ಬೆಂಗಳೂರು ಎಫ್ ಸಿಗೆ ಗೆಲುವಿನೊಂದಿಗೆ ವರ್ಷಾಂತ್ಯಗೊಳಿಸುವ ವಿಶ್ವಾಸ

ಲೀಗ್‌ನ ವರ್ಷಾಂತ್ಯದಲ್ಲಿ ಬ್ಲೂಸ್ ಮನೆಯಂಗಳಕ್ಕಿಳಿಯಲಿರುವ ಸ್ಟೀವ್ ಕೋಪೆಲ್ ಬಳಗ

ಬೆಂಗಳೂರು: ಪ್ರಸಕ್ತ ಇಂಡಿಯನ್ ಸೂಪರ್ ಲೀಗ್‌ನ ಮೊದಲ ಹಂತದ ಡ್ರಾದ 2018ರ ಅಂತಿಮ ಪಂದ್ಯಕ್ಕೆ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬೆಂಗಳೂರು ಎಫ್ಸಿ ಪ್ರವಾಸಿ ಅಥ್ಲೆಟಿಕೊ ಡಿ’ ಕೋಲ್ಕಿತಾ ತಂಡಕ್ಕೆ ಆತಿಥ್ಯ ನೀಡಿದೆ. ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಕೊನೆಯದಾಗಿ ಎದುರಾಗುವ ಮೂಲಕ ಪ್ರಸಕ್ತ ವರ್ಷದಲ್ಲಿ ತಮ್ಮ ಅಭಿಯಾನ ಪೂರ್ಣಗೊಳಿಸಲಿವೆ.

ಸ್ಟೀವ್ ಕೋಪೆಲ್ ಬಳಗದ ವಿರುದ್ದ ಗುರುವಾರ ಕಣಕ್ಕಿಳಿಯಲಿರುವ ಬ್ಲೂಸ್ ಮೂರು ಅಂಕ ಕಲೆಹಾಕುವ ವಿಶ್ವಾಸದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಳ್ಳುವ ಗುರಿ ಹೊಂದಿದೆ. ಸದ್ಯ ಎಟಿಕೆ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು , ಪ್ಲೇ ಆಫ್ ಪ್ರವೇಶಿಸಲು ಈ ಪಂದ್ಯವನ್ನು ಪರಿಗಣಿಸುವ ನಿರೀಕ್ಷೆಯಿದೆ ಎಂದು ಕ್ವಾಡ್ರಟ್ ಭಾವಿಸಿದ್ದಾರೆ. “ಎಟಿಕೆ ಉತ್ತಮ ತಂಡವಾಗಿದ್ದು , ಗುರುವಾರದ ಪಂದ್ಯ ಕಠಿಣದಿಂದ ಕೂಡಿರುವ ಸಾಧ್ಯತೆಯಿದೆ. ಪ್ಲೇ ಆಫ್‌ಗೆ ಅವರು ಬಯಿಸಿದ್ದು, ನಮ್ಮ ವಿರುದ್ಧ ಗೆಲುವಿನ ಅಗತ್ಯತೆ ಅವರ ಮೊದಲ ಆದ್ಯತೆಯಾಗಿದೆ. ರಕ್ಷಣೆ ಜತೆಗೆ ದಾಳಿಯಲ್ಲಿ ಎಂದಿಗೂ ಲ್ಯಾನೊರೊಟೆ ಭಯ ಹುಟ್ಟಿಸಿದ್ದಾರೆ, ” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾರ್ಲೊಸ್ ನುಡಿದಿದ್ದಾರೆ.

ಋತು ಆರಂಭವಾದಗಿನಿಂದ ಎಟಿಕೆ ತಂಡವನ್ನು ಪ್ರತಿನಿಧಿಸುತ್ತಿರುವ ಡಿಫೆಂಡರ್ ಜಾನ್ ಜಾನ್ಸನ್ ಮೊದಲ ಬಾರಿ ಮಾಜಿ ತಂಡ ಬಿಎಫ್ಸಿ ಅಂಗಳದಲ್ಲಿ ಆಡುತ್ತಿರುವುದಕ್ಕೆ ಈ ಪಂದ್ಯ ಸಾಕ್ಷಿಯಾಗಲಿದೆ. ಕಳೆದ ಐದು ವರ್ಷಗಳ ಕಾಲ ಬೆಂಗಳೂರು ಎಫ್ ಸಿಯನ್ನು ಪ್ರತಿನಿಧಿಸಿದ್ದ ಇಂಗ್ಲೆಂಡ್ ಆಟಗಾರ, ಗುರುವಾರ ರಾತ್ರಿ ಎಟಿಕೆ ಗೆಲುವಿಗೆ ಯಾವ ರೀತಿ ನೆರವಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಮಧ್ಯೆ, ರಕ್ಷಣೆಯಲ್ಲಿ ಯಾವುದೇ ಆತಂಕವಿಲ್ಲ . ಸ್ಟೀವ್ ಕೋಪೆಲ್ ಸಾರಥ್ಯದ ಎಟಿಕೆ ಈ ಬಾರಿ ಗೋಲ್‌ಗಳಿಸಲು ಹೆಣಗುತ್ತಿದೆ. ಜತೆಗೆ ಕಲು ಉಚೆ ಇಲ್ಲದಿರುವುದು ಆ ತಂಡವನ್ನು ಕಾಡುತ್ತಿದೆ. ಪುಣೆಯಿಂದ ಉರುಗೈ ಆಟಗಾರ ಎಮಿಲಿಯಾನೊ ಅಲ್ಪಾರೊ ಅವರನ್ನು ಎರವಲುವಾಗಿ ಪಡೆದರೂ ಅವರು ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾ ಸೈಕರ್ ಎಲಿ ಬಾಬಾಲ್ಟಿ ಅವರನ್ನು ಕೈಬಿಡಲಾಗಿದೆ. ಕಳೆದ ಐದು ಪಂದ್ಯಗಳಲ್ಲಿ ಎಟಿಕೆ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರುವುದು ಅವರ ರಕ್ಷಣಾ ನ್ಯೂನತೆಗೆ ಕಾರಣವಾಗಿದೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ.

ಆದರೆ ಗೋಲ್ ಗಳಿಸಲು ಅವರು ಹೆಣಗುತ್ತಿದ್ದಾರೆ. ಹಾಗೆಯೇ ಎಟಿಕೆ ಸುಲಭವಾಗಿ ಎದುರಾಳಿ ತಂಡಗಳ ಸ್ಪೆಕರ್‌ಗಳಿಗೆ ಗೋಲ್ ಗಳಿಸಲು ಅವಕಾಶ ನೀಡುವುದಿಲ್ಲ ಎಂದಿರುವ ಕಾರ್ಲೊಸ್, ಬಿಎಫ್ಸಿ ಮನೆಯಂಗಳ ಕಂಠೀರವದಲ್ಲಿ 1-2ರಿಂದ ಸೋತ ನಂತರ ಎಟಿಕೆ ಆಡಿದ ಐದು ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿದೆ. ಈ ಪೈಕಿ ನಾಲ್ಕರಲ್ಲಿ ಬಿಎಫ್‌ಸಿ ತಂಡದ ಮಾಜಿ ಗೋಲ್‌ಕೀಪರ್ ಅರಿಂದಮ್ ಭಟ್ಟಾಚಾರ್ಯ ಅವರ ಡಿಫೆನ್ಸ್ ಅದ್ಭುತವಾಗಿದೆ. ಮಿಕು ಅವರ ಅಲಭ್ಯ ಬಿಎಫ್ಸಿಗೆ ಖಂಡಿತವಾಗಿಯೂ ಕಾಡಲಿದೆ. ಆದಾಗ್ಯೂ ಇತರ ಆಟಗಾರರು ಅವರ ಸ್ಥಾನ ತುಂಬುವ ವಿಶ್ವಾಸವಿದೆ, ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಲೀಗ್‌ನ ಇದೇ ಸಮಯದಲ್ಲಿ ಕಳೆದ ವರ್ಷ ನಾವು 18 ಪಾಯಿಂಟ್ಸ್ ಹೊಂದಿದ್ದವು. ಆದರೀಗ 24 ಅಂಕ ಗಳಿಸಿದ್ದೇವೆ. ನಮ್ಮ ಆಟಗಾರರ ಪ್ರದರ್ಶನ ನನಗೆ ತುಂಬ ಸಂತಸ ತಂದಿದೆ. ಮಿಕು ಗುಣಮುಖರಾಗಲು ನಾವು ಇನ್ನಷ್ಟು ಸಮಯವಾಕಾಶ ನೀಡಬೇಕಾಗಿದ್ದು, ಅವರನ್ನು ಎದುರು ನೋಡುತ್ತಿದ್ದೇವೆ, ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.

ಕಳೆದ ಭಾನುವಾರ ಮುಂಬಯಿ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಹಳದಿ ಕಾರ್ಡ್‌ಗೆ ಗುರಿಯಾದ ಮಿಡ್ ಫೀಲ್ಡರ್ ಹರ್ಮನ್‌ಜ್ಯೋತ್ ಖಾಬ್ರಾ ಒಂದು ಪಂದ್ಯ ಅಮಾನತಿನಿಂದಾಗಿ ಬ್ಲೂಸ್ ಗುರುವಾರ ಪಂದ್ಯಕ್ಕೆ ಅವರ ಸೇವೆಯನ್ನು ಕಳೆದುಕೊಂಡಿದೆ. ಹೀಗಾಗಿ ಕ್ಸಿಸ್ಕೊ ಅವರನ್ನು ಅಗತ್ಯಕ್ಕನುಗುಣವಾಗಿ ಬಳಸಿಕೊಳ್ಳಲು ಕ್ವಾಡ್ರಟ್ ಎದುರು ನೋಡುತ್ತಿದ್ದಾರೆ. ಎಟಿಕೆ ವಿರುದ್ಧದ ಗುರುವಾರದ ಪಂದ್ಯದ ಬೆಂಗಳೂರು ಎಫ್ಸಿಗೆ ಮೂರನೇ ಪಂದ್ಯವಾಗಿದ್ದು , ಕ್ವಾಡ್ರಟ್ ಅಜೇಯ ದಾಖಲೆ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಹಾಸ್‌ ಸ್ಟಾರ್‌, ಜಿಯೋ ಟಿವಿ ಮತ್ತು ಕಲ್ಲರ್ಸ್ ಕನ್ನಡ ಸಿನೆಮಾದಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security