ಕಂಠೀರವದಲ್ಲಿ ಆತಿಥೇಯ ಬೆಂಗಳೂರಿಗೆ ಮುಂಬೈ ಸವಾಲು

ಎರಡನೇ ಹಂತಕ್ಕೇರುವ ವಿಶ್ವಾಸದಲ್ಲಿರುವ ಬೆಂಗಳೂರು ಎಫ್ ಸಿಗೆ ಮುಂಬೈ ಸಿಟಿ ಎಫ್ಸಿ ಪೈಪೋಟಿ ಇಂದು

ಬೆಂಗಳೂರು: ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಪ್ರವಾಸಿ ಮುಂಬೈ ಸಿಟಿ ಎಫ್ ಸಿ ವಿರುದ್ದ ಲೀಗ್‌ನಲ್ಲಿ ಹತ್ತನೇ ಪಂದ್ಯಕ್ಕೆ ಸಜ್ಜುಗೊಂಡಿರುವ ಬೆಂಗಳೂರು ಎಫ್ ಸಿ ತನ್ನ ಅಜೇಯ ನಾಗಾಲೋಟವನ್ನು ಕಾಯ್ದುಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಪಂದ್ಯದ ಹೆಚ್ಚುವರಿಯ ಸಮಯದಲ್ಲಿ ಚೆಂಚೊ ಗ್ಯಾಲ್ಶೆನ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಗುವಾಹಟಿಯಲ್ಲಿ ಒಂದು ಅಂಕ ಗಿಟ್ಟಿಸಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ, ಉತ್ತಮ ಪ್ರದರ್ಶನದೊಂದಿಗೆ ಲೀಗ್‌ನಲ್ಲಿ ದ್ವಿತೀಯ ಹಂತ ಆರಂಭಿಸಲು ಎದುರು ನೋಡುತ್ತಿದೆ.

ಪ್ರತಿ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ನಮ್ಮ ಆಟಗಾರರು ಮತ್ತು ಸಿಬ್ಬಂದಿಯ ನಿಜವಾದ ಕಠಿಣ ಪರಿಶ್ರಮದಿಂದ ನಾವು ಇಲ್ಲಿಯವರೆಗೂ ಬಂದಿದ್ದೇವೆ. ಫುಟ್ಬಾಲ್ ಎಂಬುದು ಎಂದಿಗೂ ಸುಧಾರಣೆ ಮಾಡಿಕೊಳ್ಳುವ ಕ್ಷೇತ್ರವಾಗಿರುತ್ತದೆ. ಹೀಗಾಗಿ ದೈಹಿಕ ಮತ್ತು ರಕ್ಷಣಾತ್ಮಕವಾಗಿ ಎದುರಾಳಿ ತಂಡಗಳ ವಿರುದ್ಧ ದಾಳಿ ಮಾಡಲು ನಾವು ಕಾರ್ಯಪ್ರವೃತ್ತರಾಗಿತ್ತವೆ, ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ವಾಡ್ರಟ್ ಹೇಳಿದ್ದಾರೆ.

ಕ್ಲಬ್ ಇತಿಹಾಸದಲ್ಲೇ ಸುದೀರ್ಘವಾದ ಆರು ಪಂದ್ಯಗಳ ಸತತ ಗೆಲುವು ದಾಖಲಿಸಿರುವ ಮುಂಬೈ ಸಿಟಿ ಎಫ್ ಸಿ, ಆತಿಥೇಯರ ನೆಲದಲ್ಲಿ ಭಾನುವಾರ ಗೆಲುವಿನ ಲಯ ಮುಂದುವರಿಸಲು ಹಾತೊರೆಯುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಎಫ್ಸಿ ಗೋವಾ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದ.

ಜೋರ್ಗ್ ಕೋಸ್ಟಾ ನೇತೃತ್ವದ ಮುಂಬೈ ತಂಡ, ಕಳೆದ ಗುರುವಾರ ಹಾಲಿ ಚಾಂಪಿಯನ್ ಎಫ್‌ಸಿ ಗೋವಾ ವಿರುದ್ಧ 2-0 ಅಂತರದ ಗೆಲುವಿನೊಂದಿಗೆ ಐದು ಪಂದ್ಯಗಳಿಂದ ಗರಿಷ್ಠ ಪಾಯಿಂಟ್ಸ್ ಗಿಟ್ಟಿಸಿದೆ. ಜತೆಗೆ ಅಗ್ರಸ್ಥಾನದಲ್ಲಿರುವ ಬ್ಲೂಸ್‌ನಿಂದ ಕೇವಲ ಮೂರು ಅಂಕಗಳ ಅಂತರದಲ್ಲಿದೆ.

ಕ್ವಾಡ್ರಟ್ ಬಳಗಕ್ಕಿಂತ ಮುಂಬೈ ಒಂದು ಪಂದ್ಯ ಹೆಚ್ಚಿಗೆ ಆಡಿದೆ. ದ್ವಿತೀಯ ಸ್ಥಾನಿಗಳನ್ನು ಎದುರಿಸುವುದು ನಿಜವಾಗಿಯೂ ಸವಾಲಿನಿಂದ ಕೂಡಿರುತ್ತದೆ. ಆದರೆ ನಾವು ಮುಂದುವರಿಯಲು ಎದುರು ನೋಡುತ್ತಿದ್ದೇವೆ. ಪ್ರತಿತಂಡವೂ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತವೆ. ಎಲ್ಲರೂ ತವರಿನಲ್ಲಿ ಇನ್ನೆರಡು ಪಂದ್ಯಗಳಲ್ಲಿ ರ್ಸ್ಪಸಲಿದ್ದು , ಪ್ಲೇ ಆಫ್ ಹಂತವನ್ನು ಎದುರು ನೋಡುತ್ತಿವೆ, ಸ್ಪೇನ್ ಕೋಚ್ ಹೇಳಿದ್ದಾರೆ.

ಭಾನುವಾರದ ಪಂದ್ಯ ಬೆಂಗಳೂರು ಎಫ್ ಸಿಯ ಮಾಜಿ ಆಟಗಾರರಾದ ಅಮ್ಮಿಂದರ್ ಸಿಂಗ್, ಸುಭಾಶಿಸ್‌ ಬೋಸ್ ಮತ್ತು ಜೋಯ್ಸರ್ ಲೌರೆನ್ನೊ ಅವರ ಆಟಕ್ಕೂ ಸಾಕ್ಷಿಯಾಗಲಿದೆ. ಏಕೆಂದರೆ ಕಳೆದ ಋತುವಿನ ಅಂತ್ಯದಲ್ಲಿ ಇವರೆಲ್ಲರೂ ಮುಂಬೈ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಮುಂಬೈನಿಂದ ನಾಯಕ ಸುನಿಲ್ ಛತ್ರಿ, ಬೈಥಾಂಗ್ ಹಾಕಿಪ್ ಮತ್ತು ಉದಾಂತ ಸಿಂಗ್ ಅವರನ್ನು ಆತಿಥೇಯ ಬಿಎಫ್ಸಿ ಎರವಲು ಪಡೆದಿದೆ.

ಕಳೆದ ಬುಧವಾರ ಗುವಾಹಟಿಯಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ವಿಭಿನ್ನವಾಗಿ ಕಣಕ್ಕಿಳಿದಿದ್ದ ಬೆಂಗಳೂರು ಎಫ್ಸಿ ಸುನಿಲ್ ಛತ್ರಿ ಅವರ ಏಕೈಕ ಕರ್‌ನೊಂದಿಗೆ 4-1-4-1ಸಂಯೋಜನೆಯಲ್ಲಿ ಕಣಕ್ಕಿದಿತ್ತು. ಇದೀಗ ದೈಹಿಕವಾಗಿ ಬಲವಾಗಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧ ಕ್ವಾಡ್ರಟ್ ಹೇಗೆ ಸಂಯೋಜನೆ ಮಾಡಲಿದ್ದಾರೆ ಎಂಬುದು ಕುತೂಹಲವಾಗಿದೆ.

ಮೊದೌ ಸೌಗೌ ಮತ್ತು ರಾಫೀಲ್ ಬಾಕ್ಟೋಸ್ ಅವರ ಅವಳಿ ಮಾರ್ಗದರ್ಶನದಲ್ಲಿ ಮುಂಬೈ ಕೋಚ್ ಜೋರ್ಗ್ ಕೋಸ್ಟಾ ಬಳಗ ದಾಳಿಗೆ ಸಜ್ಜುಗೊಂಡಿದೆ. ಇವರಿಬ್ಬರು ಈ ಬಾರಿ ಮುಂಬೈ ಪರ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್‌ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ ಸ್ಟಾರ್, ಕಲ್ಲರ್ಸ್ ಕನ್ನಡ ಸಿನೆಮಾ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security