ನಾರ್ತ್‌ಈಸ್ಟ್ ಎದುರಿನ ತಾಂತ್ರಿಕ ಹೋರಾಟಕ್ಕೆ ಆತಿಥೇಯ ಬಿಎಫ್ಸಿ ಸಜ್ಜು

ಕಾರ್ಲಸ್ ಕ್ವಾಡ್ರಟ್ ಪಡೆಗೆ ಅಡ್ಡಿಯಾಗದ ಋತುವಿನ ಮೊದಲ ಸೋಲು, ಮಿಕು, ನಿಶು ಚೇತರಿಕೆ ಮುಂದುವರಿಕೆ

ಬೆಂಗಳೂರು: ಋತುವಿನಲ್ಲಿ ಮೊದಲ ಸೋಲು ಅನುಭವಿಸಿದ ಹೊರತಾಗಿಯೂ ಬೆಂಗಳೂರು ಎಫ್ಸಿ ಬುಧವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯ ಮೂರನೇ ಸ್ಥಾನಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ತಂಡದ ಸವಾಲು ಎದುರಿಸಲಿದೆ. ಈ ಮೂಲಕ ಮತ್ತೆ ಲಯಕ್ಕೆ ಮರಳುವ ಇರಾದೆ ಹೊಂದಿದೆ.

ಕಳೆದ ಭಾನುವಾರ ಮುಂಬೈ ಸಿಟಿ ಎಫ್ ಸಿ ವಿರುದ್ದ ಕೋಚ್ ಕ್ವಾಡ್ರಟ್ ಬಳಗ 1-0 ಅಂತರದಲ್ಲಿ ಸೋಲನುಭವಿಸಿದೆ. ಆದರೆ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೋಲಿನಿಂದ ಹೊರಬರುವ ಹಾಗೂ ಪುಟಿದೇಳುವ ಕುರಿತು ತಂಡದಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. “ಮುಂಬೈನಲ್ಲಿ ರಾತ್ರಿ ಯೋಜಿತ ಕಾರ್ಯತಂತ್ರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿಲ್ಲ .ಆದರೆ ಬುಧವಾರದ ಪಂದ್ಯದ ಮೇಲೆ ನಮ್ಮೆಲ್ಲರ ಗಮನ ಹರಿದಿದೆ. ನಾರ್ತ್‌ಈಸ್ಟ್ ಯುನೈಡೆಟ್ ಋತುವಿನಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ. ಈ ಸಾಲಿನಲ್ಲಿ ವಿರಾಮಕ್ಕೆ ತೆರಳುವ ಮುನ್ನ ಗುವಾಹಟಿಯಲ್ಲಿ ನಾರ್ತ್‌ಈಸ್ಟ್ ವಿರುದ್ಧ ಕಠಿಣ ಹೋರಾಟ ನಡೆಸಿದ್ದೇವೆ. ಹೀಗಾಗಿ ಪಂದ್ಯದ ಕೊನೆಯವರೆಗೂ ರಕ್ಷಣಾ ಪಡೆಯನ್ನು ಬಿಗಿಗೊಳಿಸುವ ಅಗತ್ಯವಿದೆ,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಿಎಫ್ಸಿ ಕೋಚ್ ಕಾರ್ಲಸ್ ಹೇಳಿದ್ದಾರೆ.

ಕಳೆದ ಪಂದ್ಯದ ಕೊನೇ ಕ್ಷಣದಲ್ಲಿ ನಾರ್ತ್‌ಈಸ್ಟ್‌ ಪರ ಗೋಲ್ ದಾಖಲಿಸಿದ ಬಾರ್ಥೊಲೊಮೆವ್ ಒಗೈಚೆ, ಚೆನ್ನೈಯಿನ್ ಎಫ್ಸಿ ವಿರುದ್ಧದ ಗೆಲುವಿನ ರೂವಾರಿಯಾದರಲ್ಲದೆ, ಟೂರ್ನಿಯಲ್ಲಿ 10 ಗೋಲ್ ಗಳಿಸಿದ್ದು , ಅತ್ಯಧಿಕ ಗೋಲ್ ಗಳಿಸಿದ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರ ಸಹಾಸದಿಂದ ನಾರ್ತ್‌ಈಸ್ಟ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಗೋಲ್ ಗಳಿಸದಿರುವ ಬಗ್ಗೆ ಬೆಂಗಳೂರು ಎಫ್ ಸಿ ಆತಂಕಗೊಂಡಿದ್ದಿಯೇ ಎಂಬುದರ ಕುರಿತು ಪ್ರತಿಕ್ರಿಯಿಸಿದ ಕ್ವಾಡ್ರಟ್, “ಮಿಕು ಪಾಲ್ಗೊಂಡ ಐದು ಪಂದ್ಯಗಳಲ್ಲಿ ನಾವು ಹತ್ತು ಗೋಲ್ ದಾಖಲಿಸಿದ್ದೇವೆ. ಹಾಗೆಯೇ ಇತರ ಏಳು ಪಂದ್ಯಗಳಲ್ಲಿ ಅವರು ಪಾಲ್ಗೊಂಡಿಲ್ಲದಿದ್ದರೂ ಎಂಟು ಗೋಲ್ ಬಾರಿಸಿದ್ದೇವೆ, ಆದ್ದರಿಂದ ನಾವು ಚೆನ್ನಾಗಿ ಆಡಿದ್ದೇವೆ ಎಂದರ್ಥ, ” ಎಂದು ಹೇಳಿದ್ದಾರೆ. ಇದೇ ವೇಳೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೆನೆಜುವೆಲಾ ಸ್ಪೆಕರ್ ಮತ್ತು ಡಿಫೆಂಡರ್‌ ನಿಶು ಕುಮಾರ್ ಇಬ್ಬರು ಬುಧವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆದಾಗ್ಯೂ ರಿನೊ ಆ್ಯಂಟೊ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. “ಇದೇನು ಅತ್ಯಂತ ಕಠಿಣ ಸ್ಥಿತಿಯೇನಲ್ಲ. ಆದರೆ ತಾಂತ್ರಿಕ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಕಾರ್ಯಪ್ರವೃತ್ತವಾಗಬೇಕಿದೆ,” ಎಂದು ಬಿಎಫ್ಸಿ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಸಿಟಿ ಎಫ್ಸಿ ವಿರುದ್ಧ 4-3-3ರಲ್ಲಿ ಹೆಣದ ಕಾರ್ಯತಂತ್ರ ಯಶಸ್ವಿಯಾಗದ ಬಗ್ಗೆ ವಿವರಿಸಿದ ಕ್ವಾಡ್ರಟ್, ಋತುವಿನ ಮೊದಲ ಹಂತದಲ್ಲಿ ನಾವು ಸಾಕಷ್ಟು ಸೂಕ್ತವಾದ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಇದೀಗ ನಾವು ದ್ವಿತೀಯ ಹಂತದಲ್ಲಿದ್ದೇವೆ. ಅಜೇಯ ದಾಖಲೆ ಎಂದಿಗೂ ಶ್ರೇಷ್ಠವಾಗಿರುತ್ತದೆ. ಆದರೆ ಇದೇ ವಿಷಯಗಳು ಪ್ರಶಸ್ತಿ ಗೆಲ್ಲಿಸುವುದಿಲ್ಲ .ಹೀಗಾಗಿ ಹೇಗೆ ಆಡಬೇಕೆಂಬುದನ್ನು ಮನದಲ್ಲಿಟ್ಟುಕೊಂಡಿರಬೇಕಾಗುತ್ತದೆ. ಖಂಡಿತಾವಾಗಿಯೂ ಫಲಿತಾಂಶ ಮತ್ತು ಟೇಬಲ್ ಸ್ಥಾನ ನಮ್ಮನ್ನು ನೋಡಿಕೊಳ್ಳುತ್ತದೆ, ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.

ನಾರ್ತ್‌ಈಸ್ಟ್ ಯುನೈಟೆಡ್ ಮುಂಬೈನ ಡಿಫೆಂಡರ್‌ ಶೆವಿಕ್ ಘೋಷ್ ಸೇರಿ ಇಬ್ಬರಿಗೆ ವಿರಾಮ ನೀಡಿದೆ. ಈ ಮಧ್ಯೆ ಗೀಕ್ ಫಾರ್ವಡ್್ರ ಆಟಗಾರ ಪಿ. ಡಿಯಾಡಿಸ್ ಅವರನ್ನು ಘಾನಾ ವಿಂಗರ್ ಆಗಸ್ಟೀನ್ ಒಕುಹಾ ಬದಲಿಗೆ ಕಣಕ್ಕಿಳಿಯಲಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ ಸ್ಟಾರ್‌ ಮತ್ತು ಜಿಯೊ ಟಿವಿಯಲ್ಲಿ ನೇರ ಪ್ರಸಾರ ಇರಲಿದೆ.