್ಟಿಯಲ್ಲಿ ಸಮಬಲ ಸಾಧಿಸಲಿದೆ.

ತವರಿನಾಚೆಯ ಪಂದ್ಯಗಳಲ್ಲಿ ಗೆಲ್ಲುವುದು ಎಂದಿಗೂ ಕಠಿಣವಾಗಿರುತ್ತದೆ. ಅದರಲ್ಲೂ ಕೇರಳ, ಕೋಲ್ಕಿತಾ ಮತ್ತು ಪುಣೆಗಳ ವಿರುದ್ಧ ಜಯಿಸುವುದು ಕಠಿಣದಿಂದ ಕೂಡಿರುತ್ತದೆ. ಆದರೆ ಈ ವೇಳಾಪಟ್ಟಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಈ ಪಂದ್ಯದ ಬಳಿಕ ತವರಿಗೆ ಮರಳುತ್ತಿರುವುದು ತಂಡಕ್ಕೆ ಮತ್ತೊಂದು ಸಿಹಿ ಸುದ್ದಿಯಾಗಿದೆ. ಹೀಗಾಗಿ ಗೋವಾದಲ್ಲಿ ಮೂರು ಅಂಕ ಗಳಿಸಿ ತವರಿಗೆ ಹಿಂತಿರಗಲು ಎದುರು ನೋಡುತ್ತಿದ್ದೇವೆ,” ಎಂದು ಕಾರ್ಲೊಸ್ ಹೇಳಿದ್ದಾರೆ.

ಕಳೆದ ವಾರವಷ್ಟೇ ಎಫ್‌ಸಿ ಗೋವಾ ತಂಡದೊಂದಿಗೆ ಒಂದು ವರ್ಷ ಒಪ್ಪಂದ ವಿಸ್ತರಿಸಿರುವ ಲೊಬೆರಾ ಸಾರಥ್ಯದ ಗೋವಾ, ಜಮ್ಶೆಡ್‌ಪುರ ಎಫ್ ಸಿ ವಿರುದ್ದ 1-4ರಲ್ಲಿ ಸೋತ ಬಳಿಕ ಡೆಲ್ಲಿ ಡೈನಮೋಸ್ ಮತ್ತು ಕೇರಳ ಬ್ಲಾಸ್ಟರ್ಸ್ ವಿರುದ್ಧ ಸತತ ಎರಡು ಜಯ ದಾಖಲಿಸಿದೆ. ಘಟೋರ್ಡಾದಲ್ಲಿ ಮೂರು ಪಂದ್ಯಗಳಿಂದ 12 ಗೋಲು ದಾಖಲಿಸಿರುವ ಗೋವಾ ತಂಡ, ಬೆಂಗಳೂರು ವಿರುದ್ಧವು ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದು , ತಂಡದ ಪರ ಫೆರಾನ್ ಕೊರೊಮಿನಾಸ್ ಅತ್ಯಧಿಕ ಗೋಲು ದಾಖಲಿಸಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್, ಜಿಯೋ ಟಿವಿ ಮತ್ತು ಕಲ್ಲರ್ಸ್ ಕನ್ನಡ ಸಿನಿಮಾದಲ್ಲೂ ನೇರ ಪ್ರಸಾರ ವಾಗಲಿದೆ.

Malcare WordPress Security