ಕಳೆದ ಬಾರಿಯ ೈನಲ್ ಸೋಲಿಗೆ ಸೇಡು ತೀರಿಸಿಕೊಂಡ ಛೇತ್ರಿ ಪಡೆ ಆತಿಥೇಯ ತಂಡಕ್ಕೆ 1-0 ಅಂತರದ ಜಯ
ಬೆಂಗಳೂರು – ಸ್ಟಾರ್ ಸ್ಟ್ರೈಕರ್ ಮಿಕು ದಾಖಲಿಸಿದ ಏಕೈಕ ಗೋಲಿನಿಂದ ಕಳೆದ ಬಾರಿಯ ರನ್ನರ್ ಅ್ ಬೆಂಗಳೂರು ಎ್ಸಿ ಇಂಡಿಯನ್ ಸೂಪರ್ ಲೀಗ್ 5ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎ್ಸಿ ತಂಡವನ್ನು ಬಗ್ಗು ಬಡಿದು ಶುಭಾರಂಭ ಮಾಡಿದೆ.
ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಡರ್ಬಿಯ ಹೈವೋಲ್ಟೇಜ್ ಪಂದ್ಯದಲ್ಲಿ ಸುನಿಲ್ ಛೆಟ್ರಿ ಸಾರಥ್ಯದ ಬ್ಲೂಸ್ 1-0 ಗೋಲಿನ ಅಂತರದಲ್ಲಿ ಪ್ರವಾಸಿ ಚೆನ್ನೈ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಮನೆಯಂಗಳದಲ್ಲಿ ಕಳೆದ ಆವೃತ್ತಿಯ ೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡ ಬಿಎ್ಸಿ, ಮುಖಾಮುಖಿ ದಾಖಲೆಯನ್ನು 2-2ರಲ್ಲಿ ಸಮಬಲಗೊಳಿಸಿತು.
ಆತಿಥೇಯ ತಂಡ ಮೂರು ಅಂಕ ಕಲೆಹಾಕುವಲ್ಲಿ ನಿರ್ಣಾಯಕ ಪಾತ್ರವಹಿಸಿದ ವೆನೆಜುವೆಲಾ ಆಟಗಾರ ಮಿಕು (41ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು. ಇದು ಲೀಗ್‌ನಲ್ಲಿ ಮಿಕು ಅವರ 16ನೇ ಗೋಲು. ದ್ವಿತೀಯಾರ್ಧದಲ್ಲಿ ಇತ್ತಂಡಗಳು ಹಲವು ಬಾರಿ ಗೋಲು ಗಳಿಕೆಯ ಅವಕಾಶ ಸೃಷ್ಟಿಸಿದರೂ ಲಾಭ ಪಡೆಯುವಲ್ಲಿ ವಿಲಗೊಂಡವು.
ಋತುವಿನ ಮೊದಲ ಗೋಲು ಸಿಡಿಸಿದ ಮಿಕು
ಸುಮಾರು 20 ಸಾವಿರಕ್ಕೂ ಅಕ ಪ್ರೇಕ್ಷಕರೆದರೂ ಮಿಂಚಿನ ಆಟ ಪ್ರದರ್ಶಿಸಿದ ವೆನೆಜುವೆಲಾ ಮುನ್ಪಡೆ ಆಟಗಾರ ಮಿಕು ವಿರಾಮಕ್ಕೂ ಮುನ್ನ ಆಕರ್ಷಕ ಗೋಲ್ ಸಿಡಿಸಿ ಆತಿಥೇಯ ಬಿಎ್ಸಿ ಪಾಳಯದ ಸಂಭ್ರಮಕ್ಕೆ ಕಾರಣರಾದರು.
41ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮಿಕು, ಬ್ಲೂಸ್‌ಗೆ ಪ್ರಸಕ್ತ ಸಾಲಿನಲ್ಲಿ ಮೊದಲ ಗೋಲು ತಂದುಕೊಟ್ಟರು. ನಂತರ ಹಾಲಿ ಚಾಂಪಿಯನ್ ಚೆನ್ನೈಯಿನ್ ಎ್ಸಿ ಹಿನ್ನಡೆ ತಗ್ಗಿಸುವ ಹೋರಾಟ ಲ ನೀಡಲಿಲ್ಲಘಿ. ಹೀಗಾಗಿ ಮೊದಲಾರ್ಧಕ್ಕೆ ಬೆಂಗಳೂರು ಎ್ಸಿ 1-0 ಅಂತರದಲ್ಲಿ ಮೇಲುಗೈ ಕಾಯ್ದುಕೊಂಡಿತು.
ಉಭಯ ತಂಡಗಳ ಜಿದ್ದಾಜಿದ್ದಿನ ಹೋರಾಟ 35ನೇ ನಿಮಿಷದಲ್ಲಿ ಇನ್ನಷ್ಟು ತೀವ್ರಗೊಂಡಿತು. ಎದುರಾಳಿ ತಂಡದ ಜೆಜೆ ಲಾಲ್ ೆಖ್ಲುವಾ ಅವರನ್ನು ಕೆಳಗೆ ಬೀಳಿಸಿದ ಪರಿಣಾಮ ಹರ್ಮನ್‌ಜ್ಯೋತ್ ಸಿಂಗ್ ಖಾಬ್ರಾ ರೆರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಬಳಿಕ 39ನೇ ನಿಮಿಷದಲ್ಲಿ ಕೋಚ್ ಜಾನ್ ಗ್ರೆಗೋರಿ ಪಡೆ ಯತ್ನಿಸಿದ ಗೋಲಿನ ಯತ್ನವನ್ನು ಗುರ್‌ಪ್ರೀತ್ ಸಿಂಗ್ ಸಂಧು ಅದ್ಭುತವಾಗಿ ರಕ್ಷಣೆ ಮಾಡಿ ಎಲ್ಲರ ಗಮನ ಸೆಳೆದರು.
19ನೇ ನಿಮಿಷದಲ್ಲಿ ಲಾಲ್‌ೆಖ್ಲುವಾ ಯತ್ನಿಸಿದ ಸುಲಭ ಗೋಲಿನ ಯತ್ನವನ್ನು ಬಿಎ್ಸಿ ಗೋಲ್ ಕೀಪರ್ ದಿಟ್ಟ ರಕ್ಷಣೆ ಮಾಡುವುದರೊಂದಿಗೆ ಪ್ರವಾಸಿ ತಂಡದ ಮುನ್ನಡೆಗೆ ತಡೆಯೊಡ್ಡಿದರು. ಇದಕ್ಕೂ ಮುನ್ನ ಸ್ಟಾರ್ ಾರ್ವರ್ಡ್ ಆಟಗಾರ ಉದಾಂತ ಸಿಂಗ್ ಮತ್ತು ಮಿಕು ನಡೆಸಿದ ಗೋಲಿನ ಯತ್ನ ಆತಿಥೇಯ ತಂಡಕ್ಕೆ ಯಶಸ್ಸು ತಂದುಕೊಡಲಿಲ್ಲಘಿ.
ದಕ್ಷಿಣ ಭಾರತದ ಪ್ರಬಲ ತಂಡಗಳಾದ ಬೆಂಗಳೂರು ಎ್ಸಿ ಮತ್ತು ಚೆನ್ನೈಯಿನ್ ಎ್ಸಿ ಶುಭಾರಂಭದ ನಿರೀಕ್ಷೆಯಲ್ಲಿ ಕಣಕ್ಕಿಳಿದವು. ಮನೆಯಂಗಳದಲ್ಲಿ ಮೂರನೇ ಬಾರಿಗೆ ಪ್ರವಾಸಿ ಚೆನ್ನೈಯಿನ್ ಎ್ಸಿಗೆ ಆತಿಥ್ಯ ವಹಿಸಿದ ಛೆಟ್ರಿ ಬಳಗ ಹಿಂದಿನ ಎರಡು ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯೊಂದಿಗೆ ಅಭಿಯಾನ ಆರಂಭಿಸಿತು.
ಬೆಂಗಳೂರು ಎ್ಸಿ ಅಕ್ಟೋಬರ್ 7ರಂದು ತವರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲೇ ಜೆಮ್‌ಶೆಡ್‌ಪುರ ಎ್ಸಿ ತಂಡವನ್ನು ಎದುರಿಸಲಿದೆ.